ಗೋಣಿಕೊಪ್ಪಲು, ಏ. 28: : ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನ ಐದನೇ ದಿನದ ಪಂದ್ಯಗಳಲ್ಲಿ 12 ತಂಡಗಳು ಗೆಲುವು ಸಾಧಿಸಿವೆ.

ಮಂಡಂಗಡ ತಂಡವು ಪುಳ್ಳಂಗಡ ತಂಡವನ್ನು 19 ರನ್‍ಗಳಿಂದ ಸೋಲಿಸಿತು. ಮಂಡಂಗಡ 6 ಕ್ಕೆ 87 ರನ್, ಪುಳ್ಳಂಗಡ 4 ಕ್ಕೆ 68 ರನ್ ಗಳಿಸಿತು. ಪುಳ್ಳಂಗಡ ಪೊನ್ನಣ್ಣ 32 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ಮುಂಡಂಡ ನೆಲ್ಲೀರವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ನೆಲ್ಲೀರ 4 ಕ್ಕೆ 62 ರನ್, ಮುಂಡಂಡ 1 ಕ್ಕೆ 67 ರನ್‍ಗಳಿಸಿತು. ನೆಲ್ಲೀರ ಕವನ್ 34 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.

ಮತ್ರಂಡ ಕನ್ನಚಂಡ ವಿರುದ್ದ 42 ರನ್‍ಗಳ ಗೆಲುವು ಪಡೆಯಿತು. ಮತ್ರಂಡ 6 ಕ್ಕೆ 70 ರನ್, ಕನ್ನಚಂಡ 28 ರನ್‍ಗೆ 10 ವಿಕೆಟ್ ಕಳೆದುಕೊಂಡಿತು. ಕನ್ನಚಂಡ ಶಿಬಿನ್ 10 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.

ಮುಕ್ಕಾಟೀರ (ಬೋಂದ) ಅಣ್ಣೀರ ತಂಡವನ್ನು 8 ವಿಕೆಟ್‍ಗಳಿಂದ ಮಣಿಸಿತು. ಅಣ್ಣೀರ 2 ವಿಕೆಟ್‍ಗೆ 99 ರನ್ ಬಾರಿಸಿತು. ಮುಕ್ಕಾಟೀರ 2 ವಿಕೆಟ್ ನಷ್ಟಕ್ಕೆ 100 ರನ್ ಸಿಡಿಸಿ ಗೆಲುವು ಪಡೆಯಿತು. ಅಣ್ಣೀರ ಶರಣ್ 36 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ತೀತೀರ (ಹುದಿಕೇರಿ) ತಂಡವು ಸಣ್ಣುವಂಡವನ್ನು 7 ವಿಕೆಟ್‍ಗಳಿಂದ ಸೋಲಿಸಿತು ಸಣ್ಣುವಂಡ 4 ಕ್ಕೆ 63 ರನ್ ಬಾರಿಸಿತು. ತೀತೀರ 3 ವಿಕೆಟ್ ನಷ್ಟಕ್ಕೆ 64 ರನ್ ಬಾರಿಸಿತು. ಸಣ್ಣುವಂಡ ಪೊನ್ನಣ್ಣ 22 ರನ್ ಬಾರಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಮಂಡೇಪಂಡ ತಂಡವು ಮಾಪಂಗಡ ವಿರುದ್ಧ 10 ವಿಕೆಟ್‍ಗಳ ಗೆಲುವು ಪಡೆಯಿತು. ಮಾಪಂಗಡ 4 ಕ್ಕೆ 46 ರನ್ ಸೇರಿಸಿತು. ಮಂಡೇಪಂಡ ವಿಕೆಟ್ ನಷ್ಟವಿಲ್ಲದೆ 48 ರನ್ ಸೇರಿಸಿ ಗೆಲುವು ಪಡೆಯಿತು.

ಬಲ್ಲಚಂಡ ತಂಡವು ಮೇಕೇರಿರ ವಿರುದ್ಧ 7 ವಿಕೆಟ್ ಗೆಲುವು ಪಡೆಯಿತು. ಮೇಕೇರೀರ 6 ಕ್ಕೆ 59 ರನ್ ಗಳಿಸಿತು. ಬಲ್ಲಚಂಡ 3 ವಿಕೆಟ್ ಕಳೆದುಕೊಂಡು 60 ರನ್ ಬಾರಿಸಿತು. ಮೇಕೇರೀರ ನಂಜಪ್ಪ 14 ರನ್ ಬಾರಿಸಿ, 1 ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾದರು.

