ನಾಪೆÇೀಕ್ಲು, ಏ. 28: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಹನ್ನೆರಡನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಕೂತಂಡ ತಂಡ ಸೇರಿದಂತೆ 9 ತಂಡಗಳು ಜಯ ಗಳಿಸುವದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿವೆ.
ಇಂದು ನಡೆದ ಪಂದ್ಯಾಟದಲ್ಲಿ ಕಡೇಮಾಡ, ಅನ್ನಡಿಯಂಡ, ಬಾಳೆಯಡ, ಮೂಕಳೆರ, ಕುಪ್ಪಂಡ, ಕೂತಂಡ, ಚೆಕ್ಕೆರ, ಮಲ್ಲಂಗಡ, ಮೂಕೋಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಕಡೇಮಾಡ ಮತ್ತು ಬಟ್ಟೀರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕಡೇಮಾಡ ತಂಡವು
2-0 ಗೋಲಿನಿಂಡ ಬಟ್ಟೀರ ತಂಡವನ್ನು ಪರಾಭವಗೊಳಿಸಿತು. ಕಡೇಮಾಡ ತಂಡದ ಪರ ಚರ್ಮಣ ಗೋಲು ದಾಖಲಿಸಿದರು. ಅನ್ನಾಡಿಯಂಡ ಮತ್ತು ಕೊಂಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಅನ್ನಾಡಿಯಂಡ ತಂಡವು ಕೊಂಗಂಡ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು. ಕೊಂಗಂಡ ತಂಡದ ಪರ ಪೂವಣ್ಣ ಒಂದು ಗೋಲು ದಾಖಲಿಸಿದರೆ, ಅನ್ನಾಡಿಯಂಡ ತಂಡದ ಪರ ಪೆÇನ್ನಣ್ಣ, ನವೀನ್ ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕುಂದೀರ ಮತ್ತು ಬಾಳೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಳೆಯಡ ತಂಡವು 2-0 ಗೋಲಿನಿಂದ ಕುಂದೀರ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಾಳೆಯಡ ತಂಡದ ಪರ ಮಿಲನ್, ರತನ್ ತಲಾ ಒಂದೊಂದು ಗೋಲು ದಾಖಲಿಸಿದರು. ಕುಂಡ್ಯೋಳಂಡ ಮತ್ತು ಮೂಕಳೆರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೆರ ತಂಡವು 1-0 ಗೋಲಿನ ಅಂತರದಿಂದ ಕುಂಡ್ಯೋಳಂಡ ತಂಡವನ್ನು ಪರಾಭವಗೊಳಿಸಿತು. ಮೂಕಳೆರ ತಂಡದ ಪರ ಪೆಮ್ಮಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಪ್ಪಂಡ (ಕೈಕೇರಿ)ಮತ್ತು ಪಾಲಂದಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡವು 3-0 ಗೋಲಿನ ಅಂತರದಿಂದ ಪಾಲಂದಿರ ತಂಡವನ್ನು ಪರಾಭವಗೊಳಿಸಿತು. ಕುಪ್ಪಂಡ ಸೋಮಯ್ಯ ಸತತ ಮೂರು ಗೋಲು ದಾಖಲಿಸಿ ಹ್ಯಾಟ್ರಿಕ್ ಗಳಿಸಿದ ಆಟಗಾರರೆನಿಸಿಕೊಂಡರು. ಕೂತಂಡ ಮತ್ತು ಕೊಂಡಿರ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡವು
3-0 ಗೋಲಿನಿಂದ ಕೊಂಡಿರ ತಂಡವನ್ನು ಪರಾಭವಗೊಳಿಸಿತು. ಕೂತಂಡ ತಂಡದ ಪರ ಸಂತೋಷ್, ಸಜನ್, ಸ್ವರೂಪ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಾರ್ಚಂಡ ಮತ್ತು ಚೆಕ್ಕೆರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೆರ ತಂಡವು 2-1 ಗೋಲಿನ ಅಂತರದಿಂದ ಮಾರ್ಚಂಡ ತಂಡವನ್ನು ಪರಾಭವಗೊಳಿಸಿತು. ಮಾರ್ಚಂಡ ಪ್ರವೀಣ್ ತಂಡದ ಪರ ಒಂದು ಗೋಲು ದಾಖಲಿಸಿದರೆ, ಚೆಕ್ಕೆರ ತಂಡದ ಪರ ಶಿಯಾನ್ ಬೋಪಣ್ಣ, ಆದರ್ಶ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಲ್ಲಂಗಡ ಮತ್ತು ಚೆರಿಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಂಗಡ ತಂಡವು 1-0 ಗೋಲಿನಿಂದ ಚೆರಿಯಪಂಡ ತಂಡವನ್ನು ಮಣಿಸಿತು. ಮಲ್ಲಂಗಡ ತಂಡದ ಪರ ಆಕಾಶ್ ಒಂದು ಗೋಲು ದಾಖಲಿಸಿದರು. ಮೂಕೋಂಡ ಮತ್ತು ಕೋದೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡವು 3-0 ಗೋಲುಗಳ ಅಂತರದಿಂದ ಕೋದೇಂಗಡ ತಂಡವನ್ನು ಸೋಲಿಸಿತು. ಮೂಕೋಂಡ ತಂಡದ ಪರ ಉಮೇಶ್ ಎರಡು, ಮಾಚಯ್ಯ ಒಂದು ಗೋಲು ದಾಖಲಿಸಿದರು.
-ಪಿ.ವಿ. ಪ್ರಭಾಕರ್