ಮಡಿಕೇರಿ, ಏ. 26: ವಿಶ್ವ ಬಸವ ಜಯಂತಿ ಸುವರ್ಣ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಬಸವ ಸಮಿತಿ ವತಿಯಿಂದ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಬಸವಣ್ಣನವರ 2500 ವಚನಗಳನ್ನು ಒಳಗೊಂಡ ಬಹುಭಾಷಾ ವಚನಾನುವಾದ ಯೋಜನೆಯಡಿ ಹಲವು ಭಾಷೆಯಲ್ಲಿ ಸಂಕಲನ ಹೊರತರಲಾಗುತ್ತಿದೆ. 23 ಭಾಷೆಗಳಲ್ಲಿ ವಚನ ಅನುವಾದಗೊಂಡಿದ್ದು, ಇದರ ಪೈಕಿ ಕೊಡವ ಭಾಷೆಯೂ ಒಂದಾಗಿದೆ. ಕೊಡವ ಭಾಷೆಯಲ್ಲಿ ಡಾ. ಎಂ.ಪಿ. ರೇಖಾ ವಸಂತ್ ಅವರ ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಕಲನ ತಯಾರಾಗಿದೆ. ಇವರೊಂದಿಗೆ ಅನುವಾದಕರಾಗಿ ಸಾಹಿತಿಗಳಾದ ನಾಗೇಶ್ ಕಾಲೂರು, ಬಾಚರಣಿಯಂಡ ಅಪ್ಪಣ್ಣ, ಸಿ.ಎಂ. ರೇವತಿ, ರಾಣು ಅಪ್ಪಣ್ಣ ಅವರುಗಳು ಕೆಲಸ ನಿರ್ವಹಿಸಿದ್ದಾರೆ. 23 ಭಾಷೆಗಳಲ್ಲಿ ಅನುವಾದಿತಗೊಂಡಿರುವ ವಚನ ಸಂಕಲನದ ಬಿಡುಗಡೆ ಸಮಾರಂಭ ಬಸವ

(ಮೊದಲ ಪುಟದಿಂದ) ಜಯಂತಿಯ ದಿನವಾದ ತಾ. 29ರಂದು ನವದೆಹಲಿಯಲ್ಲಿ ಒಟ್ಟಿಗೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದು, ಆಯಾ ಭಾಷೆಗಳ ಪ್ರಧಾನ ಸಂಪಾದಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಂತೆ ಕೊಡವ ಭಾಷೆಯ ಪ್ರಧಾನ ಸಂಪಾದಕರಾದ ರೇಖಾ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಐದು ನಿಮಿಷದ ಅವಧಿಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಲೂ ಇವರಿಗೆ ಅವಕಾಶವಿದೆ.