ಗೋಣಿಕೊಪ್ಪಲು, ಏ. 27: ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್‍ನಲ್ಲಿ 12 ತಂಡಗಳು ಗೆಲುವು ಪಡೆಯುವ ಮೂಲಕ ಮುನ್ನಡೆ ಸಾಧಿಸಿವೆ.

ಚೋನೀರ ತಂಡ ಕಚ್ಚಪನ್ನೇರ ತಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಚೋನೀರ 1 ವಿಕೆಟ್‍ಗೆ 65 ರನ್ ಬಾರಿಸಿತು. ಕಚ್ಚಪ್ಪನ್ನೇರ 7 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತು. ಕಚ್ಚಪನ್ನೇರ ಶಶಾಂಕ್ 20 ರನ್ ಪಂದ್ಯ ಪುರುಷರಾದರು.

ಮುಕ್ಕಾಟೀರ (ಹರಿಹರ) ಕೊಡಂದೇರ ವಿರುದ್ಧ 6 ವಿಕೆಟ್ ಜಯ ಸಾಧಿಸಿತು. ಕೊಡಂದೇರ 1 ವಿಕೆಟ್ ನಷ್ಟಕ್ಕೆ 62 ರನ್, ಮುಕ್ಕಾಟೀರ 4 ವಿಕೆಟ್ ನಷ್ಟಕ್ಕೆ ಗೆಲುವು ಪಡೆಯಿತು. ಕೊಡಂದೇರ ತಮನ್ 20 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಪ್ಪಾರಂಡ ಅಜ್ಜಮಕ್ಕಡ ವಿರುದ್ಧ 14 ರನ್‍ಗಳ ಗೆಲುವು ಪಡೆಯಿತು. ಅಜ್ಜಮಕ್ಕಡ 3 ವಿಕೆಟ್‍ಗೆ 61 ರನ್ ಸೇರಿಸಿತು, ಅಪ್ಪಾರಂಡ 7 ವಿಕೆಟ್‍ಗಳ ಗೆಲುವು ಸಾಧಿಸಿತು. ಅಜ್ಜಮಕ್ಕಡ ಪ್ರವೀಣ್ 14 ರನ್ ಬಾರಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ನಂಬುಡುಮಾಡ ಮುದ್ದುರ ತಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಮುದ್ದುರ 5 ವಿಕೆಟ್‍ಗೆ 53 ರನ್, ನಂಬುಡುಮಾಡ 1 ವಿಕೆಟ್ ನಷ್ಟಕ್ಕೆ 56 ರನ್ ಸೇರಿಸಿತು. ಮುದ್ದುರ ದಿಲಿಪ್ 15 ರನ್ ಮೂಲಕ ಪಂದ್ಯ ಶ್ರೇಷ್ಠರಾದರು.

ಮುಕ್ಕಾಟೀರ (ಬೇತ್ರಿ) ಗೈರಿನಿಂದ ಪಟ್ಟಮಾಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮಾಚಂಗಡ ತಂಡವು ಆಟ್ರಂಗಡವನ್ನು 18 ರನ್‍ಗಳಿಂದ ಸೋಲಿಸಿತು. ಮಾಚಂಗಡ ರೋಶನ್ ಹೊಡೆದ 22 ರನ್‍ಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 78 ರನ್ ಸೇರಿಸಿತು. ಆಟ್ರಂಗಡ 9 ವಿಕೆಟ್‍ಗೆ 60 ರನ್ ದಾಖಲಿಸಿತು. ಆಟ್ರಂಗಡ ಶರತ್ 19 ರನ್ ಸೇರಿಸಿ ಪಂದ್ಯ ಶ್ರೇಷ್ಠರಾದರು.

ದೇಯಂಡ, ಅಡ್ಡೇಂಗಡ ವಿರುದ್ಧ 1 ರನ್‍ಗಳ ಗೆಲುವು ಪಡೆಯಿತು. ದೇಯಂಡ 3 ವಿಕೆಟ್‍ಗೆ 72 ರನ್, ಅಡ್ಡೇಂಗಡ 8 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿ 1 ರನ್‍ನಿಂದ ಸೋಲನುಭವಿಸಿತು. ಅಡ್ಡೇಂಗಡ ಆಕಾಶ್ 30 ರನ್ ಬಾರಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಮರುವಂಡ ತಂಡವು ತೀತೀರ (ಹರಿಹರ) ವಿರುದ್ಧ 8 ವಿಕೆಟ್ ಗೆಲುವು ಪಡೆಯಿತು. ತೀತೀರ 3 ವಿಕೆಟ್‍ಗೆ 69 ರನ್, ಮರುವಂಡ 2 ವಿಕೆಟ್ ನಷ್ಟಕ್ಕೆ 75 ರನ್ ಸಿಡಿಸಿತು. ತೀತೀರ ಟಿಂಕು 32 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ಚೇರಂಡ ತಂಡವು ಕುಲ್ಲೇಟೀರವನ್ನು 3 ವಿಕೆಟ್‍ಗಳಿಂದ ಮಣಿಸಿತು. ಕುಲ್ಲೇಟೀರ 3 ವಿಕೆಟ್‍ಗೆ 64 ರನ್, ಚೇರಂಡ 7 ವಿಕೆಟ್ ನಷ್ಟಕ್ಕೆ 65 ರನ್ ಪೇರಿಸಿತು. ಕುಲ್ಲೇಟೀರ ಯತಿನ್ 17 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು

ಚೇಂದೀರ ಕೇಚಮಾಡ ವಿರುದ್ಧ 10 ವಿಕೆಟ್ ಗೆಲುವು ಪಡೆಯಿತು. ಕೇಚಮಾಡ 5 ವಿಕೆಟ್ ನಷ್ಟಕ್ಕೆ 36 ರನ್, ಚೇಂದೀರ 4.5 ಓವರ್‍ಗಳಲ್ಲಿ ಗೆಲುವು ಪಡೆಯಿತು. ಕೇಚಮಾಡ ರಾಕೇಶ್ 13 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ಮೂಕೊಂಡ ತಂಡವು ಅಚ್ಚಕಾಳೇರ ವಿರುದ್ದ 69 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಮೂಕೊಂಡ ಅಜಿತ್ ಬಾರಿಸಿದ 69 ರನ್‍ಗಳಿಂದ 3 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ಅಚ್ಚಕಾಳೇರ 4 ವಿಕೆಟ್‍ಗೆ 42 ರನ್ ಸೇರಿಸಿತು. ಅಚ್ಚಕಾಳೇರ ಬೋಪಣ್ಣ 15 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಮಲ್ಲೇಂಗಡ ತಂಡವು ಮೂವೇರ ವಿರುದ್ದ 48 ರನ್‍ಗಳ ಗೆಲುವು ದಾಖಲಿಸಿತು. ಮಲ್ಲೇಂಗಡ 2 ವಿಕೆಟ್‍ಗೆ 109 ರನ್, ಮಲ್ಲೇಂಗಡ ಕಾರ್ತಿಕ್ 88 ರನ್ ಬಾರಿಸಿ ಮಿಂಚಿದರು.

ಮೂವೇರ 6 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತು. ಮೂವೇರ ಉಮೇಶ್ 40 ರನ್ ಬಾರಿಸಿ ಪಂದ್ಯ ಪುರುಷರಾದರು.