ರಣೋತ್ಸಾಹದಲ್ಲಿ ಆಡುವ ಸಾಹಸಿಗಳು. ಈ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳು ಕೋಟ್ಯಾಂತರ ಸಂಖ್ಯೆಯಲ್ಲಿದ್ದು, ಮನೋರಂಜನೆ ಸ್ಪರ್ಧೆಗಾಗಿ ಆಡುವ ಕ್ರೀಡಾಪಟುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ ಸಂಘಟನೆಗಳಿಗೇನೂ ಕೊರತೆಯಿಲ್ಲ. ಫುಟ್ಬಾಲ್ ಆಟ ದೇಶದ ತುಂಬಾ ಪ್ರಚಲಿತವಿದೆ. ವಿಶ್ವಕಪ್ ಹಾಗೂ ಇತರೆ ಪ್ರಮುಖ ಟೂರ್ನಿಗಳನ್ನು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಜನ ತುಂಬು ಅಭಿಮಾನದಿಂದ ನೋಡುತ್ತಾರೆ.

ಬಿಡ್‍ನಲ್ಲಿ ಭಾರತಕ್ಕೆ ಜಯ : ಅಜರ್‍ಬೈಜಾನ್, ಐರ್ಲೆಂಡ್, ಉಜ್ಛೇಕಿಸ್ಥಾನ ರಾಷ್ಟ್ರಗಳ ನಡುವೆ ಏರ್ಪಟ್ಟ ಅಂತಿಮ ಸುತ್ತಿನಲ್ಲಿ ಭಾರತಕ್ಕೆ ಫಿಫಾ ಆಯೋಜಿಸುವ 17 ವರ್ಷದವರೊಳಗಿನ ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸುವ ಅವಕಾಶ ದೊರೆತು, ಇದೇ ಅಕ್ಟೋಬರ್‍ನಲ್ಲಿ ಈ ಟೂರ್ನಿ ನಡೆಯಲಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ, ಸಂಭ್ರಮ ವನ್ನು ಕಣ್ತುಂಬಿ ಆನಂದಿಸುವ ಅವಕಾಶ.

ಆಯೋಜನೆಯೊಂದಿಗೆ ಭಾಗವಹಿಸುವಿಕೆ : ಇದೇ ವರ್ಷದ ಅಕ್ಟೋಬರ್ 6 ರಿಂದ 28ರವರೆಗೆ ಈ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. 24 ತಂಡಗಳ ರಣಕದನ ಆರು ನಗರಗಳಲ್ಲಿ ನಡೆಯಲಿದೆ. 32 ವರ್ಷಗಳಿಂದ ನಡೆಯುತ್ತಿರುವ ಈ 17 ವರ್ಷದ ಒಳಗಿನವರ ಈ ವಿಶ್ವಕಪ್ ಆತಿಥ್ಯವನ್ನು ಭಾರತ ವಹಿಸುವದ ರೊಂದಿಗೆ ಆತಿಥೇಯ ರಾಷ್ಟ್ರವಾಗಿರುವ ಕಾರಣ ಭಾರತಕ್ಕೆ ಭಾಗವಹಿಸಲು ಮೊದಲ ಬಾರಿ ಅವಕಾಶ ದೊರೆತಿದೆ. ಇದು ನಮ್ಮ ದೇಶದ ಫುಟ್ಬಾಲ್ ಇತಿಹಾಸದಲ್ಲಿ ವಿನೂತನ ಅಧ್ಯಾಯ ಬರೆಯಲಿದೆ. ಘಟಾನುಘಟಿ ವಿಶ್ವದ ತಂಡಗಳೊಡನೆ ಭಾರತದ ಸ್ಪರ್ಧೆ ಕನಸೊಂದು ನನಸಾಗಲಿದೆ.

