ನಾಪೆÇೀಕ್ಲು, ಏ. 30: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಹದಿನಾಲ್ಕನೇ ದಿನದ ಪಂದ್ಯಾಟದಲ್ಲಿ ಮೂರು ಬಾರಿಯ ಚಾಂಪಿಯನ್ ಕುಲ್ಲೇಟಿರ ಹಾಗೂ ಮಂಡೇಪಂಡ ತಂಡಗಳಿಗೆ ಭರ್ಜರಿ ಜಯ ಲಭಿಸಿದೆ.

ಭಾನುವಾರ ನಡೆದ ಪಂದ್ಯಾಟ ದಲ್ಲಿ ಮುರುವಂಡ, ಕರಿನೆರವಂಡ, ಚೇಂದಂಡ, ಪೆಮ್ಮಂಡ, ಮಂಡೇಪಂಡ, ಮೇವಡ, ಕುಲ್ಲೇಟಿರ, ಮಾದಂಡ, ಅಮ್ಮಂಡ, ಕಟ್ಟೇರ, ಚೇನಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿತು.

ಕುಲ್ಲೇಟಿರ ಮತ್ತು ಶಾಂತೆಯಂಡ ತಂಡಗಳ ನಡುವಿನ ಪಂದ್ಯವು ತಲಾ ಒಂದೊಂದು ಗೋಲಿನಿಂದ ಡ್ರಾ ಗೊಂಡಿತು. ನಂತರ ನಡೆದ ಟೈಬ್ರೇಕರ್‍ನಲ್ಲಿ ಕುಲ್ಲೇಟಿರ ತಂಡವು ಶಾಂತೆಯಂಡ ತಂಡವನ್ನು ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಹಾಗೆಯೇ ಮಂಡೇಪಂಡ ಮತ್ತು ತೀತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಪಂಡ ತಂಡವು ತೀತಮಾಡ ತಂಡವನ್ನು 1-0 ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಂಡೇಪಂಡ ತಂಡದ ಪರ ಗಣಪತಿ ಒಂದು ಗೋಲು ದಾಖಲಿಸಿದರು. ಮುರುವಂಡ ಮತ್ತು ಅಜ್ಜೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುರುವಂಡ ತಂಡವು 4-0 ಗೋಲಿನಿಂದ ಅಜ್ಜೇಟಿರ ತಂಡವನ್ನು ಮಣಿಸಿತು. ಮುರುವಂಡ ತಂಡದ ಪರ ಅಣ್ಣಯ್ಯ ಎರಡು, ಶಶಾಂಕ್ ಮತ್ತು ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕರಿನೆರವಂಡ ಮತ್ತು ಮಾರ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ ತಂಡವು 4-0 ಗೋಲಿನಿಂದ ಮಾರ್ಚಂಡ ತಂಡವನ್ನು ಪರಾಭವಗೊಳಿಸಿತು. ಕರಿನೆರವಂಡ ತಂಡದ ಪರ ಪೆÇನ್ನಪ್ಪ ಎರಡು, ಲಿತೇಶ್ ಬಿದ್ದಪ್ಪ ಹಾಗೂ ರತನ್ ಕುಂಞಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಚೇಂದಂಡ ಮತ್ತು ಅವರೆಮಾದಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಂಡ ತಂಡವು 5-0 ಗೋಲಿನಿಂದ ಅವರೆಮಾದಂಡ ತಂಡವನ್ನು ಪರಾಭವಗೊಳಿಸಿತು. ಚೇಂದಂಡ ತಂಡದ ಪರ ತಮ್ಮಯ್ಯ ಮೂರು, ತಿಮ್ಮಯ್ಯ ಮತ್ತು ಅಮೋಘ್ ತಲಾ ಒಂದೊಂದು ಗೋಲು ದಾಖಲಿಸಿ ದರು. ಪೆಮ್ಮಂಡ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೆಮ್ಮಂಡ ತಂಡವು ಮಾಣಿಪಂಡ ತಂಡವನ್ನು 6-0 ಗೋಲಿನಿಂದ ಪರಾಭವಗೊಳಿಸಿತು. ಪೆಮ್ಮಂಡ ಚರಣ್ ಹ್ಯಾಟ್ರಿಕ್ ಮೂರು ಗೋಲು, ಸುಬ್ರಮಣಿ, ಕರುಂಬಯ್ಯ, ಸೋಮಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಮೇವಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೇವಡ ತಂಡವು 3-0 ಗೋಲಿನಿಂದ ಕಾಯಪಂಡ ತಂಡವನ್ನು ಮಣಿಸಿತು. ಮೇವಡ ನಿತಿನ್, ಬೆಳ್ಯಪ್ಪ ಮತ್ತು ಸುಬ್ರಮಣಿ ತಲಾ ಒಂದೊಂದು ಗೋಲು ದಾಖಲಿಸಿದರು. ಪುಲಿಯಂಡ ಮತ್ತು ಮಾದಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾದಂಡ ತಂಡವು ಟೈಬ್ರೇಕರ್‍ನ ಮೂಲಕ ಪುಲಿಯಂಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಮ್ಮಂಡ ಮತ್ತು ಬಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮಂಡ ತಂಡವು 2-0 ಗೋಲಿನಿಂದ ಬಲ್ಲಂಡ ತಂಡವನ್ನು ಪರಾಭವಗೊಳಿಸಿತು. ಅಮ್ಮಂಡ ತಂಡದ ಪರ ಪ್ರಧಾನ್, ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ದರು. ಪಟ್ರಪಂಡ ಮತ್ತು ಕಟ್ಟೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಟ್ಟೇರ ತಂಡವು 2-1 ಗೋಲಿನ ಅಂತರದಿಂದ ಪಟ್ರಪಂಡ ತಂಡವನ್ನು ಮಣಿಸಿತು. ಕಟ್ಟೇರ ತಂಡದ ಪರ ಗೌತಮ್, ತನು ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿ ದರೆ, ಪಟ್ರಪಂಡ ತಂಡದ ಪರ ನಿರನ್ ಒಂದು ಗೋಲು ದಾಖಲಿಸಿದರು. ಅಜ್ಜಿಕುಟ್ಟಿರ ಮತ್ತು ಚೇನಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೇನಂಡ ತಂಡವು 2-1 ಗೋಲಿನ ಅಂತರದಿಂದ ಅಜ್ಜಿಕುಟ್ಟಿರ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೇನಂಡ ತಂಡದ ಪರ ಸೋಮಯ್ಯ, ದಿನೇಶ್ ತಮ್ಮಯ್ಯ ತಲಾ ಒಂದೊಂದು ಗೋಲು ದಾಖಲಿಸಿ ದರೆ, ಅಜ್ಜಿಕುಟ್ಟಿರ ತಂಡದ ಪರ ಗಣಪತಿ ಒಂದು ಗೋಲು ದಾಖಲಿಸಿದರು.