ಮಡಿಕೇರಿ, ಏ.30 : ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಸಂದರ್ಭ ಪಾಲೇಮಾಡಿನ ರಸ್ತೆಯೊಂದಕ್ಕೆ ‘ಟಿಪÀÅ್ಪ’ ನಾಮಫಲಕ ಅಳವಡಿಸುವ ಮೂಲಕ ಶಾಂತಿ ಕದಡುವ ಪ್ರಯತ್ನವನ್ನು ಕೆಲವರು ಮಾಡಿದ್ದು, ವಿವಾದಾಸ್ಪದ ನಾಮಫಲಕ ತೆರವು ಸಂದರ್ಭ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಜನಾರ್ಧನ್ ಅವರು, ನಾಯಕರ ಸೋಗಿನ ಕೆಲವರು ಪಾಲೇಮಾಡಿನಲ್ಲಿ ಅಂಬೆÉೀಡ್ಕರ್ ಜಯಂತಿ ಸಂದರ್ಭ ಕಾನೂನು ಬಾಹಿರವಾಗಿ ನಾಮಫಲಕಗಳನ್ನು ಅಳವಡಿಸಿದ್ದಾರೆ. ಇದನ್ನು ಪ್ರಶ್ನಿಸಿದಕ್ಕಾಗಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೆÇಲೀಸರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿದರು. ಜಿಲ್ಲೆಯ ಜನತೆಗೆ ಬೇಡವಾದ ಟಿಪ್ಪು ಹೆಸರನ್ನು ಇರಿಸುವ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಸ್ವಯಂ ಘೋಷಿತ ನಾಯಕ ಮೊಣ್ಣಪ್ಪ, ವಿವಿಧ ಸಂಘಟನೆಗಳ ನಾಯಕರೆನಿಸಿಕೊಂಡಿರುವ ನಿರ್ವಾಣಪ್ಪ, ಅಮಿನ್ ಮೊಹಿಸಿನ್ ಸೇರಿದಂತೆ ಹಲವರು ಪಾಲೇಮಾಡಿನ ಶಾಂತಿಗೆ ಭಂಗ ತರುವ ಪ್ರಯತ್ನಗಳನ್ನು ನಡೆಸಿದ್ದಾರೆಂದು ಅವರು ಆರೋಪಿಸಿದರು.

ಮೇ 2 ಮತ್ತು 3 ರಂದು ಪಾಲೆÉೀಮಾಡಿನಿಂದ ಮಡಿಕೆÉೀರಿಗೆ ಕಾಲ್ನಡಿಗೆ ಜಾಥಾ ನಡೆಸುವುದನ್ನು ಆಕ್ಷೇಪಿಸಿದ ಜನಾರ್ಧನ ಇದಕ್ಕೆ ಪ್ರತಿಯಾಗಿ, ಸಮಾಜ ಘಾತುಕ ಶಕ್ತಿಗಳ ಬಂಧನ ಮತ್ತು ಗಡಿಪಾರಿಗೆ ಆಗ್ರಹಿಸಿ ಪಾದ ಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಭೂಮಿ ಮತ್ತಿತರ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಲು ಅವಕಾಶವಿದ್ದರು ಸಂಘರ್ಷದ ಹಾದಿಯನ್ನು ನಾಯಕರೆÀನಿಸಿಕೊಂಡವರು ತುಳಿದಿದ್ದಾರೆ. ಬಡವರ ಪರ ಎಂದು ಬಿಂಬಿಸಿಕೊಳ್ಳುತ್ತಾ ಸ್ಥಳೀಯ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಟೀಕಿಸಿದರು. ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಜನಾರ್ಧನ, ಅಶಾಂತಿ ಮೂಡಿಸುವವರನ್ನು ಪಾಲೆÉೀಮಾಡಿಗೆ ಪ್ರವೇಶಿಸಿದಂತೆ ನಿರ್ಬಂಧಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಸುರೇಶ್, ಶಿವಣ್ಣ, ಅಯ್ಯಪ್ಪ, ರಾಜ, ಏಕದಂತ ಮಹಿಳಾ ಸಂಘದ ಸzಸ್ಯೆ ಸುಶೀಲ ಉಪಸ್ಥಿತರಿದ್ದರು.