ಟೂರ್ನಿಯ ವಿಶೇಷ ಅಂಕಿ ಅಂಶಗಳು : ಒಟ್ಟು ಪಾಲ್ಗೊಳ್ಳುವ ತಂಡಗಳ ಸಂಖ್ಯೆ 24, ನೈಜೀರಿಯಾ ತಂಡ 5 ಸಲ ವಿಶ್ವಕಪ್ ಜಯಿಸಿದ್ದರೆ, 75 ಸಲ ಅತೀ ಹೆಚ್ಚು ಬಾರಿ ಬ್ರೆಜಿಲ್ ಟೂರ್ನಿಯಲ್ಲಿ ಸ್ಪರ್ಧಿಸಿದೆ. 28 ಪಂದ್ಯಗಳಲ್ಲಿ ಸೋತ ಅಮೇರಿಕಾ ಅತೀ ಹೆಚ್ಚು ಸೋಲು ಕಂಡರೆ, 159 ಅತೀ ಹೆಚ್ಚು ಗೋಲುಗಳನ್ನು ಬ್ರೆಜಿಲ್ ಬಾರಿಸಿದೆ. ಒಂದು ಟೂರ್ನಿಯಲ್ಲಿ 172 ಗೋಲುಗಳನ್ನು ದಾಖಲಿಸಿದ ಗರಿಷ್ಠ ದಾಖಲೆಯು ವಿಶ್ವಕಪ್‍ನಲ್ಲಿದೆ. ಫಿಫಾ ವಿಶ್ವಕಪ್ ಪಂದ್ಯಗಳಿಗೆ ಗುವಾಹಟಿಯ ಕ್ರೀಡಾಂಗಣ ಸಜ್ಜಾಗಿ ನಿಂತಿದೆ.

ಭಾರತಕ್ಕೆ ಪ್ರಯೋಜನ : ಉತ್ತಮ ಫುಟ್ಬಾಲ್ ತÀಂಡ ಕಟ್ಟ ಬೇಕೆನ್ನುವ ಭಾರತದ ಕನಸಿಗೆ ಈಗ ಇಂಬು ದೊರೆತಿದೆ, ಭಾರತದಲ್ಲಿ ಐ ಲೀಗ್ ಮತ್ತು ಇಂಡಿಯನ್ ಸೂಪರ್‍ಲೀಗ್‍ನಂತಹ ಖ್ಯಾತಿಯೊಂದಿಗೆ, ವಿಶ್ವದ ಶ್ರೇಷ್ಠ ಆಟಗಾರರ ಪರಿಣಿತರ ಜೊತೆ ಆಡುವ ಅವಕಾಶ, ಅನುಭವದ ವಿಸ್ತಾರತೆ ಜೂನಿಯರ್ ಮಟ್ಟದಿಂದಲೇ ದೊರಕುತ್ತದೆ, ವಿದೇಶಿ ಆಟಗಾರರ ಕೌಶಲ್ಯಗಳು, ಆಟದ ವೇಗ, ತಂತ್ರಗಾರಿಕೆಗಳನ್ನು ಅರಿಯಲು ಭಾರತಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ. ಮತ್ತು ಭಾರತದಲ್ಲಿ ಫುಟ್ಬಾಲ್ ಆಸಕ್ತಿ ಇನ್ನೂ ಹೆಚ್ಚಾಗಲಿದೆ. ಫುಟ್ಬಾಲ್ ಫಡೆರೇಶನ್‍ಗೂ ಈ ವಿಶ್ವಕಪ್ ಸಂಘಟಿಸುವ ಹೊಣೆ ಸವಾಲಿನದಾಗಿದ್ದು, ಈಗಾಗಲೇ ಕಾರ್ಯ ತತ್ಪರವಾಗಿದೆ.

ಹೆಚ್ಚು ಗೆದ್ದವರು : ಈ 17 ವರ್ಷದವರೊಳಗಿನ ವಿಶ್ವಕಪ್‍ನಲ್ಲಿ ನೈಜಿರೀಯಾ 8 ಪದಕಗಳನ್ನು ಗಳಿಸಿದರೆ, ಬ್ರೆಜಿಲ್ 6, ಘಾನಾ 5, ಸ್ಪೇನ್ 5, ಮೆಕ್ಸಿಕೋ 3 ಪದಕ ಗಳನ್ನು ಗೆದ್ದಿದೆ. ಬ್ರೆಜಿಲ್ ದೇಶ ಅತೀ ಹೆಚ್ಚು 15 ಬಾರಿ ವಿಶ್ವಕಪ್‍ನಲ್ಲಿ ಸ್ಪರ್ಧಿಸಿದೆ, ಅತೀ ಹೆಚ್ಚು ಬಾರಿ ರನ್ನರ್ಸ್ ಅಪ್‍ನ್ನು ಸ್ಪೇನ್ ಮತ್ತು ನೈಜೀರಿಯಾ ಮೂರು ಬಾರಿ ಗಳಿಸಿದರೆ, ಟೂರ್ನಿಯಲ್ಲಿ ಅತೀ ಹೆಚ್ಚು ಗೋಲು ಗಳಿಸಿದ ದಾಖಲೆ 2013ರಲ್ಲಿ 23 ಗೋಲುಗಳು ಇದು ನೈಜಿರೀಯಾ ಸಾಧನೆಯಾಗಿದೆ. ಸ್ಪೇನ್ 13, ಗೋಲುಗಳ ಅಂತರಗಳ ಜಯ ಗಳಿಸಿತು.

