ಗೋಣಿಕೊಪ್ಪಲು, ಮೇ 7 : ಹಾತೂರು ಪ್ರೌಢಶಾಲೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಮನ್ನಕಮನೆ ಕ್ರಿಕೆಟ್ ಕಪ್ನಲ್ಲಿ ಆತಿಥೇಯ ಮನ್ನಕಮನೆಗೆ ಗೆಲುವು ಲಭಿಸಿದೆ.
ಮನ್ನಕಮನೆ ತಂಡವು ಚಿಲ್ಲಜಮ್ಮಂಡ ವಿರುದ್ಧ 10 ವಿಕೆಟ್ ಗೆಲುವು ದಾಖಲಿಸಿತು. ಚಿಲ್ಲಜಮ್ಮಂಡ 3 ವಿಕೆಟ್ಗೆ 39 ರನ್, ಮನ್ನಕಮನೆ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿತು.
ಅಚ್ಚಿಯಂಡ ತಂಡವು ಬಾನಂಡ ವಿರುದ್ಧ 7 ವಿಕೆಟ್ ಗೆಲುವು ಪಡೆಯಿತು. ಬಾನಂಡ 3 ಕ್ಕೆ 51 ರನ್, ಅಚ್ಚಿಯಂಡ 3 ಕ್ಕೆ 55 ರನ್ ಗಳಿಸಿತು.
ಗಂಭೀರ ತಂಡವು ಚಮ್ಮಣಮಾಡ ತಂಡವನ್ನು 34 ರನ್ಗಳಿಂದ ಸೋಲಿಸಿತು. ಗುಂಭೀರ 2 ವಿಕೆಟ್ಗೆ 92 ರನ್, ಚಮ್ಮಣಮಾಡ 5 ವಿಕೆಟ್ಗೆ 58 ರನ್ ದಾಖಲಿಸಿತು.
ಚಿಲ್ಲಜಮ್ಮಂಡ ತಂಡ ನೆರಿಯಮ್ಮಂಡ ವಿರುದ್ಧ 22 ರನ್ಗಳಿಂದ ಜಯ ಗಳಿಸಿತು. ಚಿಲ್ಲಜಮ್ಮಂಡ 5 ಕ್ಕೆ 91 ರನ್, ನೆರಿಯಮ್ಮಂಡ 2 ಕ್ಕೆ 69 ರನ್ ಗಳಿಸಿತು.
ಬಲ್ಯಂಡ ತಂಡವು ಚೊಟ್ಟೋಳಿಯಮ್ಮಂಡ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿತು. ಬಲ್ಯಂಡ 66 ರನ್, ಚೊಟ್ಟೋಳಿಯಮ್ಮಂಡ 4 ಕ್ಕೆ 65 ರನ್ ಗಳಿಸಿತು.
ಆಂಡಮಾಡ ತಂಡವು ಅಚ್ಚಿಯಂಡ ವಿರುದ್ಧ 7 ವಿಕೆಟ್ ಗೆಲುವು ಪಡೆಯಿತು. ಆಂಡಮಾಡ 3 ಕ್ಕೆ 67 ರನ್, ಅಚ್ಚಿಯಂಡ 4 ಕ್ಕೆ 54 ರನ್ ಬಾರಿಸಿತು.
v