ಸೋಮವಾರಪೇಟೆ, ಏ. 25: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪರಸ್ಪರ ಮೊಕದ್ದಮೆ ದಾಖಲಾಗಿರುವ ಘಟನೆ ನಡೆದಿದೆ.
ಹಾನಗಲ್ಲು ಬಾಣೆಯಲ್ಲಿ ಇತ್ತೀಚೆಗೆ ನಡೆದ ದೇವರ ಉತ್ಸವದ ಖರ್ಚುವೆಚ್ಚದ ಸಭೆಯಲ್ಲಿ ಕುರ್ಚಿ ಒಡೆದು ಹಾಕಿದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಸ್ತಾಪಿಸಿದ್ದಕ್ಕೆ, ಗ್ರಾಮದ ನಿವಾಸಿಗಳಾದ ಚಂದ್ರ, ಸಿಂಗ, ಪುಟ್ಟ, ಗುರುವ ಮತ್ತಿತರರು ಸೇರಿಕೊಂಡು ಕತ್ತಿಯಿಂದ ಹಲ್ಲೆ ಮಾಡಿರುವದಾಗಿ ಅದೇ ಗ್ರಾಮದ ನಿವಾಸಿ ಬಿ.ಎಸ್.ಸುರೇಶ್ ದೂರು ನೀಡಿದ ಹಿನ್ನಲೆ ನಾಲ್ವರು ಆರೋಪಿಗಳ ವಿರುದ್ಧ ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಗ್ರಾಮದ ಎಚ್.ಟಿ.ಸುರೇಶ್ ಎಂಬವರು, ಗಣೇಶ್ ಮತ್ತು ಸುರೇಶ್ ಎಂಬವರ ವಿರುದ್ಧ ಹಲ್ಲೆ ಮಾಡಿದ್ದಾರೆ ಎಂದು ಪ್ರತಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ.