ಮಡಿಕೇರಿ, ಏ. 25: ಪಾಲೇಮಾಡು ವಿಚಾರವನ್ನು ಮುಂದಿಟ್ಟುಕೊಂಡು ಪದೇ ಪದೇ ಪ್ರತಿಭಟನೆ ಧರಣಿಗಳನ್ನು ನಡೆಸುವ ಮೂಲಕ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡು ವದನ್ನು ಮುಂದುವರಿಸಿದಲ್ಲಿ ಜಿಲ್ಲೆಯ ಎಲ್ಲಾ ಮೂಲ ನಿವಾಸಿಗಳ ಸಹಕಾರ ದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊದ್ದೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯ ಗಳನ್ನು ಕೈಬಿಟ್ಟು ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಂಚಾಯಿತಿಯ ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಪ್ರತಿಭಟನೆಗಳ ಮೂಲಕ ಶಾಂತಿಗೆ ಧಕ್ಕೆ ತರುತ್ತಿರುವ ಹೋರಾಟಗಾರ ಕೆ.ಮೊಣ್ಣಪ್ಪ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪಾಲೇಮಾಡಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಒದಗಿಸಿರುವ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮೊಣ್ಣಪ್ಪ ಅವರು ಸಮಾಜದ ಶಾಂತಿಗೆ ಭಂಗವನ್ನುಂಟು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪಾಲೆÉೀಮಾಡಿನಲ್ಲಿ ಕೆಲವು ನಾಮಫಲಕಗಳನ್ನು ತೆರವುಗೊಳಿಸಲು ಪೊಲೀಸ್ ನೆರವಿನೊಂದಿಗೆ ತೆರಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಹಶೀಲ್ದಾರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘÀಟನೆಯೂ ನಡೆದಿದೆ ಎಂದು ಆರೋಪಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೆÉೀಶ್ ಮಾತನಾಡಿ, ಕಳೆದ ಆರು ತಿಂಗಳಿನಿಂದ ಪಾಲೇಮಾಡು

(ಮೊದಲ ಪುಟದಿಂದ) ವಿಚಾರದ ಸಂಘರ್ಷಗಳಿಂದ ಗ್ರಾಮ ಪಂಚಾಯಿತಿ ಬಲಿಪಶುವಾಗುವಂತಾಗಿದೆ. ಕುಡಿಯುವ ನೀರು, ವಿದ್ಯುದೀಕರಣ, ಪಟ್ಟೆ ನೀಡುವಂತಹ ಕೆಲಸಗಳು ಸರ್ಕಾರದಿಂದ ನಡೆಯಬೇಕಾಗಿದೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ಪಾಲೇಮಾಡು ನಿವಾಸಿಗಳು ಪಂಚಾಯಿತಿ ವಿರುದ್ಧ ನಡೆಸುವ ಹೋರಾಟಗಳಿಂದ ಆಡಳಿತ ನಡೆಸುವುದಕ್ಕೆ ಅಡಚಣೆÉಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳುವ ಮೂಲಕ ಅಲ್ಲಿನ ನಿವಾಸಿಗಳಿಗೆ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.

ಮಡಿಕೆÉೀರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಪಾಲೆÉೀಮಾಡು ಸಮಸ್ಯೆ ಬಗೆಹರಿಕೆಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಅವರೊಂದಿಗೆ ಚರ್ಚಿಸಿದ್ದೇನೆ. ನಿಯಮಗಳ ಅನ್ವಯ ನವಗ್ರಾಮ ಯೋಜನೆ ಜಾರಿಗೆ ಅವಕಾಶವಿದೆ. ಆದರೆ, ಪಾಲೇಮಾಡಿನಲ್ಲಿ ನಾಯಕನೆಂದು ಗುರುತಿಸಿಕೊಂಡಿರುವ ವ್ಯಕ್ತಿ ಇದಕ್ಕೆ ಸಮ್ಮತಿ ವ್ಯಕ್ತಪಡಿಸುತ್ತಿಲ್ಲ. ತಮಗೆ ಅಕ್ರಮ ಸಕ್ರಮದಡಿಯೇ ಜಾಗ ಒದಗಿಸುವಂತೆ ಆಗ್ರಹಿಸುತ್ತಿರುವದಾಗಿ ಬೇಸರ ವ್ಯಕ್ತಪಡಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಅಜಯ್ ಕುಮಾರ್ ಮಾತನಾಡಿ, ಪಾಲೇಮಾಡಿನ ನಿವಾಸಿಗಳು ಹಕ್ಕುಪತ್ರದ ಒಂದು ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಬೇಕೇ ಹೊರತು, ನಾಮಫಲಕ ಅಥವಾ ಬೇರಾವುದೋ ವಿಚಾರಗಳನ್ನು ಮುಂದಿಟ್ಟುಕೊಂಡು ವಿನಾಕಾರಣ ಹೋರಾಟ ನಡೆಸುವ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡಬಾರದೆಂದು ಒತ್ತಾಯಿಸಿದರು.

ಪಾಲೇಮಾಡಿನಲ್ಲಿ ನೆಲೆ ನಿಂತಿರುವ ನೈಜ ನಿರಾಶ್ರಿತರಿಗೆ ತಲಾ 5 ಸೆಂಟ್ ಜಾಗ ಹಂಚಿಕೆಗೆ ನಮ್ಮ ಬೆಂಬಲವೂ ಇದ್ದು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲು ಸಿದ್ಧವೆಂದು ಸ್ಪಷ್ಟಪಡಿಸಿದರು. ಹಕ್ಕು ಪತ್ರ ನೀಡುವ ಹಕ್ಕು ಗ್ರಾಮ ಪಂಚಾಯಿತಿಗೆ ಇಲ್ಲ ಎನ್ನುವ ಮಾಹಿತಿ ಇದ್ದರು ಕೆಲವು ಹೋರಾಟಗಾರರು ವಿನಾಕಾರಣ ಗ್ರಾಮ ಪಂಚಾಯ್ತಿಯನ್ನು ದೂಷಿಸುವುದು ಸರಿಯಾದ ಕ್ರಮವಲ್ಲ. ದಿಡ್ಡಳ್ಳಿ ವಿಚಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿದ ಈ ಮುಖಂಡರುಗಳು ತಮ್ಮ ಪ್ರಭಾವ ಬಳಸಿ ಮುಖ್ಯಮಂತ್ರಿಗಳಿಂದಲೇ ಹಕ್ಕು ಪತ್ರವನ್ನು ಪಡೆಯಲಿ ಎಂದು ಅಜಯ್ ಕುಮಾರ್ ಹೇಳಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಿಗೆ ಮೂರ್ನಾಡು ಎಂ. ಬಾಡಗದಲ್ಲಿ ನಿವೇಶನ ಮತ್ತು ಮನೆ ಇದೆ. ಇಂತಹವರಿಗೆ ಪಾಲೆÉೀಮಾಡಿನಲ್ಲಿ ಜಾಗ ನೀಡದೆ, ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ಮುಂದಾಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ನೆರವಂಡ ನಂಜಪ್ಪ ಹಾಗೂ ವಿಎಸ್‍ಎಸ್‍ಎನ್ ಅಧ್ಯಕ್ಷ ಸಂಜಯ್ ಉಪಸ್ಥಿತರಿದ್ದರು.