ಮಡಿಕೇರಿ, ಏ. 26: ಗ್ರೀನ್ ಮೌಂಟೇನ್ ಕಾಲೇಜಿನಲ್ಲಿ ಸಂಭ್ರಮ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿಸುತ್ತಿದ್ದರು. ತಾ. 8 ರಂದು ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಲಾಯಿತು.

ದೀಪ ಬೆಳಗುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನೇರ್ಪಡಿಸಿ, ಕಾಲೇಜಿನ ಪ್ರಾಂಶುಪಾಲೆ ಸಿ.ಯು. ಲೀನಾ ಸಂಪ್ರದಾಯದ ಮಹತ್ವದ ಬಗ್ಗೆ ಮಾತನಾಡಿ, ಸ್ಪರ್ಧೆಯ ವಿಜೇತÀರಿಗೆ ಬಹುಮಾನ ವಿತರಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಮಮತ ಮತ್ತು ತಂಡದವರು ಪ್ರಾರ್ಥಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಮೊಹಮ್ಮದ್ ರಫೀóಕ್ ವಂದಿಸಿ, ದ್ವಿತೀಯ ಬಿ.ಕಾಂ.ನ ಲಾಂಚಿತಾ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.