ಕುಶಾಲನಗರ, ಏ. 28: ಕುಶಾಲನಗರ ಪಟ್ಟಣ ಪಂಚಾಯಿತಿಯ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತಕರು ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳು ವಂತೆ ಪಟ್ಟಣ ಪಂಚಾಯಿತಿ ಆಡಳಿತ ಸೂಚನೆ ನೀಡಿದೆ.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ವರ್ತಕರ ಸಭೆಯಲ್ಲಿ ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಸೂಚನೆ ನೀಡಿದ್ದು, ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿ¸ Àಬೇಕು ಎಂದು ಕೋರಿದ್ದಾರೆ.

ಅಂದಾಜು 15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ವಾಣಿಜ್ಯ ಸಂಕೀರ್ಣದ ಕಾಮಗಾರಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಮೇ ತಿಂಗಳ 23 ರ ಒಳಗೆ ಎಲ್ಲಾ ಅಂಗಡಿ ಮಳಿಗೆದಾರರು ಮಳಿಗೆಯನ್ನು ತೆರವುಗೊಳಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಈ ಸಂದರ್ಭ ಮಳಿಗೆದಾರರು ತಮ್ಮ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಈ ಸಾಲಿನಲ್ಲಿ ಮಳಿಗೆ ಪರವಾನಗಿ ನವೀಕರಣ, ನೂತನ ಕಟ್ಟಡದಲ್ಲಿ ತಮಗೆ ಅವಕಾಶ ಕಲ್ಪಿಸುವದು ಮುಂತಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಯಾವದೇ ಒಪ್ಪಂದಗಳನ್ನು ಮುಂದುವರೆಸುವ ಸಾಧ್ಯತೆ ಇರುವದಿಲ್ಲ. ನೂತನ ಕಟ್ಟಡದಲ್ಲಿ ನಿಯಮಾನುಸಾರ ಹಳೆಯ ವರ್ತಕರಿಗೆ ಮಳಿಗೆಗಳನ್ನು ನೀಡಲು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವದು. ಪ್ರಸಕ್ತ ಮಳಿಗೆಗಳ ಬಾಡಿಗೆ ಬಾಕಿ ಇರಿಸಿರುವ ವರ್ತಕರು ತಕ್ಷಣ ಪಾವತಿಸಬೇಕು. ಒಂದು ವರ್ಷದ ಅವಧಿಯೊಳಗೆ ನೂತನ ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಾರ್ವಜನಿಕ ಗ್ರಂಥಾಲಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವದು. ಯಾವದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ ಮೇ 23 ರ ಒಳಗೆ ಪಂಚಾಯಿತಿಗೆ ಸಲ್ಲಿಸುವಂತೆ ತಿಳಿಸಲಾಯಿತು.