ಮಡಿಕೇರಿ, ಏ. 28: ಭೂ ಮಾಲೀಕರ ಜಾಗದಲ್ಲಿ ಬೆಳೆದ ಬಳಂಜಿ ಮರಗಳ ಕಡಿಯುವಿಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ವಿಧಿಸಬಾರದೆಂದು ಸೋಮವಾರಪೇಟೆ ತಾಲೂಕು ಬೆಳೆಗಾರರ ಹೋರಾಟ ಸಮಿತಿ ಆಗ್ರಹಿಸಿದ್ದು, ಇಲಾಖೆಯ ಕಿರುಕುಳ ಮುಂದಿವರಿದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು ಗಮನಸೆಳೆದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಮಿತಿ ಪದಾಧಿಕಾರಿಗಳು, ರೈತರು ತಮ್ಮ ಜಮೀನಿನಲ್ಲಿ ಕಾಫಿ ತೋಟ ಹಾಗೂ ಕೃಷಿಗೆ ಪೂರಕವಾಗಿ ಬೆಳೆಸಿರುವ ಮರಗಳನ್ನು, ಫಸಲು ಹಾನಿ ತಡೆಗಟ್ಟುವ ಸಂಬಂಧ ತೆರವುಗೊಳಿಸಲು ಇಲಾಖೆಗೆ ಆಕ್ಷೇಪಣೆ ಸಲ್ಲದೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಂಘದ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಕಾರ್ಯದರ್ಶಿ ಬಿ.ಎಸ್. ಸುದೀಪ್, ಖಜಾಂಚಿ ಕೆ.ಎಂ. ದಿನೇಶ್ ಹಾಗೂ ವಕ್ತಾರ ಎಂ.ಎ. ಶ್ಯಾಂಪ್ರಸಾದ್ ಇಲಾಖಾ ಅಧಿಕಾರಿಗಳಿಗೆ ಲಿಖಿತ ಮನವಿಯೊಂದಿಗೆ ಗಮನಸೆಳೆದಿದ್ದಾರೆ.