ನಾಪೆÇೀಕ್ಲು, ಏ. 26: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಹತ್ತನೇ ದಿನದ ಪಂದ್ಯಾಟದಲ್ಲಿ ಭಾರತೀಯ ಹಾಕಿ ತಂಡದ ಆಟಗಾರ ಬಲ್ಲಚಂಡ ಲೆನ್ ಅಯ್ಯಪ್ಪ ತನ್ನ ತಂಡದ ಪರ ಆಡುವದರ ಮೂಲಕ ಎಲ್ಲರ ಗಮನ ಸೆಳೆದರು. ಹಾಕಿ ನಮ್ಮೆ ಹತ್ತು ದಿನ ಪೂರೈಸಿದ್ದು, ಬುಧವಾರ ನಡೆದ ಪಂದ್ಯಾಟದಲ್ಲಿ ಕಾಂಡಂಡ, ಪರದಂಡ, ಪಳಂಗಂಡ, ಉದಿಯಂಡ, ಮಂಡೇಪಂಡ, ಮೇಕೇರಿರ, ಚೇಂದಿರ, ಬಲ್ಲಚಂಡ, ಪಾಂಡಂಡ, ಕರ್ತಮಾಡ (ಬಿರುನಾಣಿ), ಇಟ್ಟಿರ, ಮಲ್ಲಮಾಡ, ಬೊಳ್ಳಂಡ, ಚೆರುಮಂದಂಡ, ಬಯವಂಡ, ಕೊಂಗೇಟಿರ, ಮಾಚಂಗಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಮಾಜಿ ಚಾಂಪಿಯನ್ ಪಳಂಗಂಡ ಮತ್ತು ಕಬ್ಬಚ್ಚಿರ ತಂಡಗಳ ನಡುವಿನ ಸೆಣೆಸಾಟದಲ್ಲಿ ಪಳಂಗಂಡ ತಂಡವು ಕಬ್ಬಚ್ಚಿರ ತಂಡವನ್ನು 4-0 ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಪಳಂಗಂಡ ತಂಡದ ಪರ ಮುತ್ತಣ್ಣ ಎರಡು ಅಮರ್ ಅಯ್ಯಮ್ಮ, ಪ್ರಧಾನ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕಾಂಡಂಡ ಮತ್ತು ಬೊಳಕಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡಂಡ ತಂಡವು 4-1 ಗೋಲಿನ ಅಂತರದಿಂದ ಬೊಳಕಾರಂಡ ತಂಡವನ್ನು ಸೋಲಿಸಿತು. ಬೊಳಕಾರಂಡ ತಂಡದ ಪರ ಶರವಣ್ ಚಂಗಪ್ಪ ಒಂದು ಗೋಲು ದಾಖಲಿಸಿದರೆ, ಕಾಂಡಂಡ ತಂಡದ ಪರ ಪ್ರೀತಂ ಪೂಣಚ್ಚ ಎರಡು, ಅನಿಲ್ ಚಂಗಪ್ಪ, ಈರಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು.

ಪರದಂಡ ಮತ್ತು ಪಟ್ಟಚೆರುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಪರದಂಡ ತಂಡವು 1-0 ಗೋಲಿನ ಅಂತರದಿಂದ ಪಟ್ಟಚೆರವಂಡ ತಂಡವನ್ನು ಮಣಿಸಿತು. ಪರದಂಡ ತಂಡದ ಪರ ರಂಜನ್ ಒಂದು ಗೋಲು ದಾಖಲಿಸಿದರು. ಕರ್ತಮಾಡ (ಬಿರುನಾಣಿ) ಮತ್ತು ತೀತಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡವು 2-0 ಗೋಲಿನಿಂದ ತೀತಿಮಾಡ ತಂಡವನ್ನು ಪರಾಭವಗೊಳಿಸಿತು. ಕರ್ತಮಾಡ ತಂಡದ ಪರ ರಾಕೇಶ್, ಮೋಹನ್ ತಲಾ ಒಂದೊಂದು ಗೋಲು ದಾಖಲಿಸಿದರು. ಉದಿಯಂಡ ಮತ್ತು ಅಲ್ಲಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಉದಿಯಂಡ ತಂಡವು ಅಲ್ಲಾರಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಉದಿಯಂಡ ತಂಡದ ಪರ ಚಂಗಪ್ಪ, ಸುಬ್ಬಯ್ಯ, ಜಗದೀಶ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಂಡೇಪಂಡ ಮತ್ತು ಮುಕ್ಕಾಟಿರ (ಬೋಂದಾ) ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಪಂಡ ತಂಡವು 7-1 ಗೋಲಿನ ಅಂತರದಿಂದ ಮುಕ್ಕಾಟಿರ ತಂಡವನ್ನು ಮಣಿಸಿತು.

ಮಂಡೇಪಂಡ ತಂಡದ ಪರ ದಿಲನ್ ದೇವಯ್ಯ ಹ್ಯಾಟ್ರಿಕ್ ಮೂರು, ಸಜನ್ ಅಚ್ಚಯ್ಯ ಮೂರು ಹಾಗೂ ಬೋಪಣ್ಣ ಒಂದು ಗೋಲು ದಾಖಲಿಸಿದರು. ಮುಕ್ಕಾಟಿರ ತಂಡದ ಪರ ಆದಿತ್ಯ ಒಂದು ಗೋಲು ದಾಖಲಿಸಿದರು. ಮೇಕೇರಿರ ಮತ್ತು ಬೊಳಿಯಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮೇಕೇರಿರ ತಂಡವು 5-0 ಗೋಲಿನಿಂದ ಬೊಳಿಯಾಡಿರ ತಂಡವನ್ನು ಪರಾಭವಗೊಳಿಸಿತು. ಮೇಕೇರಿರ ತಂಡದ ಪರ ಅಭಿನವ್ ಗಣಪತಿ, ಚೇತನ್ ಸುಬ್ರಮಣಿ, ನಿತಿನ್ ತಿಮ್ಮಯ್ಯ, ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಚೇಂದಿರ ಮತ್ತು ತಡಿಯಂಗಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೇಂದಿರ ತಂಡವು 4-0 ಗೋಲಿನಿಂದ ತಡಿಯಂಗಡ ತಂಡವನ್ನು ಪರಾಭವಗೊಳಿಸಿತು. ಚೇಂದಿರ ತಂಡದ ಪರ ವಿನು ಬೋಪಯ್ಯ ಎರಡು, ಮಂಜು, ಪುನೀತ್ ಪೆÇನ್ನಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು.

