ಮಡಿಕೇರಿ, ಮೇ 3: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಜನಾಂಗದ ನಡುವೆ ನಡೆಯುತ್ತಿರುವ ಕುಟುಂಬವಾರು ಪೈಕೇರ ಕ್ರಿಕೆಟ್ ಉತ್ಸವದಲ್ಲಿ ಆತಿಥೇಯ ಪೈಕೇರ ಕುಟುಂಬ ತಂಡ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದಿದೆ.

ಇಂದು ನಡೆದ ಪಂದ್ಯಾವಳಿಯಲ್ಲಿ ತೋಟಂಬೈಲು ತಂಡ 2 ವಿಕೆಟ್‍ಗೆ 59 ರನ್ ಗಳಿಸಿದರೆ, ಕಾಳೇರಮ್ಮನ ತಂಡ 4 ವಿಕೆಟ್‍ಗೆ 62 ರನ್ ಗಳಿಸಿ 6 ವಿಕೆಟ್‍ಗಳ ಜಯ ಸಂಪಾದಿಸಿತು. ಕಾಳೇರಮ್ಮನ ಪ್ರಸಾದ್ 26 ರನ್ ಗಳಿಸಿ ಗಮನ ಸೆಳೆದರು. ನಡುವಟ್ಟಿರ ತಂಡ 6 ವಿಕೆಟ್‍ಗೆ 23 ರನ್ ಗಳಿಸಿದರೆ, ಕಾಡುಪಂಜ ತಂಡ 2 ವಿಕೆಟ್‍ಗೆ 24 ರನ್ ಗಳಿಸಿ 8 ವಿಕೆಟ್‍ಗಳ ಜಯ ಗಳಿಸಿತು. ಚಪ್ಪೇರ ತಂಡ 4 ವಿಕೆಟ್‍ಗೆ 36 ರನ್ ಗಳಿಸಿದರೆ, ದಂಡಿನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಮುಂಡೋಡಿ ತಂಡ 7 ವಿಕೆಟ್‍ಗೆ 44 ರನ್ ಗಳಿಸಿದರೆ, ಹುದೇರಿ ತಂಡ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ 8 ವಿಕೆಟ್‍ಗಳ ಜಯ ಸಂಪಾದಿಸಿತು. ಅರಿಯನ ತಂಡ 4 ವಿಕೆಟ್‍ಗೆ 51 ರನ್ ಗಳಿಸಿದರೆ, ಬಿಟ್ಟಿರ ತಂಡ 8 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಅಯ್ಯಂಡ್ರ ತಂಡ 3 ವಿಕೆಟ್‍ಗೆ 76 ರನ್ ಗಳಿಸಿದರೆ, ಬೊಳ್ಳೂರು ತಂಡ 5 ವಿಕೆಟ್ ನಷ್ಟಕ್ಕೆ 44 ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಕಾಡುಪಂಜ ತಂಡ 5 ವಿಕೆಟ್‍ಗೆ 46 ರನ್ ಗಳಿಸಿದರೆ, ಉಳುವಾರನ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಉಳುವಾರನ ಮುರಳಿ 28 ರನ್ ಗಳಿಸಿ ಗಮನ ಸೆಳೆದರು.

ಬಾರಿಕೆ ಹಾಗೂ ತೂಟೇರ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಕೆ ತಂಡ 3 ವಿಕೆಟ್‍ಗೆ 64 ರನ್ ಗಳಿಸಿದರೆ, ತೂಟೇರ ತಂಡ 8 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿ ಸೋಲನುಭವಿಸಿತು. ಪೈಕೇರ ಹಾಗೂ ಬಿಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಪೈಕೇರ ತಂಡ 2 ವಿಕೆಟ್‍ಗೆ 90 ರನ್ ಗಳಿಸಿತು. ಬಿಟ್ಟಿರ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು 14 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಪೈಕೇರ ಪ್ರಿನ್ಸಿ 42 ರನ್ ಗಳಿಸಿ ಗಮನ ಸೆಳೆದರು. ಪೇರಿಯನ ತಂಡ 4 ವಿಕೆಟ್‍ಗೆ 76 ರನ್ ಗಳಿಸಿದರೆ ಕಳೆದ ಬಾರಿಯ ಆತಿಥೇಯ ಕುಟ್ಟನ ತಂಡ 2 ವಿಕೆಟ್‍ಗೆ 57 ರನ್ ಗಳಿಸಿ ಸೋಲನುಭವಿಸಿತು. ಪೇರಿಯನ ಯೋಗೇಶ್ 45 ರನ್ ಗಳಿಸಿ ಗಮನ ಸೆಳೆದರು. ತೇನನ ತಂಡ 4 ವಿಕೆಟ್‍ಗೆ 49 ರನ್ ಗಳಿಸಿದರೆ, ಮೇರ್ಕಜೆ ತಂಡ 7 ವಿಕೆಟ್‍ಗೆ 43 ರನ್ ಗಳಿಸಿ ಸೋಲನುಭವಿಸಿತು. ನಿಡುಂಬೆ ತಂಡ 5 ವಿಕೆಟ್‍ಗೆ 40 ರನ್ ಗಳಿಸಿದರೆ, ಪೋರೆಕುಂಜಿಲನ ತಂಡ 7 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಪೈಕೇರ ಹಾಗೂ ಪಾಣತ್ತಲೆ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಪೈಕೇರ ತಂಡ 4 ವಿಕೆಟ್‍ಗೆ 63 ರನ್ ಗಳಿಸಿತು. ಪಾಣತ್ತಲೆ ತಂಡ 9 ವಿಕೆಟ್ ಕಳೆದುಕೊಂಡು 35 ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಪೈಕೇರ ಗಗನ್ 40 ರನ್ ಗಳಿಸಿ ಗಮನ ಸೆಳೆದರು. ಪೊಕ್ಕುಳಂಡ್ರ ತಂಡ 5 ವಿಕೆಟ್‍ಗೆ 26 ರನ್ ಗಳಿಸಿದರೆ, ಪಾರೆಮಜಲು ತಂಡ 2 ವಿಕೆಟ್ ನಷ್ಟದಲ್ಲಿ 29 ರನ್ ಗಳಿಸಿ ಗುರಿ ಸಾಧಿಸಿತು.