ಮಡಿಕೇರಿ, ಏ.28 : ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ 16ನೇ ವರ್ಷದ ‘ಜೈ ಭೀಮ್ ಕ್ರಿಕೆಟ್ ಮತ್ತು ಥ್ರೋ ಬಾಲ್’ ಪಂದ್ಯಾವಳಿ ಮೇ 12 ರಿಂದ 14ರವರೆಗೆ ಮೂರ್ನಾಡಿನ ಪದವಿ ಪೂರ್ವ ಕಾಲೆÉೀಜು ಮೈದಾನದಲ್ಲಿ ನಡೆಯಲಿದೆ.

ಮೂರ್ನಾಡು ದಲಿತ ನಾಗಾಸ್ ಕ್ರೀಡಾ ಅಕಾಡೆÀಮಿ ಅಧ್ಯಕ್ಷ ದಿನೇಶ್ ಪೆಗ್ಗೋಲಿ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಿಂದ ಗ್ರಾಮಾಂತರ ಕ್ರೀಡಾ ಕೂಟವನ್ನಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ದಲಿತ ಸಮೂಹದ ಕ್ರಿಡಾ ಪ್ರತಿಭೆÉಗಳಿಗೆ ಹೆಚ್ಚಿನ ಅವಕಾಶ ಮತ್ತು ಪೆÇ್ರೀತ್ಸಾಹ ನೀಡುವ ಸಲುವಾಗಿ ತಂಡಗಳನ್ನು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಿಂದ ಆಹ್ವಾನಿಸಲಾಗಿದೆಯೆಂದು ತಿಳಿಸಿದರು.

ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿಯವರೆಗೆ 43 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, 60 ರಿಂದ 70 ತಂಡಗಳನ್ನು ನಿರೀಕ್ಷಿಸಲಾಗಿದೆ. ಮಹಿಳೆÉಯರಿಗೆ ಸೀಮಿತವಾಗಿ ನಡೆಯುವ ಥ್ರೋಬಾಲ್ ಪಂದ್ಯಾವಳಿಗೆ ಕಳೆÉದ ಸಾಲಿನಂತೆ ಈ ಬಾರಿಯೂ ಆರಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ದಿನೇಶ್ ಪೆಗ್ಗೋಲಿ ಹೇಳಿದರು.

ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಕ್ಕೆ 25 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 15 ಸಾವಿರ ರೂ. ನಗದು ಮತ್ತು ಟ್ರೋಫಿ, ಥ್ರೋಬಾಲ್ ಪಂದ್ಯಾವಳಿ ವಿಜೇತ ತಂಡಕ್ಕೆ 5 ಸಾವಿರ ರೂ. ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 3 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆಂದು ಅವರು ಮಾಹಿತಿ ನೀಡಿದರು.

ಪಂದ್ಯಾವಳಿಯನ್ನು ಮೇ12 ರಂದು ಬೆಳಗ್ಗೆ ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇಗುಲದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ನಗರಸಭಾ ಸದಸ್ಯರಾದ ಹೆಚ್.ಎಂ. ನಂದ ಕುಮಾರ್, ಡಾ| ದೇವದಾಸ್, ಸಮಾಜಸೇವಕ ಪುದಿಯೊಕ್ಕಡ ರಮೇಶ್, ದಾನಿಗಳಾದ ಅಬ್ದುಲ್ ಖಾದರ್, ಮುಜೀಬ್ ಪಾಲ್ಗೊಳ್ಳಲಿದ್ದಾರೆಂದು ದಿನೇಶ್ ಪೆಗ್ಗೋಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ವ್ಯವಸ್ಥಾಪಕ ಈರ ಸುಬ್ಬಯ್ಯ, ಸದಸ್ಯರುಗಳಾದ ದರ್ಶನ್, ಅಬ್ದುಲ್ ಖಾದರ್ ಹಾಗೂ ಅನಿಲ್ ಉಪಸ್ಥಿತರಿದ್ದರು.