ವೀರಾಜಪೇಟೆ, ಏ. 28: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ಅಧ್ಯಕ್ಷ ಸ್ಥಾನದ ಚುನಾವಣೆ ಮೇ 8 ರಂದು ನಡೆಸಲಾಗುವದು ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.ಈ ಹಿಂದೆ ಅಧ್ಯಕ್ಷ ಸ್ಥಾನದ ಪದವಿಯಲ್ಲಿದ್ದ ಸಚಿನ್ ಕುಟ್ಟಯ್ಯ ರಾಜಿನಾಮೆನೀಡಿದ್ದರಿಂದ ಸ್ಥಾನ ತೆರವಾಗಿತ್ತು.
ತಾ. 8 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 2 ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ನಂತರ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಿಸಲಿರುವದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಈಗ ಪಟ್ಟಣ ಪಂಚಾಯಿತಿಯಲ್ಲಿ 16 ಮಂದಿ ಚುನಾಯಿತ ಸದಸ್ಯರುಗಳ ಪೈಕಿ 10 ಬಿಜೆಪಿ ಸದಸ್ಯರುಗಳು, ಎರಡು ಮಂದಿ ಕಾಂಗ್ರೆಸ್, ನಾಲ್ಕು ಮಂದಿ ಜೆಡಿಎಸ್ ಸದಸ್ಯರುಗಳಿದ್ದಾರೆ. ಕಾಂಗ್ರೆಸ್ ಪಕ್ಷದ ಮೂರು ನಾಮಕರಣ ಸದಸ್ಯರುಗಳು ಸೇರಿದಂತೆ ಒಟ್ಟು 19 ಮಂದಿ ಸದಸ್ಯರುಗಳಿದ್ದಾರೆ.