ಗೋಣಿಕೊಪ್ಪಲು, ಮೇ 7 : ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಚಿಮ್ಮಣಮಾಡ ತಂಡ 120 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಸಂಚಲನ ಮೂಡಿಸಿತು.

ಚಿಮ್ಮಣಮಾಡ, ತಾತೀರ ವಿರುದ್ದ 145 ರನ್ ದಾಖಲಿಸಿತು. ಚಿಮ್ಮಣಮಾಡ 1 ವಿಕೆಟ್‍ಗೆ 145 ರನ್ ದಾಖಲಿಸಿತು. ತಾತೀರ 9 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿ ಸೋಲನುಭವಿಸಿತು. ಚಿಮ್ಮಣಮಾಡ ಪರ ಧೃತಿ ಅಯ್ಯಪ್ಪ 87 ರನ್, ಚಿಮ್ಮಣಮಾಡ ಭುವನ್ 3 ವಿಕೆಟ್ ಪಡೆದು ಮಿಂಚಿದರು.

ಮಾಚೇಟೀರ ತಂಡವು ಪುಲಿಯಂಡ ವಿರುದ್ದ 9 ವಿಕೆಟ್ ಗೆಲುವು ದಾಖಲಿಸಿತು. ಪುಲಿಯಂಡ 11 ರನ್‍ಗೆ 10 ವಿಕೆಟ್ ಕಳೆದುಕೊಂಡಿತು.

ಮಿನ್ನಂಡ ತಂಡವು ಮೊದಲ ಸುತ್ತಿನಲ್ಲಿ ಬಲ್ಲಿಮಾಡ ವಿರುದ್ದ 6 ವಿಕೆಟ್ ಗೆಲುವು ಪಡೆಯಿತು. ಬಲ್ಲಿಮಾಡ 6 ಕ್ಕೆ 39 ರನ್, ಮಿನ್ನಂಡ 4 ವಿಕೆಟ್ 40 ರನ್ ಬಾರಿಸಿತು.

ಮತ್ತೊಂದು ಪಂದ್ಯದಲ್ಲಿ ಮಿನ್ನಂಡ ತಂಡವು ಮಾಚೇಟೀರ ವಿರುದ್ದ 6 ವಿಕೆಟ್ ಗೆಲುವು ಪಡೆಯಿತು. ಮಾಚೇಟೀರ 4 ಕ್ಕೆ 57 ರನ್, ಮಿನ್ನಂಡ 6 ವಿಕೆಟ್ ನಷ್ಟಕ್ಕೆ 63 ರನ್ ದಾಖಲಿಸಿತು.

ಚಿಂಡಮಾಡ ತಂಡವು ಮುಕ್ಕಾಟೀರ (ಅರಪಟ್ಟ್)ವನ್ನು 10 ವಿಕೆಟ್‍ಗಳಿಂದ ಸೋಲಿಸಿತು. ಮುಕ್ಕಾಟೀರ 5 ಕ್ಕೆ 66 ರನ್, ಚಿಂಡಮಾಡ ವಿಕೆಟ್ ನಷ್ಟವಿಲ್ಲದೆ 68 ರನ್ ಗಳಿಸಿತು.

ನೆರವಂಡ ತಂಡವು ಬೊಳ್ಯಡ ತಂಡವನ್ನು 10 ವಿಕೆಟ್‍ಗಳಿಂದ ಸೋಲಿಸಿತು. ಬೊಳ್ಯಡ 5 ವಿಕೆಟ್‍ಗೆ 36 ರನ್, ನೆರವಂಡ ವಿಕೆಟ್ ನಷ್ಟವಿಲ್ಲದೆ 38 ರನ್ ಬಾರಿಸಿತು.

ಚಿರಿಯಪಂಡ ತಂಡವು ಪುಟ್ಟಿಚಂಡ ತಂಡವನ್ನು 7 ವಿಕೆಟ್‍ಗಳಿಂದ ಮಣಿಸಿತು. ಪುಟ್ಟಿಚಂಡ 10 ಕ್ಕೆ 33 ರನ್, ಚಿರಿಯಪಂಡ 3 ಕ್ಕೆ 39 ರನ್ ಬಾರಿಸಿತು.

ಮಲ್ಚೀರ ತಂಡ ಚಿಕ್ಕಂಡ ವಿರುದ್ಧ 4 ರನ್‍ಗಳ ಗೆಲುವು ದಾಖಲಿಸಿತು. ಮಲ್ಚೀರ 9 ಕ್ಕೆ 57 ರನ್, ಚಿಕ್ಕಂಡ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು.

ಕಾಣತಂಡ ತಂಡವು ಉದಯಂಡ ವಿರುದ್ದ 8 ವಿಕೆಟ್ ಗೆಲುವು ಪಡೆಯಿತು. ಉದಯಂಡ 1 ವಿಕೆಟ್‍ಗೆ 80 ರನ್, ಕಾಣತಂಡ 2 ವಿಕೆಟ್‍ಗೆ 81 ರನ್ ದಾಖಲಿಸಿತು.