ಜೂನಿಯರ್ ವಿಶ್ವಕಪ್ ಚಾಂಪಿಯನ್ ದೇಶಗಳು : 1985ರಲ್ಲಿ ನೈಜೀರಿಯಾ, 1987 ರಲ್ಲಿ ಸೋವಿಯತ್ ಯೂನಿಯನ್, 1989ರಲ್ಲಿ ಸೌದಿ ಅರೇಬಿಯಾ, 1991ರಲ್ಲಿ ಘಾನಾ, 1993ರಲ್ಲಿ ನೈಜೀರಿಯಾ, 1995ರಲ್ಲಿ ಘಾನಾ, 1997ರಲ್ಲಿ ಬ್ರೆಜಿಲ್, 2001 ರಲ್ಲಿ ಫ್ರಾನ್ಸ್, 2003ರಲ್ಲಿ ಬ್ರೆಜಿಲ್, 2005ರಲ್ಲಿ ಮೆಕ್ಸಿಕೋ, 2007ರಲ್ಲಿ ನೈಜಿರೀಯಾ, 2009ರಲ್ಲಿ ಸ್ವಿಟ್ಜರ್‍ಲ್ಯಾಂಡ್, 2011ರಲ್ಲಿ ಮೆಕ್ಸಿಕೋ, 2013ರಲ್ಲಿ ನೈಜೀರಿಯಾ, 2015ರಲ್ಲಿ ನೈಜೀರಿಯಾ ದೇಶಗಳು ಗೆಲುವನ್ನು ಸಾಧಿಸಿವೆ. ಈಗ 2015ರ ಚಾಂಪಿಯನ್ ಯಾರು ಎಂಬ ವಿಶ್ವ ಕುತೂಹಲ ಭಾರತ ನೆಲದಲ್ಲಿ ಮೂಡಿ ಅರಳಿ ನಿಂತಿದೆ.

ಭಾರತ ತಂಡ : ಭಾರತ ತಂಡದಲ್ಲಿ ಮಣಿಪುರ, ಪಶ್ಚಿಮ ಬಂಗಾಳ ಹಾಗೂ ಮಿಜೋರಾಂನ ರಾಜ್ಯಗಳ ಆಟಗಾರರೇ ಅಧಿಕವಾಗಿದ್ದು, ಕರ್ನಾಟಕದ ಸಂಜೀವ್ ಸ್ಟಾಲಿನ್‍ಗೂ ಕೂಡ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದ್ದು, ಸಂತೋಷ, ಈಗಾಗಲೇ ತಂಡ ಅಭ್ಯಾಸದಲ್ಲಿ ತೊಡಗಿದ್ದು, ವಿಶ್ವದ ಸಮರ ವೀರರೊಡನೆ ಕೆಚ್ಚೆದೆಯಿಂದ ಸ್ಪರ್ಧಿಸಲಿದೆ.

ಭಾರತಕ್ಕೆ ಜೂನಿಯರ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ದೊರೆತು ಸ್ಪರ್ಧೆಗೂ ಅವಕಾಶ ದೊರೆತಿರು ವದು ಸಂತೋಷದ ಸಂಗತಿ. ಈ ಅವಕಾಶದ ಸದುಪಯೋಗ ದೊರೆತು ಭಾರತ ವಿಶ್ವ ಮಟ್ಟದಲ್ಲಿ ಸಾಧÀನೆಗಳನ್ನು ಮಾಡು ವಂತಾಗಲಿ, ಬರಲಿರುವ ವಿಶ್ವಕಪ್ ಟೂರ್ನಿ ಯಶಸ್ವಿಯಾಗಲಿ.