ಗುಡ್ಡೆಹೊಸೂರ/ ಚೆಟ್ಟಳ್ಳಿ, ಏ. 27: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಗುಡ್ಡೆಹೊಸೂರಿನ ಪರ್ಪಲ್ ಪಾಮ್ ರೆಸಾರ್ಟ್‍ನಲ್ಲಿ ಕೇಂದ್ರ ಅಧ್ಯಯನ ಸಮಿತಿಯ ಅಧ್ಯಕ್ಷ ನಾರಾಯಣ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿಯ ತಂಡದಲ್ಲಿ 35 ಮಂದಿ ಸದಸ್ಯರಿದ್ದು, 13 ಮಂದಿ ಸಂಸದರ, ಕೃಷಿ ತಜ್ಞರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಸಂಶೋಧನಾ ಕೇಂದ್ರ ಮತ್ತು ಚೆಟ್ಟಳ್ಳಿಯ ಕಾಫಿ ಮಂಡಳಿ ಸಭೆಯ ನೇತೃತ್ವವನ್ನು ವಹಿಸಿತ್ತು.

ಸಭೆ ನಡೆಸಿದ ಬಳಿಕ ಅಧ್ಯಯನ ತಂಡ ಚೆಟ್ಟಳ್ಳಿಯ ಕಾಫಿ ಮಂಡಳಿಗೆ ಭೇಟಿ ನೀಡಿತು. ತಾ. 28 ರಂದು ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದೆ. ಅಧ್ಯಯನ ತಂಡ ವಿವಿಧೆಡೆ ಭೇಟಿ ನೀಡಿ ಭತ್ತ, ಕಾಫಿ, ಏಲಕ್ಕಿ, ಕಿತ್ತಳೆ ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳು, ಅಲ್ಲಿನ ಮಣ್ಣಿನ ಫಲವತ್ತತೆ, ಅದರ ಗುಣಮಟ್ಟ ಹಾಗೂ ಪರಿಹಾರದ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ಜಿಲ್ಲೆಯಲ್ಲಿರುವ ತಂಡ ಬಳಿಕ ದ.ಕ. ಜಿಲ್ಲೆಗೆ ಭೇಟಿ ನೀಡಲಿದೆ. ತಂಡದಲ್ಲಿ ಸಂಸದರಾದ ನಳಿನ್‍ಕುಮಾರ್ ಕಟೀಲ್, ಜಯಪ್ರಕಾಶ್, ನಾರಾಯಣ್, ಎಂ.ಡಿ. ಮೊಯ್ದು ಖಾನ್, ಜಹಾರುರ್ ಖಾನ್, ಭವಾನಿ,