ಮಡಿಕೇರಿ, ಏ. 28: ತರಕಾರಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಪ್ರಕರಣವೊಂದನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ.

ಗಾಳಿಬೀಡುವಿನ ದಿ. ಕೆ. ತಿಮ್ಮಯ್ಯ ಎಂಬವರ ಗದ್ದೆಯಲ್ಲಿ ಕೆ. ನಾಣಯ್ಯ ಎಂಬವರು ತರಕಾರಿ ಬೆಳೆಯುತ್ತಿದ್ದು, ಇದರ ಮಧ್ಯದಲ್ಲಿ ಸುಮಾರು 15 ಗಾಂಜಾ ಗಿಡಗಳನ್ನು ಬೆಳೆದಿದ್ದರು.

ಈ ಬಗ್ಗೆ ದೊರೆತ ದೂರಿನ ಮೇಲೆ ಗ್ರಾಮಾಂತರ ಪೊಲೀಸರು ಹಾಗೂ ನಗರ ಅಪರಾಧ ಪತ್ತೆದಳ ಸಿಬ್ಬಂದಿ ಧಾಳಿ ನಡೆಸಿದ್ದಾರೆ. ಗಿಡಗಳು ಸುಮಾರು ಆರೂವರೆ ಅಡಿಯಷ್ಟು ಎತ್ತರ ಬೆಳೆದಿತ್ತು. ತಹಶೀಲ್ದಾರ್ ಕುಸುಮ ಅವರ ಸಮ್ಮುಖದಲ್ಲಿ ಪೊಲೀಸರು ಮಹಜರು ನಡೆಸಿದರು. ಕಾರ್ಯಾಚರಣೆಯಲ್ಲಿ ಎಸ್‍ಪಿ, ಡಿವೈಎಸ್‍ಸಿ ಮಾರ್ಗದರ್ಶನದಲ್ಲಿ ಸಿಐ ಪ್ರದೀಪ್, ಎಸ್‍ಐ ಶಿವ ಪ್ರಕಾಶ್, ಹೆಡ್‍ಕಾನ್ಸ್‍ಟೇಬಲ್ ತೀರ್ಥಕುಮಾರ್, ಇಬ್ರಾಹಿಂ, ಶೇಖರ್, ಕಿರಣ, ನಗರ ಅಪರಾಧ ಪತ್ತೆದಳದ ಸುಬ್ಬಯ್ಯ, ಮಧು, ಉತ್ತಪ್ಪ ಪಾಲ್ಗೊಂಡಿದ್ದರು.