ಮಡಿಕೇರಿ, ಏ. 26: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ಕೆದಂಬಾಡಿ, ಕೊಂಬನ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಕುದುಪಜೆ ತಂಡ 3 ವಿಕೆಟ್‍ಗೆ 52 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಸುಳ್ಯಕೋಡಿ ತಂಡ 2 ವಿಕೆಟ್‍ಗೆ 53 ರನ್‍ಗಳಿಸಿ 8 ವಿಕೆಟ್‍ಗಳ ಜಯ ದಾಖಲಿಸಿತು. ಬೈಮನ ತಂಡವು 5 ವಿಕೆಟ್‍ಗೆ 60 ರನ್ ಗಳಿಸಿದರೆ, ಎದುರಾಳಿ ಕುಂಚಡ್ಕ ತಂಡವು 5 ವಿಕೆಟ್‍ಗೆ 51 ರನ್ ಗಳಿಸಿ ಸೋಲನುಭವಿಸಿತು. ದೇವಾಯಿರ ತಂಡವು 1 ವಿಕೆಟ್‍ಗೆ 101 ರನ್ ಗಳಿಸಿದರೆ, ಮಿತ್ತೂರು ತಂಡವು 4 ವಿಕೆಟ್‍ಗೆ 51 ರನ್‍ಗಳ ಸೋಲನುಭವಿಸಿತು. ದೇವಾಯಿರ ತಂಡದ ಪರ ಅರುಣ 42, ಚೇತನ್ 36 ರನ್ ಗಳಿಸಿದರು.
ಬೈಲೋಳಿ ತಂಡ 5 ವಿಕೆಟ್‍ಗೆ 53 ಬಾರಿಸದರೆ, ಆಯ್ಯೆಟಿ ತಂಡ 2 ವಿಕೆಟ್‍ಗೆ 54 ರನ್ ಗಳಿಸಿ, 8 ವಿಕೆಟ್‍ಗಳ ಜಯ ದಾಖಲಿಸಿತು.
ಮಂಞಪುರ ತಂಡವು 4 ವಿಕೆಟ್‍ಗೆ 42 ರನ್ ಬಾರಿಸಿದರೆ, ತೋರೆರ ತಂಡವು 4 ವಿಕೆಟ್‍ಗೆ 43 ರನ್ ಬಾರಿಸಿ 6 ವಿಕೆಟ್‍ಗಳ ಜಯ ದಾಖಲಿಸಿತು.
ಕೊಂಬನ ತಂಡವು 8 ವಿಕೆಟ್‍ಗೆ 37 ರನ್ ಬಾರಿಸಿದರೆ, ಚೋಂಡಿರ 4 ವಿಕೆಟ್‍ಗೆ 25 ರನ್ ಬಾರಿಸಿ ಸೋಲನುಭವಿಸಿತು.
ಬಾಕಿಲನ ತಂಡವು 4 ವಿಕೆಟ್‍ಗೆ 56 ರನ್ ಗಳಿಸಿದರೆ, ಬೈಮನ 3 ವಿಕೆಟ್‍ಗೆ 59 ರನ್ ಬಾರಿಸಿ ಜಯ ದಾಖಲಿಸಿತು.
ಕೊಡೆಕಲ್ ತಂಡವು 6 ವಿಕೆಟ್ 49 ಬಾರಿಸಿದರೆ, ತೋರೆರ ತಂಡವು 2 ವಿಕೆಟ್‍ಗೆ 53 ರನ್ ಗಳಿಸಿ ಜಯ ದಾಖಲಿಸಿತು.
ದೇವಾಯಿರ ತಂಡವು 8 ವಿಕೆಟ್‍ಗೆ 50 ಬಾರಿಸಿದರೆ, ಹುಲಿಮನೆ ತಂಡವು 1 ವಿಕೆಟ್‍ಗೆ 51 ರನ್ ಗಳಿಸಿ 9 ವಿಕೆಟ್‍ಗಳ ಜಯ ದಾಖಲಿಸಿತು