ಚೆಟ್ಟಳ್ಳಿ, ಮೇ 3: ಹಿಂದೂ ದೇಶವಾದ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಹಿಂದೂಗಳು ಪೂಜಿಸುವ ಗೋವುಗಳ ಹತ್ಯೆ, ದೇವ ಮಂದಿರಗಳ ನಾಶ, ಮತಾಂತರ ಇವುಗಳು ಸಮಾಜದ ಪಿಡುಗಾಗಿ ಪರಿಣಮಿಸಿವೆ. ಹಿಂದೂ ಬಾಂಧವರು ತಮ್ಮತನವನ್ನು ಉಳಿಸಲು ಇಂದು ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಎಂದು ಜನಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದ್ದಾರೆ. ಸಮಾಜವನ್ನು ಜಾಗೃತಗೊಳಿಸಲು ತಾ. 5 ರಂದು ನೆಲ್ಲಿಹುದಿಕೇರಿಯಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವಕ್ಕೆ ಬೆಂಬಲಿಸುವದಾಗಿ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಡಿಕೇರಿ: ಸಿದ್ದಾಪುರದಲ್ಲಿ ತಾ. 5 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಎಸ್.ಸಿ ಸತೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಸಮಾ ಜೋತ್ಸವದ ಯಶಸ್ವಿಗೆ ಸಕ್ರಿಯವಾಗಿ ತೊಡಗಿಸಿ ಕೊಂಡಿರುವದಾಗಿ ತಿಳಿಸಿದ್ದಾರೆ.

ಮಡಿಕೇರಿ: ನೆಲ್ಯಹುದಿಕೇರಿಯಲ್ಲಿ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಕೊಡಗಿನ ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳುವ ಮೂಲಕ ಹಿಂದೂ ಸಮಾಜದ ಸಂಘಟನೆಯ ಶಕ್ತಿ ಪ್ರದರ್ಶನ ಮಾಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಮನವಿ ಮಾಡಿದ್ದಾರೆ.

ಹಿಂದೂಗಳ ಶ್ರದ್ದಾ ಕೇಂದ್ರಗಳನ್ನು ಹಾನಿಗೊಳಿಸುವದು, ಹಿಂದೂಗಳ ಭಾವನೆಯನ್ನು ಹತ್ತಿಕ್ಕುವದೂ ಸೇರಿದಂತೆ ಮಲಬಾರಿನ ಭಯೋತ್ಪಾದಕ ಸಂಘಟನೆಗಳು ಕೊಡಗಿನಲ್ಲಿ ತಮ್ಮ ನೆಲೆಯೂರುವ ಮೂಲಕ ಕಾವೇರಿ ಮಾತೆಯ ನಾಡಿಗೆ ತೊಂದರೆ ಉಂಟು ಮಾಡಲು ಷಡ್ಯಂತ್ರ ಹೂಡುತ್ತಿದೆ. ಇಂಥ ಹಿಂದೂ ವಿರೋಧಿ ಕ್ರಮಕ್ಕೆ ಕೊಡಗು ಎಂದಿಗೂ ವೇದಿಕೆಯಾಗಬಾರದು. ಹಿಂದೂ ಸಮಾವೇಶವನ್ನು ಬೆಂಬಲಿಸುವದು ಪ್ರತೀಯೋರ್ವ ಹಿಂದೂಗಳ ಕರ್ತವ್ಯ ಎಂದೂ ನಾಚಪ್ಪ ಹೇಳಿದ್ದಾರೆ.

ಸೋಮವಾರಪೇಟೆ: ತಾ. 5ರಂದು ತಾಲೂಕಿನ ನೆಲ್ಲಿಹುದಿಕೇರಿ ಯಲ್ಲಿ ಆಯೋಜಿಸಿರುವ ಹಿಂದೂ ಸಮಾಜೋತ್ಸವ ಹಾಗೂ ಅದೇ ದಿನ ಸಂಜೆ 4 ಗಂಟೆಗೆ ಸೋಮವಾg Àಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿರುವ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮಗಳಿಗೆ ಮಡಿಕೇರಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಬೆಂಬಲ ನೀಡಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಕೊಮಾರಪ್ಪ ಹಾಗೂ ಕಾರ್ಯದರ್ಶಿ ಮನುಕುಮಾರ್ ರೈ ತಿಳಿಸಿದ್ದಾರೆ.

ಕುಶಾಲನಗರ: ವಿಶ್ವ ಹಿಂದೂ ಪರಿಷದ್ ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಘಟಕದ ಅಧ್ಯಕ್ಷ ಆನಂದ್ ರಘು ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎನ್.ದೇವರಾಜ್ ತಿಳಿಸಿದ್ದು, ಹಿಂದೂ ಸಮಾಜವನ್ನು ಸಂಘಟಿತರಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸಮಾಜೋತ್ಸವ ಯಶಸ್ವಿಯಾಗುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗಗಳ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಕೋರಿದ್ದಾರೆ.

ಸುಂಟಿಕೊಪ್ಪ

ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ತಾ. 5ರಂದು ಸಿದ್ದಾಪುರದ ನೆಲ್ಯಹುದಿಕೇರಿ ಯಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಅಂಗವಾಗಿ ಬುಧವಾರ ಇಲ್ಲಿನ ವಿಹೆಚ್ ಪಿ ಮತ್ತು ಭಜರಂಗದಳದ ವತಿಯಿಂದ ಬೈಕ್ ಮತ್ತು ವಾಹನ ಜಾಥಾ ನಡೆಯಿತು.

ನೂರಾರು ಹಿಂದೂ ಕಾರ್ಯಕರ್ತರು ಸಮೀಪದ ಕೆದಕಲ್ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಮುಗಿಸಿದ ನಂತರ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಜಾಥಾಕ್ಕೆ ಚಾಲನೆ ನೀಡಿದರು. ಗದ್ದೆಹಳ್ಳ, ಸುಂಟಿಕೊಪ್ಪ, ಕೊಡಗರಹಳ್ಳಿ ಮಾರ್ಗವಾಗಿ ಏಳನೇ ಹೊಸಕೋಟೆ ಗಣಪತಿ ದೇವಾಲಯದವರೆಗೆ ಸಾಗಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ವೈ.ಎಂ. ಕರುಂಬಯ್ಯ, ಸೋಮಯ್ಯ, ಪ್ರಮುಖರಾದ ಬಿ.ಕೆ. ಮೋಹನ್, ವಿಘ್ನೇಶ್, ಓಡಿಯಪ್ಪನ ಸುದೇಶ್, ರಾಕೇಶ್, ಬಿ.ಕೆ.ಪ್ರಶಾಂತ್, ನಾಗೇಶ್ ಪೂಜಾರಿ, ರಿವರ್ ಸೈಡ್ ಬೋಪಣ್ಣ, ತುಷಾರ್, ಹರ್ಷ ಇತರರು ಇದ್ದರು.