ಮಡಿಕೇರಿ, ಏ.28 : ಬಂಟರ ಸಂಘÀದ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೇ 20 ಮತ್ತು 21 ರಂದು ಮೂರ್ನಾಡಿನ ಪ್ರೌಢಶಾಲಾ ಮೈದಾನದಲ್ಲಿ ಬಂಟರ ಸಮುದಾಯಕ್ಕೆ ಸೀಮಿತವಾಗಿ 4ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸ ಲಾಗಿದ್ದು, ಈ ಕ್ರೀಡಾಕೂಟದ ಲಾಂಛನವನ್ನು ನಗರದ ಪತ್ರಿಕಾಭವನದಲ್ಲಿ ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಸಂಘÀದ ಸಲಹೆಗಾರ ಬಾಲಕೃಷ್ಣ ರೈ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ 24 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಆಸಕ್ತ ತಂಡಗಳು ಮೇ15 ರವರೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಈ ಸಂಬಂಧ ಸಂಘದ ಗಿರೀಶ್ ರೈ ಮೊ.9448647849, ಕುಶನ್ ರೈ ಮೊ.8095573808 ನ್ನು ಸಂಪರ್ಕಿಸಬಹುದಾಗಿದೆ. ಥ್ರೋಬಾಲ್ ಪಂದ್ಯಾವಳಿಗೆ ಕ್ರೀಡಾಕೂಟದ ದಿನದಂದು ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಬಾಲಕೃಷ್ಣ ರೈ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘÀದ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಬಿ.ಎಸ್. ಕುಶನ್ ರೈ, ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಶಬರೀಶ್, ಬಂಟರ ಸಂಘÀದ ಮಡಿಕೇರಿ ಯುವ ಘಟಕದ ಅಧ್ಯಕ್ಷ ಕೆ. ಶರತ್ ಶೆಟ್ಟಿ ಹಾಗೂ ಬಿ.ಕೆ. ಚಂದ್ರಶೇಖರ್ ರೈ ಉಪಸ್ಥಿತರಿದ್ದರು.