ನಾಪೆÇೀಕ್ಲು, ಏ. 27: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಹನ್ನೊಂದನೆ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಅಂಜಪರವಂಡ ತಂಡ ಸೇರಿದಂತೆ 11 ತಂಡಗಳು ಜಯ ಗಳಿಸುವದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿವೆ. ಅಂತೆಯೇ ಕಳ್ಳಿಚಂಡ, ಬೇರೆರ, ಮೇರಿಯಂಡ, ಓಡಿಯಂಡ, ಕೋಡಿಮಣಿಯಂಡ, ಅರೆಯಡ, ಕಳ್ಳೆಂಗಡ, ಮಣವಟ್ಟಿರ, ಮಾಚಮಾಡ, ಕಂಬೀರಂಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.

ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಕಳ್ಳಿಚಂಡ ಮತ್ತು ಮುಕ್ಕಾಟಿರ (ಕಡಗದಾಳ) ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕಳ್ಳಿಚಂಡ ತಂಡವು ಮುಕ್ಕಾಟಿರ ತಂಡವನ್ನು 2-0 ಗೋಲಿನಿಂದ ಪರಾಭವಗೊಳಿಸಿತು. ಕಳ್ಳಿಚಂಡ ತಂಡದ ಪರ ದರ್ಶನ್, ಶ್ವಾನ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಜಿ ಚಾಂಪಿಯನ್ ಅಂಜಪರವಂಡ ಮತ್ತು ಅಮ್ಮಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಂಜಪರವಂಡ ತಂಡವು 2-0 ಗೋಲಿನಿಂದ ಅಮ್ಮಾಟಂಡ ತಂಡವನ್ನು ಸೋಲಿಸಿತು. ಅಂಜಪರವಂಡ ತಂಡದ ಪರ ಶರಣ್ ಕಾರ್ಯಪ್ಪ, ರಂಜನ್ ಮುತ್ತಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಳೇಟಿರ (ಕುಕ್ಲುರು) ಮತ್ತು ಬೇರೆರ ತಂಡಗಳ ನಡುವಿನ ಪಂದ್ಯಾಟದಲ್ಲಿ ಮಾಳೇಟಿರ ತಂಡವು 2-0 ಗೋಲಿನಿಂದ ಬೇರೆರ ತಂಡವನ್ನು ಸೋಲಿಸಿತು. ಮಾಳೇಟಿರ ತಂಡದ ಪರ ಪ್ರಜ್ವಲ್, ಸೂರಜ್ ಮುತ್ತಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಕೋದಂಡ ಮತ್ತು ಮೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೇರಿಯಂಡ ತಂಡವು 2-0 ಗೋಲಿನಿಂದ ಕೋದಂಡ ತಂಡವನ್ನು ಮಣಿಸಿತು. ಮೇರಿಯಂಡ ತಂಡದ ಪರ ರಾಯಲ್ ಅಯ್ಯಣ್ಣ 2 ಗೋಲು ದಾಖಲಿಸಿದರು. ಓಡಿಯಂಡ ಮತ್ತು ಮಾಳೇಟಿರ (ಕೆದಮುಳ್ಳೂರು) ತಂಡಗಳ ನಡುವಿನ ಪಂದ್ಯಾಟದಲ್ಲಿ ಓಡಿಯಂಡ ತಂಡವು 3-2 ಗೋಲಿನಿಂದ ಮಾಳೇಟಿರ ತಂಡವನ್ನು ಪರಾಭವಗೊಳಿಸಿತು. ಮಾಳೇಟಿರ ತಂಡದ ಪರ ರಾಬಿನ್ ನಾಚಪ್ಪ, ಧನು ಅಯ್ಯಪ್ಪ ಒಂದೊಂದು ಗೋಲು ದಾಖಲಿಸಿದರೆ, ಓಡಿಯಂಡ ತಂಡದ ಪರ ಕೀರ್ತನ್ ಕಾರ್ಯಪ್ಪ, ಮಂಜು ಮಂದಣ್ಣ, ವಿನ್ಸಿ ಪೆÇನ್ನಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಕೋಡಿಮಣಿಯಂಡ ಮತ್ತು ನಾಯಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ನಾಯಕಂಡ ತಂಡವನ್ನು 2-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ನಾಯಕಂಡ ತಂಡದ ಪರ ಅಜಿತ್ ಅಯ್ಯಪ್ಪ ಒಂದು ಗೋಲು ದಾಖಲಿಸಿದರೆ, ಕೋಡಿಮಣಿಯಂಡ ತಂಡದ ಪರ ವಿವೇಕ್, ಗಣಪತಿ ತಲಾ ಒಂದೊಂದು ಗೋಲು ದಾಖಲಿಸಿದರು. ಅರೆಯಡ ಮತ್ತು ಐನಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಅರೆಯಡ ತಂಡವು 2-1 ಗೋಲಿನಿಂದ ಐನಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐನಂಡ ತಂಡದ ಪರ ಆರ್ಯನ್ ನಾಣಯ್ಯ ಒಂದು ಗೋಲು ದಾಖಲಿಸಿದರೆ, ಅರೆಯಡ ತಂಡದ ಪರ ಸನ್ನು ಚಿಣ್ಣಪ್ಪ ಎರಡು ಗೋಲು ದಾಖಲಿಸಿದರು. ಕಳ್ಳೆಂಗಡ ಮತ್ತು ಕೀತಿಯಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಕಳ್ಳೆಂಗಡ ತಂಡವು 5-0 ಗೋಲಿನಿಂದ ಕೀತಿಯಂಡ ತಂಡವನ್ನು ಪರಾಭವಗೊಳಿಸಿತು. ಕಳ್ಳೆಂಗಡ ತಂಡದ ಪರ ಬೋಪಣ್ಣ ಎರಡು, ಪವನ್, ಮೋನಿಷ್, ಸುಬ್ಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಮಣವಟ್ಟಿರ ಮತ್ತು ಬೊಳ್ಳಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡವು 4-0 ಗೋಲಿನಿಂದ ಬೊಳ್ಳಚೆಟ್ಟಿರ ತಂಡವನ್ನು ಮಣಿಸಿತು. ಮಣವಟ್ಟಿರ ತಂಡದ ಪರ ಅಪ್ಪಣ್ಣ ಎರಡು, ಮಧು ಅಯ್ಯಪ್ಪ ಮತ್ತು ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಚಮಾಡ ಮತ್ತು ಅಲ್ಲಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಮಾಡ ತಂಡವು 2-3 ಗೋಲಿನ ಅಂತರದಿಂದ ಅಲ್ಲಪ್ಪಂಡ ತಂಡವನ್ನು ಮಣಿಸಿತು. ಮಾಚಮಾಡ ತಂಡದ ಪರ ಅಯ್ಯಪ್ಪ, ಯಕ್ಷಿತ್, ಸುಬ್ರಮಣಿ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಲ್ಲಪ್ಪಂಡ ತಂಡದ ಪರ ಬನ್ಸಿ ಬೋಪಣ್ಣ ಎರಡು ಗೋಲು ದಾಖಲಿಸಿದರು. ಪುಟ್ಟಿಚಂಡ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಕಂಬೀರಂಡ ಬೋಪಣ್ಣ ಮತ್ತು ಪುಟ್ಟಿಚಂಡ ಅರುಣ್ ಪೆಮ್ಮಯ್ಯ ದಾಖಲಿಸಿದ ಒಂದೊಂದು ಗೋಲಿನಿಂದ ಪಂದ್ಯ ಡ್ರಾ ಗೊಂಡಿತು. ನಂತರ ನಡೆದ ಟೈಬ್ರೇಕರ್‍ನಲ್ಲಿ ಕಂಬೀರಂಡ ತಂಡವು ಪುಟ್ಟಿಚಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

-ಪಿ.ವಿ.ಪ್ರಭಾಕರ್