ಗೋಣಿಕೊಪ್ಪಲು, ಮೇ 6: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನ ಪಂದ್ಯಗಳಲ್ಲಿ 13 ತಂಡಗಳು ಗೆಲುವು ಪಡೆದು ಮುನ್ನಡೆ ಸಾಧಿಸಿವೆ.

ಚಿಂಡಮಾಡ ತಂಡವು ಬೊಳ್ಳಜೀರ ತಂಡವನ್ನು 10 ವಿಕೆಟ್‍ಗಳಿಂದ ಸೋಲಿಸಿತು. ಬೊಳ್ಳಜೀರ 9 ವಿಕೆಟ್‍ಗೆ 27 ರನ್ ಗಳಿಸಿದರೆ, ಚಿಂಡಮಾಡ ವಿಕೆಟ್ ನಷ್ಟವಿಲ್ಲದೆ 28 ರನ್ ಬಾರಿಸಿತು.

ನಂದೇಟೀರ ಬೊಜ್ಜಂಗಡ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿತು. ನಂದೇಟೀರ 5ಕ್ಕೆ 51 ರನ್, ಬೊಜ್ಜಂಗಡ 4 ಚೆಂಡು ಉಳಿದಿರುವಂತೆ 45 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ದೇಯಂಡ ಕೊಣಿಯಂಡ ವಿರುದ್ಧ 9 ವಿಕೆಟ್ ಗೆಲುವು ಪಡೆಯಿತು. ಕೊಣಿಯಂಡ 6ಕ್ಕೆ 51 ರನ್, ದೇಯಂಡ 7 ಚೆಂಡು ಉಳಿದಿರುವಂತೆ ಗೆಲುವಿನ ನಗೆ ಬೀರಿತು.

ಚೊಟ್ಟೆಯಂಡಮಾಡ ಅಮ್ಮಣಿಚಂಡ ವಿರುದ್ಧ 8 ವಿಕೆಟ್ ಗೆಲುವು ಪಡೆಯಿತು. ಅಮ್ಮಣಿಚಂಡ 6ಕ್ಕೆ 61 ರನ್, ಚೊಟ್ಟೆಯಂಡಮಾಡ 2 ವಿಕೆಟ್‍ಗೆ 6.1 ಓವರ್‍ಗಳಲ್ಲಿ ಗುರಿ ಮುಟ್ಟಿತು.

ತಂಬುಕುತ್ತೀರ ಕರಿನೆರವಂಡ ತಂಡವನ್ನು 9 ವಿಕೆಟ್‍ಗಳಿಂದ ಮಣಿಸಿತು. ಕರಿನೆರವಂಡ 7ಕ್ಕೆ 53 ರನ್, ತಂಬುಕುತ್ತೀರ 1 ವಿಕೆಟ್‍ಗೆ 55 ರನ್ ಬಾರಿಸಿತು.

ಕಾರ್ಮಾಡ್ ಕುಟ್ಟಂಡ ಕುಂಡಚ್ಚೀರವನ್ನು 22 ರನ್‍ಗಳಿಂದ ಸೋಲಿಸಿತು. ಕುಟ್ಟಂಡ 5 ಕ್ಕೆ 74 ರನ್, ಕುಂಡಚ್ಚೀರ 8ಕ್ಕೆ 55 ರನ್ ಗಳಿಸಿತು.

ಕಳಕಂಡ ಮುಕ್ಕಾಟೀರ (ಕುಂಬಳದಾಳ್) ವನ್ನು 9 ವಿಕೆಟ್‍ಗಳಿಂದ ಮಣಿಸಿತು. ಮುಕ್ಕಾಟೀರ 6ಕ್ಕೆ 36 ರನ್, ಕಳಕಂಡ 1 ವಿಕೆಟ್‍ಗೆ 37 ರನ್ ಬಾರಿಸಿತು.

ಮಚ್ಚಮಾಡ ಮುಂಡಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಮುಂಡಂಡ 8 ವಿಕೆಟ್‍ಗೆ 54 ರನ್, ಮಚ್ಚಮಾಡ 5.1 ಓವರ್‍ಗೆ 1 ವಿಕೆಟ್ ನಷ್ಟಕ್ಕೆ 58 ರನ್ ಬಾರಿಸಿತು.

ಮಂದೇಯಂಡ ನೆಲ್ಲಚಂಡ ವಿರುದ್ಧ 12 ರನ್‍ಗಳ ಗೆಲುವು ದಾಖಲಿಸಿತು. ಮಂದೇಯಂಡ 7ಕ್ಕೆ 91 ರನ್, ನೆಲ್ಲಚಂಡ 9ಕ್ಕೆ 79 ರನ್ ಗಳಿಸಿತು.

ಸಬ್ಬುಡ ಉಡುವೇರ ವಿರುದ್ಧ 8 ವಿಕೆಟ್ ಗೆಲುವು ಪಡೆಯಿತು. ಸಬ್ಬುಡ 2ಕ್ಕೆ 53 ರನ್, ಉಡುವೇರ 7 ವಿಕೆಟ್‍ಗೆ 52 ರನ್ ಗಳಿಸಿತು.

ಕಾಡ್ಯಾಮಾಡ ತಂಡಕ್ಕೆ ಅರಮಣಮಾಡ (ಬೇಗೂರ್) ವಿರುದ್ಧ 8 ವಿಕೆಟ್ ಗೆಲುವು ದಕ್ಕಿತು. ಕಾಡ್ಯಾಮಾಡ 2 ವಿಕೆಟ್‍ಗೆ 51 ರನ್, ಅರಮಣಮಾಡ 6ಕ್ಕೆ 42 ರನ್ ಬಾರಿಸಿತು.

ಮೂಕಳೇರ ಕೊಲ್ಲೀರವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಕೊಲ್ಲೀರ 4ಕ್ಕೆ 48 ರನ್, ಮೂಕಳೇರ 1 ವಿಕೆಟ್‍ಗೆ 49 ರನ್ ದಾಖಲಿಸಿತು.

ಗೀಜಿಗಂಡ ಮೇದೂರ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿತು. ಮೇದೂರ 2ಕ್ಕೆ 75 ರನ್, ಗೀಜಿಗಂಡ 5ಕ್ಕೆ 76 ರನ್ ಬಾರಿಸಿತು.

ಪಂದ್ಯ ಪುರುಷರುಗಳಾಗಿ ಮುಕ್ಕಾಟೀರ ವಿಶಾಲ್ (ಕುಂಬಳದಾಳ್), ಮುಂಡಂಡ ಪವನ್, ನೆಲ್ಲಚಂಡ ಯೋಗೇಶ್, ಉಡುವೇರ ಶಿವ, ಬೇಗೂರ್ ಅರಮಣಮಾಡ ದಿಲಿಪ್, ಕೊಲ್ಲೀರ ಅಪ್ಪಚ್ಚು, ಮೇದೂರ ನಿಖಿಲ್, ಬೊಳ್ಳಜೀರ ಚೆಂಗಪ್ಪ, ಬೊಜ್ಜಂಗಡ ದರ್ಶನ್, ಕೊಣಿಯಂಡ ಮುತ್ತಣ್ಣ, ಅಮ್ಮಣಿಚಂಡ ಬೋಪಣ್ಣ, ಕರಿನೆರವಂಡ ದಿವಿನ್ ಹಾಗೂ ಕುಂಡಚ್ಚೀರ ಮಂಜು ಪಡೆದುಕೊಂಡರು.