ಗೋಣಿಕೊಪ್ಪಲು, ಮೇ 7 : ಕಾಂಗ್ರೆಸ್ ಚೈತನ್ಯದ ಶಕ್ತಿಯಾಗಿದ್ದು ಅಲ್ಪಸಂಖ್ಯಾತರಿಗೆ ಸ್ಥಾನಮಾನಗಳನ್ನು ನೀಡುವ ಏಕೈಕ ಪಕ್ಷವಾಗಿದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಹೇಳಿದರು.

ಮೇ 15 ರಂದು ಕುಶಾಲನಗರದ ರೈತ ಭವನದಲ್ಲಿ ನಡೆಯಲಿರುವ ಅಲ್ಪಸಂಖ್ಯಾತರ ಸಮಾವೇಶದ ಪೂರ್ವಾಬಾವಿ ಸಭೆಯು ಗೋಣಿಕೊಪ್ಪ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಚುನಾವಣೆ ನಮ್ಮ ಮುಂದಿರುವದರಿಂದ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಅಲ್ಪಸಂಖ್ಯಾತರದಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಮನೆಮನೆಗೆ ತಿಳಿಸಬೇಕೆಂದು ಕರೆ ನೀಡಿದರು.

ಮೈಸೂರು ವಿಭಾಗೀಯ ಸಂಚಾಲಕ ರಫೀಕ್ ಅಹಮ್ಮದ್ ಮಾತನಾಡಿ, ಅಲ್ಪಸಂಖ್ಯಾತರ ಎಳಿಗೆಗೆ ಕಾಂಗ್ರೆಸ್ ಸರ್ಕಾರ ನೂರಾರೂ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಮುಂದೆಯೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಆಶಾಭಾವನೆ ಇದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಅಲ್ಪಸಂಖ್ಯಾತ ಅಭಿವೃದ್ಧಿಗಾಗಿ ಸರ್ಕಾರ ಎಲ್ಲಾವನ್ನು ನೀಡುತ್ತಿದೆ ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಾಂಗ್ರೆಸ್ ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ ಗುಂಪುಗಾರಿಕೆಯ ಬಗ್ಗೆ ಅಪಸ್ವರವಿದೆ ಅದನ್ನು ಪಕ್ಷದ ಮುಖಂಡರು ನಿಭಾಯಿಸುತ್ತಾರೆ. ಜಿಲ್ಲೆಗೆ ನೀಡಿರುವ ಯೋಜನೆಗಳನ್ನು ಜನತೆಗೆ ತಿಳಿಸಬೇಕಾಗಿರುವದು ಕಾರ್ಯಕರ್ತನ ಜವಾಬ್ದಾರಿ ಚುನಾವಣೆ ಸಂದರ್ಭ ಪಕ್ಷ ನಿರ್ಧರಿಸುವ ಅಭ್ಯರ್ಥಿಗೆ ಶಕ್ತಿ ಮೀರಿ ದುಡಿದು ಗೆಲ್ಲಿಸಬೇಕೆಂದು ಕರೆ ನೀಡಿದರು.

ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನಮಾನಗಳನ್ನು ನೀಡುವ ಮೂಲಕ ಜಾತ್ಯತೀತ ನಿಲುವನ್ನು ಪಕ್ಷ ಹೊಂದಿದೆ ಮುಂದೆ ಎಲ್ಲರೂ ಜೊತೆಗೂಡಿ ಪಕ್ಷ ಕಟ್ಟಬೇಕೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ್ಜ ಉತ್ತಪ್ಪ ಹೇಳಿದರು.

ವೇದಿಕೆಯಲ್ಲಿ ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಕಲೀಂಮುಲ್ಲಾ, ರಾಜ್ಯ ಕಾಂಗ್ರೆಸ್ ಮುಖಂಡ ನಟರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಕೆ ಪೋಕುಟ್ಟಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಸದಸ್ಯ ಶಮೀರ್, ಮುಖಂಡರುಗಳಾದ ಎ.ಜೆ ಬಾಬು, ಸಲಾಂ, ಗ್ರಾ.ಪಂ ಸದಸ್ಯರಾದ ಯಾಸ್ಮಿನ್, ಶಾಹಿನ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.