ಮಡಿಕೇರಿ, ಏ. 28: ಕೊಡಗು ಗೌಡ ಯುವವೇದಿಕೆ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದ ಅಂಗವಾಗಿ ತಾ. 29ರಂದು (ಇಂದು) ಅರಸು ಭವನದಲ್ಲಿ ಸಾರ್ವಜನಿಕ ರಿಗಾಗಿ ಉಚಿತ ನೇತ್ರ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ರೋಟರಿ ಮಿಸ್ಟಿಹಿಲ್ಸ್‍ನ ಸಹಯೋಗದೊಂದಿಗೆ ಶಿಬಿರಗಳು ನಡೆಯಲಿದ್ದು, ನೇತ್ರ ತಪಾಸಣಾ ಶಿಬಿರವನ್ನು ಬೆಳಿಗ್ಗೆ 9.30 ಗಂಟೆಗೆ ನೇತ್ರತಜ್ಞ ಡಾ. ಚೆರಿಯಮನೆ ಆರ್. ಪ್ರಶಾಂತ್ ಉದ್ಘಾಟಿಸುವರು. ಮಧುಮೇಹ ತಪಾಸಣಾ ಶಿಬಿರವನ್ನು 10 ಗಂಟೆಗೆ ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಡಾ. ನೆರಿಯನ ನವೀನ್ ಉದ್ಘಾಟಿಸುವರು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದು ಯುವವೇದಿಕೆಯವರು ಮನವಿ ಮಾಡಿಕೊಂಡಿದ್ದಾರೆ.