ಮಡಿಕೇರಿ, ಏ. 30: ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆ, ಮೈಸೂರು ಹಾಗೂ ಅಶ್ವಿನಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಕ್ಯಾನ್ಸರ್ ಖ್ಯಾತ ತಜ್ಞರಿಂದ ಅಶ್ವಿನಿ ಆಸ್ಪತ್ರೆಯಲ್ಲಿ ತಾ.3ರಂದು ಬೆಳಿಗ್ಗೆ 10 ಗಂಟೆಯಿಂದ ಉಚಿತ ಕ್ಯಾನ್ಸರ್ ತಪಾಸಣೆ ನಡೆಯಲಿದೆ. ಸ್ತನದಲ್ಲಿ ಊತ, ಗಂಟು ಅಥವಾ ಶರೀರದ ಯಾವದೇ ಭಾಗದಲ್ಲಿ ಗಡಸುತನ, ಶರೀರದ ಯಾವದೇ ಭಾಗದಿಂದ ರಕ್ತ ಸ್ರಾವ, ಒಂದು ತಿಂಗಳ ಮೇಲ್ಪಟ್ಟು ಬಾಯಿ, ಚರ್ಮ ಅಥವಾ ಶರೀರದ ಯಾವದೇ ಭಾಗದಲ್ಲಿ ಗಾಯ ಅಥವಾ ವಾಸಿಯಾಗದೆ ಇರುವ ಹುಣ್ಣು, ನುಂಗುವಾಗಿನ ತೊಂದರೆ ಅಥವಾ ತಡೆತ, ಗಂಟಲಲ್ಲಿ ಉರಿತ, ನೋವು ಅಥವಾ ಧ್ವನಿ ಬದಲಾವಣೆ ಒಂದು ತಿಂಗಳ ಮೇಲ್ಪಟ್ಟು ಇದ್ದಲ್ಲಿ ಈ ಶಿಬಿರದಲ್ಲಿ ಪರೀಕ್ಷಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ -70265 42580 ಸಂಪರ್ಕಿಸಬಹುದು.