ಮಡಿಕೇರಿ, ಏ.27 : ಪಾಲೇಮಾಡಿನ ಹೋರಾಟದ ಬಗ್ಗೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸಂಘ ಪರಿವಾರ ಇಲ್ಲ ಸಲ್ಲದ ಆರೋಪ ಗಳನ್ನು ಮಾಡುತ್ತಿದ್ದು, ಅಂಬೇಡ್ಕರ್ ಜಯಂತಿ ನಂತರ ನಡೆದ ದೌರ್ಜನ್ಯಕ್ಕೆ ಸಂಘ ಪರಿವಾರ, ಪೊಲೀಸ್ ಇಲಾಖೆ ಹಾಗೂ ಪಿಡಿಒ ಕಾರಣವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ನೋಟಿಸ್ ನೀಡಿ ನಾಮಫಲಕಗಳನ್ನು ತೆರವುಗೊಳಿಸದೆ ಏಕಾಏಕಿ ಧಾಳಿ ನಡೆಸಿರುವದು ಖಂಡನೀಯವೆಂದರು. ಜಿಲ್ಲೆÉಯಲ್ಲಿ ಭೂ ಮಾಲೀಕರು ಸರ್ಕಾರದ ಏಕರೆ ಗಟ್ಟಲೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ಬಡವರು ಆಶ್ರಯ ಪಡೆದಿರುವ ಸಣ್ಣಪುಟ್ಟ ಜಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆ. ಮೊಣ್ಣಪ್ಪ ಅವರನ್ನು ಗಡೀಪಾರು ಮಾಡುವ ಬದಲು ಸಂಘ ಪರಿವಾರದವರನ್ನು ಗಡೀಪಾರು ಮಾಡಬೇಕೆಂದು ನಿರ್ವಾಣಪ್ಪ ಒತ್ತಾಯಿಸಿದರು. ಮೇ2 ಮತ್ತು 3 ರಂದು ನಡೆಯುವ ಕಾಲ್ನಡಿಗೆ ಜಾಥಾಕ್ಕೆ ಬೆಂಬಲ ನೀಡುವದಾಗಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ದಲಿತರ ವಿರುದ್ಧ ಹೇಳಿಕೆ ನೀಡಿದ್ದು, ಇವರುಗಳು ಬಂಡವಾಳಶಾಹಿಗಳ ಪರವಾಗಿದ್ದಾರೆ ಎಂದು ನಿರ್ವಾಣಪ್ಪ ಆರೋಪಿಸಿದರು.

ಸಮಿತಿಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಡಾ| ಅಂಬೇಡ್ಕರ್ ಜಯಂತಿ ಸಂದರ್ಭ ಕಳೆದ 8 ವರ್ಷಗಳಿಂದ ಪಾಲೇಮಾಡು ನಿವಾಸಿಗಳು ನಾಮ ಫಲಕ ಅಳವಡಿಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಕಾನೂನು ತಿಳಿಯದ ಗ್ರಾಮ ಪಂಚಾಯ್ತಿ ದುಷ್ಟ ಶಕ್ತಿಗಳ ಕೈವಾಡಕ್ಕೆ ಮಣಿದು ದೌರ್ಜನ್ಯ ನಡೆಸಿದೆ ಎಂದು ಟೀಕಿಸಿದರು. ಕಳೆದ 10 ವರ್ಷಗಳಿಂದ ಪಾಲೇಮಾಡಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡದಿರು ವದು ಖಂಡನೀಯವೆಂದರು.

ಪ್ರಗತಿಪರ ಚಿಂತಕರ ವೇದಿಕೆಯ ಅಲ್ಲಾರಂಡ ವಿಠÀಲ್ ನಂಜಪ್ಪ ಮಾತನಾಡಿ, ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ ನಾಗಿದ್ದನಲ್ಲದೆ, ಕೃಷಿ ಚಟುವಟಿಕೆಗೂ ಉತ್ತೇಜನ ನೀಡಿದ್ದ ಎಂದು ಸಮರ್ಥಿಸಿಕೊಂಡರು. ಇಂತಹ ವ್ಯಕ್ತಿತ್ವದ ಟಿಪ್ಪುವನ್ನು ವಿರೋಧಿಸುವ ವರಿಗೆ ಧಿಕ್ಕಾರವಿದೆ ಎಂದರು. ಸುದ್ದಿಗೊಷ್ಠಿಯಲ್ಲಿ ನಗರಸಭಾ ಸದಸ್ಯ ಮನ್ಸೂರ್ ಹಾಗೂ ಪ್ರಮುಖರಾದ ಬಸವರಾಜು ಉಪಸ್ಥಿತರಿದ್ದರು.