ಸಿದ್ದಾಪುರ, ಏ. 27: ಕರಿಮೆಣಸು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಕಣ್ಣಂಗಾಲ ಹಚ್ಚಿನಾಡು ಗ್ರಾಮದ ಬೇರೆರ ಮಹೇಂದ್ರ (ರಂಜು) ಎಂಬವರ ಗೋದಾಮಿನಿಂದ ಹೆಂಚನ್ನು ತೆಗೆದು, ಒಳನುಗ್ಗಿ ಸುಮಾರು 2 ಲಕ್ಷ ಮೌಲ್ಯದ 210 ಕೆ.ಜಿ ಕರಿಮೆಣಸನ್ನು ಕಳ್ಳತನ ಮಾಡಿದ್ದು, ಇಲ್ಲಿನ ಕೆಲ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ.

ಮಹೇಂದ್ರ ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರನ್ನು ಆಧರಿಸಿ , ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ಗುಹ್ಯ ಗ್ರಾಮದ ವೈ.ಎಂ ದಿಲೀಪ್, ವೈ.ಆರ್. ಕಿಶೋರ್ ವೈ.ಎಂ. ತಮ್ಮಯ್ಯ ಹಾಗೂ ಸುಧಿ ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕಳೆದ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಮಹೇಂದ್ರ ಅವರ ಗೋದಾಮಿ ನಿಂದ ಕರಿಮೆಣಸನ್ನು ಕಳವು ಮಾಡಿದ್ದಾರೆ. ಇದೀಗ ಕರಿಮೆಣಸನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ವೃತ್ತ ನಿರೀಕ್ಷಕ ಮೇದಪ್ಪ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣಾಧಿಕಾರಿ ಜಿ.ಕೆ ಸುಬ್ರಮಣ್ಯ, ಎ.ಎಸ್.ಐ ಸೀತಾರಾಂ, ಸಿಬ್ಬಂದಿಗಳಾದ ಲವ, ಲಕ್ಷ್ಮೀಕಾಂತ್, ಚಾಲಕ ಪೂವಯ್ಯ ಪಾಲ್ಗೊಂಡಿದ್ದರು.

-ಎ.ಎನ್ ವಾಸು