ಪೊನ್ನಂಚಂಡ ತಂಡವು ಚಿಯಕ್‍ಪೂವಂಡ ತಂಡವನ್ನು 8 ರನ್‍ಗಳಿಂದ ಮಣಿಸಿತು. ಪೊನ್ನಚಂಡ 3 ವಿಕೆಟ್‍ಗೆ 98 ರನ್, ಚಿಯಕ್‍ಪೂವಂಡ 5 ವಿಕೆಟ್‍ಗೆ 90 ರನ್ ಗಳಿಸಿತು. ಕರ್ತಮಾಡ ತಂಡವು ಬಾಚೋಳೀರವನ್ನು 15 ರನ್‍ಗಳಿಂದ ಮಣಿಸಿತು. ಬಾಚೋಳೀರ 3 ಕ್ಕೆ 44 ರನ್, ಕರ್ತಮಾಡ 4 ಕ್ಕೆ 59 ರನ್ ದಾಖಲಿಸಿತು.

ಮತ್ರಂಡವು ಬಲ್ಯಮೀದೇರವನ್ನು 9 ರನ್‍ಗಳಿಂದ ಸೋಲಿಸಿತು. ಮತ್ರಂಡ 2 ಕ್ಕೆ 65 ರನ್, ಬಲ್ಯಮೀದೇರೀರ 7 ಕ್ಕೆ 56 ರನ್ ಗಳಿಸಿತು.

ಮರುವಂಡವು ಮಲ್ಲೇಂಗಡ ತಂಡವನ್ನು 7 ವಿಕೆಟ್‍ಗಳಿಂದ ಸೋಲಿಸಿತು. ಮಲ್ಲೇಂಗಡ 48 ಕ್ಕೆ ಆಲೌಟ್ ಆಯಿತು. ಮರುವಂಡ 3 ವಿಕೆಟ್ ನಷ್ಟಕ್ಕೆ 53 ರನ್ ಬಾರಿಸಿತು.

ಅಣ್ಣಳಮಾಡ (ಬಿರುನಾಣಿ) ಚೆಪ್ಪುಡೀರ ತಂಡವನ್ನು 10 ವಿಕೆಟ್‍ಗಳಿಂದ ಮಣಿಸಿತು. ಚೆಪ್ಪುಡೀರ 9 ವಿಕೆಟ್‍ಗೆ 39 ರನ್, ಅಣ್ಣಳಮಾಡ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿತು.

ಕರ್ತಮಾಡ, ಅಜ್ಜಿಕುಟ್ಟೀರ ವಿರುದ್ದ 24 ರನ್‍ಗಳ ಗೆಲುವು ದಾಖಲಿಸಿತು. ಅಜ್ಜಿಕುಟ್ಟೀರ 3 ಕ್ಕೆ 86 ರನ್, ಅಜ್ಜಿಕುಟ್ಟೀರ 5 ವಿಕೆಟ್‍ಗೆ 62 ರನ್ ಗಳಿಸಿತು. ಕಲ್ಲೇಂಗಡಕ್ಕೆ ಆಪಟ್ಟೀರ ವಿರುದ್ದ 3 ರನ್‍ಗಳ ರೋಚಕ ಗೆಲುವು ದಕ್ಕಿತು. ಕಲ್ಲೇಂಗಡ 7 ವಿಕೆಟ್ ಕಳೆದುಕೊಂಡು 60 ರನ್, ಆಪಟ್ಟೀರ 7 ಕ್ಕೆ 57 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಬೊಳ್ಯಡ ವಿಪಿನ್, ಪುಟ್ಟಿಚಂಡ ಬಿಪಿನ್, ಚಿಕ್ಕಂಡ ಚರಣ್, ಚಿಯಕ್‍ಪೂವಂಡ ಅನಿಲ್, ಚೆಪ್ಪುಡೀರ ಪ್ರಣವ್, ಬಲ್ಯಮೀದೆರೀರ ಬೋಪಣ್ಣ, ಉದಯಂಡ ಪ್ರಧಾನ್, ಬಲ್ಲಿಮಾಡ ಚೇತನ್, ಬಾಚೋಳೀರ ತಿಲಕ್, ಪುಲಿಯಂಡ ಪೊನ್ನಣ್ಣ, ಮಾಚೇಟೀರ ವಿಕಾಸ್, ಮುಕ್ಕಾಟೀರ ಬೋಪಣ್ಣ, ಆಪಟ್ಟೀರ ನಿತಿನ್, ಮಲ್ಲೇಂಗಡ ನಿಶಾಂತ್ ಹಾಗೂ ತಾತೀರ ಸಜು ಪಂದ್ಯ ಪುರುಷ ಪ್ರಶಸ್ತಿ ಪಡೆದರು.