ಸೋಮವಾರಪೇಟೆ, ಮೇ 7: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆಸಿರುವದಾಗಿ ದೂರಿರುವ ಬಜೆಗುಂಡಿಯ ಪಾಂಚಜನ್ಯ ಯುವಸೇನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಚಜನ್ಯ ಸೇನೆಯ ಅಧ್ಯಕ್ಷ ಬಿ.ಜಿ. ಪ್ರಶಾಂತ್, ಪಂಚಾಯಿತಿಯಲ್ಲಿ ಬ್ಯಾಟರಿ ಖರೀದಿ ಮತ್ತು ಶೌಚಾಲಯ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ವಾಟ್ಸ್‍ಅಪ್‍ನಲ್ಲಿ ಚರ್ಚಿಸಿದ್ದನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಇಲಾಖೆಯಿಂದ ತಮ್ಮ ಸಹೋದರರು ಸೇರಿದಂತೆ ಮಗನಿಗೆ ಮೂರು ವಾಹನ ಕೊಡಿಸಿದ್ದಾರೆ. ಇವರ ಮಗ ವಿದೇಶದಲ್ಲಿದ್ದು, ಸರ್ಕಾರದ ಸೌಲಭ್ಯ ದುರುಪಯೋಗವಾಗಿದೆ. ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರು ಈ ಬಗ್ಗೆ ಉತ್ತರಿಸಬೇಕಿದೆ. ಸಂಬಂಧಿಸಿದ ಇಲಾಖೆಗೆ ಈ ಬಗ್ಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಪ್ರಶಾಂತ್ ತಿಳಿಸಿದರು.

ಬೇಳೂರು ಗ್ರಾ.ಪಂ.ನಲ್ಲಿ ನಡೆದಿರುವ ಅವ್ಯವಹಾರಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ತಲೆಗೆ ಕಟ್ಟುವ ಯತ್ನ ನಡೆಯುತ್ತಿದೆ. ಯಾವದೇ ಕಾರಣಕ್ಕೂ ಪಿಡಿಓ ಅವರನ್ನು ವರ್ಗಾವಣೆ ಮಾಡದೇ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಪಾಂಚಜನ್ಯ ಯುವ ಸೇನೆಯ ಪದಾಧಿಕಾರಿಗಳಾದ ವಿ.ಆರ್. ಮಹೇಶ್, ಬಿ.ಎಂ. ಪ್ರಶಾಂತ್, ಮಿಥುನ್ ಶೆಟ್ಟಿ, ವಿಶು ಪೂವಯ್ಯ ಅವರುಗಳು ಉಪಸ್ಥಿತರಿದ್ದರು.