ಚೆಯ್ಯಂಡ ಮತ್ತು ಬಲ್ಲಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಲ್ಲಚಂಡ ತಂಡವು 4-2 ಅಂತರದಿಂದ ಚೆಯ್ಯಂಡ ತಂಡವನ್ನು ಮಣಿಸಿತು. ಚೆಯ್ಯಂಡ ತಂಡದ ಪರ ಶಂಕರಿ, ನಂದಾ ನಾಚಪ್ಪ ಒಂದೊಂದು ಗೋಲು ದಾಖಲಿಸಿದರೆ, ಬಲ್ಲಚಂಡ ತಂಡದ ಪರ ಆಶಿಶ್ ಎರಡು, ಅಧ್ವೈತ್ ಮತ್ತು ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಪಾಂಡಂಡ ಮತ್ತು ಕಂಬೆಯಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಪಾಂಡಂಡ ತಂಡವು 3-1 ಗೋಲಿನಿಂದ ಕಂಬೆಯಂಡ ತಂಡವನ್ನು ಪರಾಭವಗೊಳಿಸಿತು. ಕಂಬೆಯಂಡ ತಂಡದ ಪರ ಶಶಿ ನಾಣಯ್ಯ ಒಂದು ಗೋಲು ದಾಖಲಿಸಿದರೆ, ಪಾಂಡಂಡ ತಂಡದ ಪರ ವಚನ್ ನಾಣಯ್ಯ ಎರಡು, ಮತ್ತು ಚರಣ್ ಚಂಗಪ್ಪ ಒಂದು ಗೋಲು ದಾಖಲಿಸಿದರು.

ಮಂಡಿರ ಮತ್ತು ಇಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಇಟ್ಟಿರ ತಂಡವು 5-1 ಗೋಲಿನಿಂದ ಮಂಡಿರ ತಂಡವನ್ನು ಸೋಲಿಸಿತು. ಮಲ್ಲಮಾಡ ಮತ್ತು ಚಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಮಾಡ ತಂಡವು 2-0 ಗೋಲಿನಿಂದ ಚಪ್ಪಂಡ ತಂಡವನ್ನು ಪರಾಭವಗೊಳಿಸಿತು. ಮಲ್ಲಮಾಡ ಬಿದ್ದಪ್ಪ, ಕರುಂಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಅಪ್ಪಂಡೇರಂಡ ಮತ್ತು ಚೆರುಮಂದಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುಮಂದಂಡ ತಂಡವು 3-1 ಗೋಲಿನಿಂದ ಅಪ್ಪಂಡೇರಂಡ ತಂಡವನ್ನು ಮಣಿಸಿತು. ಚೆರುಮಂದಂಡ ತಂಡದ ಪರ ಕವನ್ ಕಾರ್ಯಪ್ಪ, ಪ್ರತೀಕ್ ಪೂವಯ್ಯ, ಅಚ್ಚಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಪ್ಪಂಡೇರಂಡ ತಂಡದ ಪರ ತಿಮ್ಮಯ್ಯ ಒಂದು ಗೋಲು ದಾಖಲಿಸಿದರು.

ಚೊಟ್ಟೆಯಂಡ ಮತ್ತು ಬೊಳ್ಳಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಬೊಳ್ಳಂಡ ತಂಡವು 1-0 ಗೋಲಿನಿಂದ ಚೊಟ್ಟೆಯಂಡ ತಂಡವನ್ನು ಪರಾಭವಗೊಳಿಸಿತು. ಬೊಳ್ಳಂಡ ತಂಡದ ಪರ ನಿರನ್ ಒಂದು ಗೋಲು ದಾಖಲಿಸಿದರು. ನಡಿಕೇರಿಯಂಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೊಂಗೇಟಿರ ತಂಡವು 4-0 ಗೋಲಿನಿಂದ ನಡಿಕೇರಿಯಂಡ ತಂಡವನ್ನು ಪರಾಭವಗೊಳಿಸಿತು. ಕೊಂಗೇಟಿರ ತಂಡದ ಪರ ನೀಲೇಶ್ ಎರಡು, ಸ್ವಾನ್, ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಚಂಗಡ ಮತ್ತು ಕಲ್ಯಾಟಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮಾಚಂಗಡ ತಂಡವು 3-1 ಗೋಲಿನ ಅಂತರದಿಂದ ಕಲ್ಯಾಟಂಡ ತಂಡವನ್ನು ಪರಾಭವಗೊಳಿಸಿತು. ಕಲ್ಯಾಟಂಡ ತಂಡದ ಪರ ಶರಣು ಒಂದು ಗೋಲು ದಾಖಲಿಸಿದರೆ, ಮಾಚಂಗಡ ತಂಡದ ಪರ ದರ್ಶನ್ ಪೂವಯ್ಯ ಒಂದು, ಅಯ್ಯಪ್ಪ ಎರಡು ಗೋಲು ದಾಖಲಿಸಿದರು.

- ಪಿ. ವಿ. ಪ್ರಭಾಕರ್