ಆಲೂರುಸಿದ್ದಾಪುರ/ಕೊಡ್ಲಿಪೇಟೆÀ, ಏ. 30: ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ನಲ್ಲಿರುವ ಮಸ್ದಿದುನ್ನೂರ್‍ನ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್‍ನ ಎಸ್‍ಕೆಎಸ್ ಎಸ್‍ಎಫ್ ಮತ್ತು ಎಸ್‍ವೈಎಸ್ ವತಿಯಿಂದ 3 ದಿನಗಳ ವರೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಇಸ್ಲಾಂ ಧಾರ್ಮಿಕ ಗುರುಗಳಿಂದ ಐಕ್ಯತೆ ಮತ್ತು ಸೌಹಾರ್ಧತೆ ಕುರಿತು ಉಪನ್ಯಾಸ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಕೇರಳದ ಇಸ್ಲಾಂ ಧಾರ್ಮಿಕ ಗುರು ಸೈಯದ್ ಸಹೀರ್ ಆಲಿ ಸಿನತ್ ತಂಞಳ್ ಪಾಲ್ಗೊಂಡು ಮಾತನಾಡಿ-ಪ್ರತಿಯೊಬ್ಬ ಮನುಷ್ಯ ಕೇವಲ ತನ್ನ ಶರೀರವನ್ನು ಸ್ವಚ್ಚಗೊಳಿಸಿದರೆ ಬಾಹ್ಯ ಮಾತ್ರ ಸ್ವಚ್ಚಗೊಳುತ್ತದೆ ಹೊರತು ತನ್ನ ಮನಸು ಸ್ವಚ್ಚಗೊಳ್ಳುವದಿಲ್ಲ, ಮನುಷ್ಯನಲ್ಲಿರುವ ಆ ಒತರಿಕವಾದ ಮನಸನ್ನು ಸ್ವಚ್ಚಗೊಳಿಸಬೇಕು ಇದರಿಂದ ಮನಸ್ಸು ಸ್ವಚ್ಚವಾಗಿ ತನ್ನ ಜೀವನದಲ್ಲಿ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳುತ್ತಾನೆ ಎಂದರು.

ಎಸ್‍ವೈಎಸ್ ನ ಅಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ ಮಾತನಾಡಿ-ಇಂದು ಮಾನವರು ಆಧುನಿಕ ಜಂಜಾಟದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಜಂಜಾಟಗಳು ದೂರವಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಧರ್ಮ ಹಾಗೂ ಆದ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಆತ್ಮೀಯ ಸಂಗಮಕ್ಕೆ ಸಂಪತಿ ಎಂಬ ಹರಿಕಥಾ ಪ್ರಸಂಗವನ್ನು ಜುಬೀರ್ ಮಾಸ್ಟರ್ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೆಹಮಾನ್, ಕಲಂದರ್‍ಸಫಿ, ನೌಫಾಲ್, ಅಬ್ದುಲ್ ಬಸಿರ್, ಝಾಹಿರ್ ನಿಝಾಮಿ, ಜಿ.ಎಂ.ಅಬ್ದುಲ್, ಅಬೂಬಕ್ಕರ್ ಸಿದ್ದಿಕ್, ಬಿ.ಎಂ.ತಫ್‍ಸೀರ್, ಜಾಹೀರ್ ನಿಝಾಮಿ ಮುಂತಾದವರಿದ್ದರು.

-ವರದಿ: ದಿನೇಶ್ ಮಾಲಂಬಿ