ಮಡಿಕೇರಿ, ಮೇ 3: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಮಡಿಕೇರಿ ಜಿಲ್ಲಾ ನೆಹರೂ ಯುವ ಕೇಂದ್ರ ರಾಷ್ಟ್ರೀಯ ಯುವ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಲಿದೆ. ಕೊಡಗು ಜಿಲ್ಲೆಯ ಪ್ರತಿ ತಾಲೂಕಿನಿಂದ ತಲಾ ಇಬ್ಬರು ಯುವ ಸ್ವಯಂಸೇವಕರನ್ನು ಹಾಗೂ ಕಂಪ್ಯೂಟರ್‍ನಲ್ಲಿ ಪರಿಣತಿ ಹೊಂದಿರುವ ಇಬ್ಬರು ಸ್ವಯಂಸೇವಕರನ್ನು ಕಚೇರಿಗೆ ನಿಯೋಜಿಸಿಕೊಳ್ಳಲಾಗುವದು. ಜಿಲ್ಲಾ ನೆಹರೂ ಯುವ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದ ಯುವಕ-ಯುವತಿ ಮಂಡಳಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಸ್ವಯಂಸೇವಕರನ್ನು ನೇಮಿಸಲಾಗುತ್ತಿದೆ. ನೆಹರೂ ಯುವ ಕೇಂದ್ರದ ಕಾರ್ಯಕ್ರಮಗಳನ್ನು ಯುವ ಮಂಡಳಗಳ ಮೂಲಕ ಕಾರ್ಯಗತ ಮಾಡುವ ಜವಾಬ್ದಾರಿ ಸ್ವಯಂಸೇವಕರದಾಗಿರುತ್ತದೆ. ಜೊತೆಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಆರೋಗ್ಯ, ಸಾಕ್ಷರತೆ, ಸ್ವಚ್ಛತೆ, ಮಹಿಳಾ ಅಸಮಾನತೆ, ಮೂಢನಂಬಿಕೆ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯನಿರ್ವಹಿಸಬೇಕಾಗುತ್ತದೆ.

ಸ್ವಯಂ ಸೇವಕರಾಗಿ ಕಾರ್ಯನೆರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಟ ಹತ್ತನೇ ತರಗತಿ ಪಾಸಾಗಿರಬೇಕು. ಜೊತೆಗೆ ಹೆಚ್ಚಿನ ವಿದ್ಯಾರ್ಹತೆವುಳ್ಳವರಿಗೆ ಅದ್ಯತೆ ನೀಡಲಾಗುವದು. ಕಂಪ್ಯೂಟರ್‍ನಲ್ಲಿ ಪರಿಣತಿ ಹೊಂದಿರಬೇಕು. ದಿನಾಂಕ 1.4.2017 ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. ಹಾಗೂ 29 ವರ್ಷ ಮೀರಬಾರದು. ಆಯ್ಕೆಯಾದವರಿಗೆ ಮಾಹೇಯಾನ ರೂ. 5000 ಗೌರವಧನ ನೀಡಲಾಗುವದು.

ಈ ಬಗ್ಗೆ ನೇರ ಸಂದರ್ಶನವನ್ನು ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ. ಆಸಕ್ತಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳು ವಿದ್ಯಾರ್ಹತೆ ಹಾಗೂ ಇತರ ದಾಖಲೆಯ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಎಂ.ಎನ್. ನಟ್‍ರಾಜ್ :9480392655 ಜಿಲ್ಲಾ ಯುವಜನ ಸಮನ್ವಯಾಧಿಕಾರಿ ನೆಹರೂ ಯುವ ಕೇಂದ್ರ, ಕೊಡಗು ಹಾಗೂ 9449005478, 7760454340, ಅಥವಾ08272/225470 ದೂರವಾಣಿಯನ್ನು ಸಂಪರ್ಕಿಸಬಹುದು.