ಗೋಣಿಕೊಪ್ಪಲು, ಏ. 30: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್ ಪಂದ್ಯಗಳಲ್ಲಿ 12 ತಂಡಗಳು ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.

ಪೊನ್ನಿಮಾಡ ಪೋಡಮಾಡ ವಿರುದ್ದ 7 ವಿಕೆಟ್ ಗೆಲುವು ದಾಖಲಿಸಿತು. ಪೋಡಮಾಡ 6 ವಿಕೆಟ್ ನಷ್ಟಕ್ಕೆ 63 ರನ್, ಪೊನ್ನಿಮಾಡ 3 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು. ಪೋಡಮಾಡ ಮಂದಣ್ಣ 3 ವಿಕೆಟ್ ಕಬಳಿಸಿ ಪಂದ್ಯ ಪುರುಷರಾದರು.

ಮೂಕಳೇರ ತಂಡ ಗೈರು ಹಾಜರಾದ ಕಾರಣ ಆದೇಂಗಡ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ನಾಟೋಳಂಡ ಕೀತಿಯಂಡ ವಿರುದ್ದ 5 ವಿಕೆಟ್ ಗೆಲುವು ಪಡೆಯಿತು. ಕೀತಿಯಂಡ ನಾಣಯ್ಯ ಹಾಗೂ ಬೋಪಣ್ಣ ಬಾರಿಸಿದ ತಲಾ 11 ರನ್‍ಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತು. ನಾಟೋಳಂಡ 5.5 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು. ಕೀತಿಯಂಡ ದೇವಯ್ಯ 2 ವಿಕೆಟ್ ಪಡೆದು ಪಂದ್ಯ ಪುರುಷರಾದರು.

ಕೈಬಿಲಿರ ಗಾಂಡಂಗಡ ವಿರುದ್ದ 9 ವಿಕೆಟ್‍ಗಳ ಭರ್ಜರಿ ಗೆಲುವು ದೊರೆಯಿತು. ಗಾಂಡಂಗಡ 6 ವಿಕೆಟ್‍ಗೆ 67 ರನ್ ಗಳಿಸಿತು. ಉತ್ತರವಾಗಿ ಕೈಬಿಲಿರ 3 ಚೆಂಡು ಉಳಿದಿರುವಂತೆ 1 ವಿಕೆಟ್ ನಷ್ಟಕ್ಕೆ 73 ರನ್ ಸಿಡಿಸಿತು. ಗಾಂಡಂಗಡ ಬಿಪಿನ್ 18 ರನ್ ಗಳಿಸಿ ಪಂದ್ಯ ಪುರುಷರಾದರು.

ಅಮ್ಮಣಿಚಂಡವು ಕೊಚ್ಚೇರವನ್ನು 17 ರನ್‍ಗಳಿಂದ ಸೋಲಿಸಿತು. ಅಮ್ಮಣಿಚಂಡ 6 ವಿಕೆಟ್ ಕಳೆದು ಕೊಂಡು ನೀಡಿದ 65 ರನ್ ಗುರಿ ತಲುಪಲಾಗದೆ ಕೊಚ್ಚೇರ 5 ವಿಕೆಟ್‍ಗೆ 48 ರನ್ ಮಾತ್ರ ಸೇರಿಸಿತು. ಕೊಚ್ಚೇರ ಪವನ್ 17 ರನ್ ಗಳಿಸಿ ಪಂದ್ಯ ಪುರುಷರಾದರು.

ಮಲ್ಲಮಾಡ ತಂಡವು ನಡಿಕೇರಿಯಂಡವನ್ನು 20 ರನ್ ಗಳಿಂದ ಸೋಲಿಸಿತು. ಮಲ್ಲಮಾಡ 3 ವಿಕೆಟ್ ನಷ್ಟಕ್ಕೆ 90 ರನ್‍ಗಳ ಗುರಿ ನೀಡಿತು. ನಡಿಕೇರಿಯಂಡ 5 ವಿಕೆಟ್ ಷ್ಟಕ್ಕೆ 69 ರನ್ ಸೇರಿಸಿತು. ಮಲ್ಲಮಾಡ ಅಯ್ಯಣ್ಣ ಅರ್ಧಶತಕ ದಾಖಲಿಸಿದರು. ನಡಿಕೇರಿಯಂಡ ಜೀವನ್ 33 ರನ್ ಗಳಿಸಿ ಪಂದ್ಯ ಪುರುಷರಾದರು.

ಚೊಟ್ಟಂಗಡ, ಮುದ್ದಿಯಡ ವಿರುದ್ದ 36 ರನ್‍ಗಳ ಗೆಲುವು ದಾಖಲಿಸಿತು. ಚೊಟ್ಟಂಗಡ 9 ವಿಕೆಟ್‍ಗೆ 72 ರನ್ ಗಳಿಸಿತು. ಮುದ್ದಿಯಡ 9 ವಿಕೆಟ್ ಕಳೆದು ಕೊಂಡು 36 ರನ್‍ಗಳಿಸಿತು. ಮುದ್ದಿಯಡ ಕಿರಣ್ 2 ಓವರ್ ಬೌಲಿಂಗ್ ಮಡಿ 19 ರನ್ ನೀಡಿ 5 ವಿಕೆಟ್ ಗಳಿಸಿ ಪಂದ್ಯ ಪುರುಷರಾದರು.

ಅಚ್ಚಪಂಡಕ್ಕೆ ಅಪ್ಪುಡ ವಿರುದ್ದ 23 ರನ್‍ಗಳ ಗೆಲುವು ದೊರೆಯಿತು. ಅಚ್ಚಪಂಡ 4 ವಿಕೆಟ್ ನಷ್ಟಕ್ಕೆ ಅಚ್ಚಪಂಡ ಮಿಥುನ್ ಬಾರಿಸಿದ 35 ರನ್‍ಗಳ ನೆರವಿನಿಂದ 86 ರನ್‍ಗಳನ್ನು ದಾಖಲಿಸಿತು. ಅಪ್ಪುಡ 7 ವಿಕೆಟ್ ಕಳೆದುಕೊಂಡು 64 ರನ್ ಮಾತ್ರ ಗಳಿಸಲಿತು. ಅಪ್ಪುಡ ಪೆಮ್ಮಯ್ಯ 28 ರನ್ ಗಳಿಸಿ ಪಂದ್ಯ ಪುರುಷರಾದರು.

ಅರಪಟ್ಟ್ ಮುಕ್ಕಾಟೀರ ತಂಡವು ತೆಕ್ಕಡವನ್ನು 21 ರನ್‍ಗಳಿಂದ ಮಣಿಸಿತು. ಮುಕ್ಕಾಟೀರ 5 ವಿಕೆಟ್ ನಷ್ಟಕ್ಕೆ 55 ರನ್‍ಗಳ ಗುರಿ ನೀಡಿತು. ತೆಕ್ಕಡ 7 ವಿಕೆಟ್ ಕಳೆದುಕೊಂಡು ಕೇವಲ 34 ರನ್ ಗಳಿಸಿ ಸೋಲೊಪ್ಪಿಕೊಂಡಿತು. ತೆಕ್ಕಡ ವರುಣ್ 15 ರನ್ (ಪಂದ್ಯ ಪುರುಷ).

ಕೋಟ್ರಮಾಡ ತಂಡವು ತಿರುನೆಲ್ಲಿಮಾಡ ವಿರುದ್ದ 11 ರನ್ ಗೆಲುವು ಪಡೆಯಿತು. ಕೋಟ್ರಮಾಡ 1 ವಿಕೆಟ್ ನಷ್ಟಕ್ಕೆ 83 ರನ್ ಬಾರಿಸಿತು. ತಿರುನೆಲ್ಲಿಮಾಡ 4 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ಕೋಟ್ರಮಾಡ ಕಟ್ಟಿ ಕಾರ್ಯಪ್ಪ 39 ರನ್ ಗಳಿಸಿದರು. ತಿರುನೆಲ್ಲಿಮಾಡ ರಮಾನಂದ 32 ರನ್ ಗಳಿಸಿ ಪಂದ್ಯ ಪುರುಷರಾದರು.

ಚೆಪ್ಪುಡಿರ ತಂಡವು ನಾಮೇರ ವಿರುದ್ದ 29 ರನ್‍ಗಳ ಗೆಲುವು ಪಡೆಯಿತು. ಚೆಪ್ಪುಡಿರ 3 ವಿಕೆಟ್‍ಗಳಲ್ಲಿ 82 ರನ್ ಬಾರಿಸಿತು. ನಾಮೇರ 7 ವಿಕೆಟ್ ನಷ್ಟಕ್ಕೆ 53 ರನ್ ಸೇರಿಸಿತು. ಚೆಪ್ಪುಡಿರ ರೋಶನ್ ಅಪ್ಪಣ್ಣ 44 ರನ್ ಸೇರಿಸಿದರು. ನಾಮೇರ ಅಂಕಿತ್ 14 ರನ್ ಗಳಿಸಿ ಪಂದ್ಯ ಪುರುಷರಾದರು.

ಪೋರಂಗಡ ಕೋಪಟ್ಟೀರ ವಿರುದ್ದ 4 ವಿಕೆಟ್ ಗೆಲುವು ಪಡೆಯಿತು. ಕೋಪಟ್ಟೀರ 6 ವಿಕೆಟ್‍ಗೆ 80 ರನ್ ಗಳಿಸಿದರೆ, ಪೋರಂಗಡ 6 ವಿಕೆಟ್‍ಗೆ 82 ರನ್ ಸಿಡಿಸಿತು. ಕೋಪಟ್ಟೀರ ದರ್ಶನ್ 29 ರನ್ ಗಳಿಸಿ ಪಂದ್ಯ ಪುರುಷರಾದರು.