ಮಡಿಕೇರಿ, ಮೇ 3: ಕೊಡಗಿನ ಬುಡಕಟ್ಟು ಮೂಲ ನಿವಾಸಿಗಳಾದ ಕೊಡವ ಜನಾಂಗದ ಬದುಕಿಗೆ ಸಂಬಂಧಪಟ್ಟಂತೆ ಕೊಡವ ಕುಲಶಾಸ್ತ್ರ ಅಧ್ಯಯನ ನಡೆಸುವ ಮೂಲಕ ಜನಾಂಗಕ್ಕೆ ಸಂವಿಧಾನ ಬದ್ಧ ರಕ್ಷಣೆ ನೀಡಬೇಕೆಂಬ ಆಗ್ರಹದೊಂದಿಗೆ ಸಿ.ಎನ್.ಸಿ. ಕೋಟೆ ಆವರಣದಲ್ಲಿ ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದು ಕೊಳ್ಳಲಾಗಿದೆ.ಶಾಸಕ ಕೆ.ಜಿ. ಬೋಪಯ್ಯ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿ ಮಾತನಾಡಿ ರಾಜ್ಯ ವಿಧಾನಸಭಾ ಅಧಿವೇಶನ ಜೂನ್ ಎರಡನೇ ವಾರದಲ್ಲಿ ಆರಂಭಗೊಳ್ಳಲಿದೆ. ಅಧಿವೇಶನದಲ್ಲಿ ಕೊಡಗಿನ ಬುಡಕಟ್ಟು ಮೂಲ ನಿವಾಸಿಗಳಾದ ಕೊಡವ ಜನಾಂಗದ ಕುಲಶಾಸ್ತ್ರ ಅಧ್ಯಯನ ನಡೆಸಿ ಸಂವಿಧಾನ ಬದ್ಧ ರಕ್ಷಣೆ ನೀಡುವಂತೆ ಆಗ್ರಹಿಸಲಾಗುವದು. ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ಸಿ.ಎನ್.ಸಿ. ನೇತೃತ್ವದಲ್ಲಿ ಹೋರಾಟ ಮಾಡಿಕೊಂಡು ಬರಲಾಗಿದೆ.

ತನ್ನ ಪ್ರಭಾವವನ್ನು ಬಳಸಿ ಸರಕಾರದ ಮುಂದೆ ಬೇಡಿಕೆಯನ್ನು ಮಂಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಶಾಸಕ ಕೆ.ಜಿ. ಬೋಪಯ್ಯ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸುವದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗುವದು. ಇನ್ನು ಮೂರು ತಿಂಗಳ ಗಡುವು ನೀಡಿ, ಬೇಡಿಕೆ ಈಡೇರದಿದ್ದಲ್ಲಿ ಈ ಸಂಬಂಧ ಮತ್ತೆ ಅಹೋರಾತ್ರಿ ಸತ್ಯಾಗ್ರಹ ನಡೆಸುವದಲ್ಲದೆ ಇಡೀ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಸಿ.ಎನ್.ಸಿ. ಜನಜಾಗೃತಿಗಾಗಿ ಪಾದಯಾತ್ರೆ ಕೈಗೊಳ್ಳಲಿದೆ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅರೆಯಡ ಗಿರೀಶ್,

(ಮೊದಲ ಪುಟದಿಂದ) ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಕಾಂಡೆರ ಸುರೇಶ್, ಪುಲ್ಲೆರ ಕಾಳಪ್ಪ, ಪುಲ್ಲೆರ ಸ್ವಾತಿ, ಪುಲ್ಲೆರ ಶಿವಾನಿ, ಪೊರಿಮಂಡ ದಿನಮಣಿ, ಚೋಳಪಂಡ ನಾಣಯ್ಯ, ಚೋಳಪಂಡ ವಿಜಯ, ಪಳಂಙಂಡ ಮುದ್ದಪ್ಪ, ಕೆಚ್ಚೆಟಿರ ಶಂಭು, ಪಟ್ಟಮಾಡ ಸುರೇಶ್, ಬಾಚಮಂಡ ಬೆಲ್ಲು, ಬಾಚಮಂಡ ಕಸ್ತೂರಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಪ್ಪಾರಂಡ ಪ್ರಕಾಶ್, ಅರೆಯಡ ಸವಿತ, ಚಂಬಂಡ ಜನತ್, ಬೇಪಡಿಯಂಡ ದಿನು, ಕೂಪದಿರ ಸಾಬು, ನಂದಿನೆರವಂಡ ವಿಜು, ನಂದಿನೆರವಂಡ ನಿಶ, ನಂದಿನೆರವಂಡ ಕೃಪ, ನಂದಿನೆರವಂಡ ದಿನೇಶ್, ಮುಂಜಾಂದಿರ ವಕ್ಷಿತ, ಮುಂಜಾಂದಿರ ಜಯಂತಿ, ಚೋಳಪಂಡ ಶೀಲ, ಬಾಳೆಯಡ ಮೀನಾ ಕುಮಾರಿ, ಪುಲ್ಲೆರ ಬೋಪಯ್ಯ, ಪುಲ್ಲೆರ ಕನಿಕೆ, ಅಪ್ಪೆಂಗಡ ಮಾಲೆ, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ರೀನಾ ಪೂವಣ್ಣ, ಅಪ್ಪಾರಂಡ ವಿನ್ಸಿ ಪ್ರಸಾದ್, ಕೋಳೆರ ಜಾನ್ಸಿ ಜೀವನ್, ಪೊರಿಮಂಡ ರವಿ ನಾಣಯ್ಯ, ಅಪ್ಪಾರಂಡ ತಿಮ್ಮಯ್ಯ ಪ್ರಸಾದ್, ಕೋಳೆರ ದಕ್ಷ ದೇವಯ್ಯ, ಅಪ್ಪಾರಂಡ ವಿಸ್ಮಿತ ಪೂವಣ್ಣ, ಕಡೇಮಾಡ ಉಮಾ ಪೊನ್ನಪ್ಪ, ಅಜ್ಜೇಟಿರ ಶಂಭು, ಬಲ್ಲಾರಂಡ ದೇವಯ್ಯ ಮತ್ತು ಅರಮಣಮಾಡ ಉದಯ ಉಪಸ್ಥಿತರಿದ್ದರು.