ಬಲ್ಯಮೀದೇರೀರ ತಂಡವು ಮೊಣ್ಣಂಡವನ್ನು 8 ವಿಕೆಟ್‍ಗಳಿಂದ ಮಣಿಸಿತು. ಮೊಣ್ಣಂಡ 8 ವಿಕೆಟ್‍ಗೆ 68 ರನ್, ಬಲ್ಯಮೀದೇರೀರ 2 ವಿಕೆಟ್ ನಷ್ಟಕ್ಕೆ 71 ರನ್ ಸೇರಿಸಿತು. ಮೊಣ್ಣಂಡ ಹರೀಶ್ 20 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ಓಡಿಯಂಡ ತಂಡವು ಅಚ್ಚಿಯಂಡ ತಂಡವನ್ನು 69 ರನ್‍ಗಳಿಂದ ಮಣಿಸಿತು. ಓಡಿಯಂಡ 2 ಕ್ಕೆ 112 ರನ್ ದಾಖಲಿಸಿತು. ಅಚ್ಚಿಯಂಡವು 4 ವಿಕೆಟ್ ಕಳೆದುಕೊಂಡು 44 ರನ್ ಸೇರಿಸಿತು. ಅಚ್ಚಿಯಂಡ ಸುನಿಲ್ 10 ರನ್ ಹೊಡೆದು, 1 ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾದರು.

ಕುಪ್ಪಣಮಾಡ ತಂಡವು ಕನ್ನಿಕಂಡ ವಿರುದ್ಧ 17 ರನ್‍ಗಳ ಗೆಲುವು ಪಡೆಯಿತು. ಕುಪ್ಪಣಮಾಡ 7 ವಿಕೆಟ್‍ಗೆ 66 ರನ್ ಸೇರಿಸಿತು. ಕನ್ನಿಕಂಡ 5 ವಿಕೆಟ್ ನಷ್ಟಕ್ಕೆ 49 ರನ್ ಸೇರಿಸಿತು. ಕನ್ನಿಕಂಡ ಪಳಂಗಪ್ಪ 29 ರನ್ ಬಾರಿಸಿ 3 ವಿಕೆಟ್ ಪಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ನೆಲ್ಲಚಂಡ ತಂಡವು ಕರ್ತೂರ ತಂಡವನ್ನು 10 ವಿಕೆಟ್‍ಗಳಿಂದ ಸೋಲಿಸಿತು. ಕರ್ತೂರ 6 ಕ್ಕೆ 55 ರನ್, ನೆಲ್ಲಚಂಡ ವಿಕೆಟ್ ನಷ್ಟವಿಲ್ಲದೆ 61 ರನ್ ಬಾರಿಸಿತು. ಕರ್ತೂರ ಲಿಕಿತ್ 39 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಪೊನ್ನಚೆಟ್ಟಿರ ಗೈರಾಗುವ ಮೂಲಕ ಕೂತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲು ಕಾರಣವಾಯಿತು.

ಉಡುವೇರ ತಂಡವು ಕುಂಞÂಯಂಡ ವಿರುದ್ಧ 8 ವಿಕೆಟ್‍ಗಳ ಜಯ ಪಡೆಯಿತು. ಉಡುವೇರ 5 ಕ್ಕೆ 117 ರನ್, ಕುಂಞÂಯಂಡ 4 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು. ಉಡುವೇರ ಶಿವ 53 ರನ್‍ಗಳ ಮೂಲಕ ಅರ್ಧ ಶತಕ ಬಾರಿಸಿದರು. ಕುಂಞÂಯಂಡ ಮಹೇಶ್ ಮಾಚಯ್ಯ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಪಂದ್ಯಾವಳಿ ನಿರ್ದೇಶಕರಾಗಿ ಮಾಚಂಗಡ ದರ್ಶನ್ ಸೋಮಣ್ಣ, ತೀರ್ಪುಗಾರರ ತಂಡದ ನಿರ್ದೇಶಕ ಚೆಕ್ಕೇರ ನವೀನ್, ತಾಂತ್ರಿಕ ನಿರ್ದೇಶಕ ಕೊಕ್ಕೇಂಗಡ ರಂಜನ್, ತೀರ್ಪುಗಾರರಾಗಿ ಅಡ್ಡೇಂಗಡ ಆಕಾಶ್, ಬಾಚೀರ ರಾಜ, ಮುಕ್ಕಾಟೀರ ಕೌಶಿಕ್, ಕೊಟ್ಟಂಗಡ ಸೂರಜ್, ಕಳಕಂಡ ಬಬ್ಲಿ ಹಾಗೂ ಅಣ್ಣಳಮಾಡ ಭವನ್ ಪೋಡಮಾಡ ಸುಕೇಶ್, ಆದೇಂಗಡ ಶಾಶ್ವತ್, ಚೆಕ್ಕೇರ ಬೋಪಣ್ಣ, ಆದೇಂಗಡ ನಿಶಿ, ಅಳಮೇಂಗಡ ಸೋಮಯ್ಯ, ಅಳಮೇಂಗಡ ದರ್ಶನ್, ಅಳಮೇಂಗಡ ಮೋಹನ್, ಅಳಮೇಂಗಡ ದಿಪಿನ್, ಅಳಮೇಂಗಡ ದಿಲಿಪ್, ಕಳ್ಳಿಚಂಡ ಕಾವೇರಮ್ಮ ಕಾರ್ಯನಿರ್ವಹಿಸಿದರು. ಕಾಂಡೇರ ಡಾನ್ ಕುಶಾಲಪ್ಪ, ತಿರುನೆಲ್ಲಿಮಾಡ ರಮಾನಂದ ವೀಕ್ಷಕ ವಿವರಣೆ ನೀಡಿದರು.