ಕೂಡಿಗೆ, ಮೇ 6: ಶಿರಂಗಾಲದಿಂದ ಕುಶಾಲನಗರದವರೆಗೆ ಕಳೆದ ಸಾಲಿನಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆದ ಸಂದರ್ಭ ಒಳಚರಂಡಿ ನಿರ್ಮಾಣ ಮಾಡದ ಪರಿಣಾಮ ಕೂಡಿಗೆ-ಕೂಡುಮಂಗಳೂರು ಮಧ್ಯೆ ಕೈಗಾರಿಕಾ ಬಡಾವಣೆಯ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಮಳೆ ಬಂತೆಂದರೆ ಚರಂಡಿಯ ನೀರೆಲ್ಲಾ ರಸ್ತೆಯ ಮೇಲೆ ಹರಿಯುವಂತಾಗಿದೆ.

ಹೆಚ್ಚಿನ ಕಾರ್ಮಿಕರು ಈ ರಸ್ತೆಯ ಬದಿಯಲ್ಲಿ ಸಂಚರಿಸುವದರಿಂದ ನೀರು ಹೆಚ್ಚಾಗಿ ಅನಾಹುತ ತಪ್ಪಿದ್ದಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಥವಾ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಸ್ಥಳ ಪರಿಶೀಲಿಸಿ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.