ಗೋಣಿಕೊಪ್ಪಲು, ಏ. 28: ನಿನ್ನೆ ಹಾತೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ವೀರಾಜಪೇಟೆ ತಾ. ಒಕ್ಕಲಿಗರ ಯುವವೇದಿಕೆ ಮತ್ತು ಕೋತೂರು, ಕೊಟ್ಟಗೇರಿ ಗ್ರಾಮಸ್ಥರ ಆಶ್ರಯದಲ್ಲಿ ಆಯೋಜಿಸಿದ್ದ 2ನೇ ವರ್ಷದ ಒಕ್ಕಲಿಗ ಗೌಡರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿ ಜನಾಂಗದ ಬೆಳವಣಿಗೆಗೆ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಒಗ್ಗಟ್ಟಿ&divound;ಂದ ಜೊತೆಸೇರಿ ಕೈಜೋಡಿಸಿದರೆ ಯಶಸ್ಸನ್ನು ಗಳಿಸಬಹುದೆಂದು ಹೇಳಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚೆಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ದೀಪಕ್, ಹಾತೂರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ.ಸುಬ್ರಮಣಿ, ಮಾಜಿ ಜಿ.ಪಂ.ಸದಸ್ಯ ವಿ.ಪಿ. ಶಶಿಧರ್, ತಾ. ಯುವ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್, ಕಾರ್ಯದರ್ಶಿ ವಿ.ಕೆ. ಪ್ರವೀಣ್, ನಿರ್ದೇಶಕ ಕೆ.ಸಿ. ಪವನ್, ಜಿತಿನ್, ಕೆ.ಸಿ.ಜೀವನ್ ಉಪಸ್ಥಿತರಿದ್ದರು.
ಗಣ್ಯರು ಚೆಂಡಿಗೆ ಬ್ಯಾಟ್ ಬೀಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ &divound;ೀಡಿದರು. ಪುಟಾಣಿ ಮಕ್ಕಳ ಕ್ರಿಕೆಟ್ ಪಂದ್ಯಾಟದೊಂದಿಗೆ ವಿಧÀ್ಯುಕ್ತ ಚಾಲನೆ ದೊರೆಯಿತು. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎನ್ನುವಂತೆ ಕೈಕೇರಿ ತಂಡದ ನಾರಿಯರು ಬ್ಯಾಟ್ ಹಿಡಿದು ನಿಂತಿದ್ದು ನಿಜಕ್ಕೂ ಕ್ರೀಡಾಸ್ಪೂರ್ತಿಗೆ ಸಾಕ್ಷಿಯಾಗಿತ್ತು. ಅಲ್ಲದೆ ಹಗ್ಗಜಗ್ಗಾಟ ಪಂದ್ಯಾವಳಿಗಳು ಕೂಡ ನಡೆದು ಕ್ರೀಡಾಪ್ರೇಮಿಗಳನ್ನು ರಂಜಿಸಿದವು.