ಮಡಿಕೇರಿ, ಏ. 28: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಜನಾಂಗ ಬಾಂಧವರ ನಡುವೆ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ಕಲ್ಲುಮುಟ್ಲು ಹಾಗೂ ಮುಕ್ಕಾಟಿ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ತಲಪಿದರೆ, ಬಾಡನ, ಕೊಳಂಬೆ, ಪರ್ಲಕೋಟಿ, ಬಿ. ಕಡ್ಯದ, ಬೊಳ್ತಜ್ಜಿರ, ಅಮೆಮನೆ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಕಡ್ಯದ ತಂಡ 2 ವಿಕೆಟ್ಗೆ 62 ರನ್ ಗಳಿಸಿದರೆ, ತುಂತಜ್ಜಿರ ತಂಡ 3 ವಿಕೆಟ್ಗೆ 45 ರನ್ ಗಳಿಸಿ, 20 ರನ್ಗಳ ಅಂತರದಿಂದ ಸೋಲನುಭವಿಸಿತು. ಬಾಡನ ತಂಡ 3 ವಿಕೆಟ್ಗೆ 64 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಟ್ಟೆಮನೆ ತಂಡ 4 ವಿಕೆಟ್ಗೆ 31 ರನ್ ಮಾತ್ರ ಗಳಿಸಿ, 32 ರನ್ಗಳ ಅಂತರದಿಂದ ಸೋಲು ಕಂಡಿತು. ಕಲ್ಲುಮುಟ್ಲು ತಂಡ 1 ವಿಕೆಟ್ಗೆ 65 ರನ್ ಗಳಿಸಿದರೆ, ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಬಿದ್ರುಪಣೆ ತಂಡ 6 ವಿಕೆಟ್ಗೆ 61 ರನ್ ಗಳಿಸಿ 4 ರನ್ಗಳ ಅಂತರದಿಂದ ಸೋಲನುಭವಿಸಿತು. ಕಲ್ಲುಮುಟ್ಲು ಚಿಂತು 47 ರನ್ ಗಳಿಸಿದರೆ, ಬಿದ್ರುಪಣೆ ಲಿಖಿತ್ 32 ರನ್ ಗಳಿಸಿ ಗಮನ ಸೆಳೆದರು. ಮುದಿಯಾರು ತಂಡ 4 ವಿಕೆಟ್ಗೆ 56 ರನ್ ಗಳಿಸಿದರೆ, ಅಮೆಮನೆ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ 8 ವಿಕೆಟ್ಗಳ ಜಯ ಸಂಪಾದಿಸಿತು. ಕರ್ಣಯ್ಯನ ತಂಡ 7 ವಿಕೆಟ್ಗೆ 41 ರನ್ ಗಳಿಸಿದರೆ, ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಪಡುಪುಮನೆ ತಂಡಕ್ಕೆ ಗೆಲ್ಲುವ ಅವಕಾಶವಿತ್ತಾದರೂ, ಕರ್ಣಯ್ಯನ ತಂಡದ ಉತ್ತಮ ಬೌಲಿಂಗ್ ಧಾಳಿಯಿಂದಾಗಿ 5 ವಿಕೆಟ್ಗೆ 40 ರನ್ ಗಳಿಸಿ 1 ರನ್ ಅಂತರದಿಂದ ವೀರೋಚಿತ ಸೋಲು ಅನುಭವಿಸಿತು.
ಮೂಡಗದ್ದೆ ತಂಡ 3 ವಿಕೆಟ್ಗೆ 56 ರನ್ ಗಳಿಸಿದರೆ, ಉತ್ತರವಾಗಿ ಕೊಳಂಬೆ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಉತ್ತಮ ಜತೆಯಾಟದೊಂದಿಗೆ ಗುರಿ ಸಾಧಿಸಿ 10 ವಿಕೆಟ್ಗಳ ಜಯ ಸಂಪಾದಿಸಿತು. ಕಡ್ಯದ ಹಾಗೂ ಸಿರಕಜೆ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಕಡ್ಯದ ತಂಡ 2 ವಿಕೆಟ್ಗೆ 73 ರನ್ ಗಳಿಸಿದರೆ, ಸಿರಕಜೆ ತಂಡ 5 ವಿಕೆಟ್ಗೆ 48 ರನ್ ಗಳಿಸಿ 24 ರನ್ಗಳ ಅಂತರದಿಂದ ಸೋಲನುಭವಿಸಿತು. ಕಲ್ಲುಮುಟ್ಲು ಹಾಗೂ ಕತ್ರಿಕೊಲ್ಲಿ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಕತ್ರಿಕೊಲ್ಲಿ ತಂಡ 4 ವಿಕೆಟ್ಗೆ 65 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ 9 ವಿಕೆಟ್ಗಳ ಜಯ ಸಂಪಾದಿಸಿತು. ಕಲ್ಲುಮುಟ್ಲು ಪವನ್ 31 ಹಾಗೂ ಚಿಂತು 30 ರನ್ ಗಳಿಸಿ ಗಮನ ಸೆಳೆದರು.
ಮುಕ್ಕಾಟಿ ಹಾಗೂ ಕರ್ಣಯ್ಯನ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಕರ್ಣಯ್ಯನ ತಂಡ 7 ವಿಕೆಟ್ಗೆ 25 ರನ್ ಗಳಿಸಿದರೆ, ಮುಕ್ಕಾಟಿ ತಂಡ 4 ವಿಕೆಟ್ಗೆ 28 ರನ್ ಗಳಿಸಿ, 6 ವಿಕೆಟ್ಗಳ ಜಯ ಸಂಪಾದಿಸಿತು. ಅಮೆಮನೆ ಹಾಗೂ ಕೇಚಪ್ಪನ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಕೇಚಪ್ಪನ ತಂಡ 7 ವಿಕೆಟ್ಗೆ 42 ರನ್ ಗಳಿಸಿದರೆ, ಅಮೆಮನೆ ಬಿ ತಂಡ 3 ವಿಕೆಟ್ಗೆ 45 ರನ್ ಗಳಿಸಿ, 7 ವಿಕೆಟ್ಗಳ ಜಯ ಸಂಪಾದಿಸಿತು. ಕೇಚಪ್ಪನ ಕುಜಲ್ ಅಜೇಯ 27 ರನ್ ಗಳಿಸಿ ಗಮನ ಸೆಳೆದರು.
ಪರ್ಲಕೋಟಿ ಬಿ ಹಾಗೂ ದಬ್ಬಡ್ಕ ತಂಡಗಳ ನಡುವಿನ ಪಂದ್ಯದಲ್ಲಿ ದಬ್ಬಡ್ಕ ತಂಡ 4 ವಿಕೆಟ್ಗೆ 50 ರನ್ ಗಳಿಸಿದರೆ, ಪರ್ಲಕೋಟಿ ತಂಡ 2 ವಿಕೆಟ್ಗೆ 53 ರನ್ ಗಳಿಸಿ 8 ವಿಕೆಟ್ಗಳ ಜಯ ಸಂಪಾದಿಸಿತು.
ಕೊಳಂಬೆ ಗಗನ್ 24 ಹಾಗೂ ಪ್ರಶಾಂತ್ 21 ರನ್ ಗಳಿಸಿ ಗಮನ ಸೆಳೆದರು.