ನಾಪೋಕ್ಲು, ಏ. 25: ಕೇಂದ್ರ ಸರಕಾರ ನೀಡುವ ಸಶಕ್ತೀಕರಣ ರಾಷ್ಟ್ರಪ್ರಶಸ್ತಿಗೆ ದ.ಕ. ಗಡಿ ಪ್ರದೇಶದಲ್ಲಿರುವ ಕೊಡಗಿನ ಸಂಪಾಜೆ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಪ್ರಶಸ್ತಿ ಸ್ವೀಕರಿಸಿ ತಾ. 26 ರಂದು (ಇಂದು) ಆಗಮಿಸುತ್ತಿರುವ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ಸ್ವಾಗತಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ.ಡಿ.ಒ. ಅವರು ತಾ.26ರಂದು (ಇಂದು) ಗ್ರಾಮಕ್ಕೆ ಬರಲಿದ್ದಾರೆ. ಪ್ರಶಸ್ತಿಯ ಜತೆಗೆ ಅವರನ್ನು ಕೊಯನಾಡು ದೇವಸ್ಥಾನದ ಬಳಿಯಿಂದ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದೆ. ಪ್ರಶಸ್ತಿಯು 25 ಲಕ್ಷ ರೂ. ಅನುದಾನ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.
-ದುಗ್ಗಳ ಸದಾನಂದ