ಮಡಿಕೇರಿ, ಏ. 30: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಇಂದು ಶ್ರೀ ಶಂಕರ ಜಯಂತಿಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಬೆಳಿಗ್ಗೆ ಶತರುದ್ರ ಪಾರಾಯಣ ಜರುಗಿತು.ವೇದಗಳಲ್ಲಿನ ಸತ್ವವನ್ನು, ಸಾರವನ್ನೂ ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಚುರಪಡಿಸಿದವರು ಶಂಕರರು ಎಂದು ವಿಶ್ಲೇಷಿಸಿದರು. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಬ್ರಹ್ಮೋಪದೇಶವನ್ನು ಏರ್ಪಡಿಸಲಾಗಿತ್ತು. ನಿಧಿಯ ಗೀತಾ ಗಿರೀಶ್ ಸ್ವಾಗತಿಸಿ, ಸವಿತಾ ಭಟ್ ವಂದಿಸಿದರು. ನಿಧಿಯ ಕಾರ್ಯದರ್ಶಿ ಅರುಣ್ ಸೋಮಯಾಜಿ, ಸದಸ್ಯರುಗಳಾದ ರಮೇಶ್ ಹೊಳ್ಳ, ರಾಮಚಂದ್ರ ಮೂಗೂರು, ಶಿವಶಂಕರ, ಕೇಶವ ಪ್ರಸಾದ್ ಮುಳಿಯ, ಕೊಡಗು ಹವ್ಯಕ ವಲಯದ ಡಾ. ರಾಜಾರಾಮ, ಶ್ರೀಪತಿ ಭಟ್, ಹಿರಿಯರಾದ ಜಿ.ಟಿ. ರಾಘವೇಂದ್ರ, ಸಂಪತ್ ಕುಮಾರ್ ಉಪಸ್ಥಿತರಿದ್ದರು. ಶಂಕರ ಭಗವದ್ ಪಾದರ ಪೂಜೆ ನೆರವೇರಿದ ನಂತರ ಪ್ರಸಾದ ಹಾಗೂ ಭೋಜನ ಏರ್ಪಡಿಸಲಾಗಿತ್ತು.