ನಾಪೆÇೀಕ್ಲು, ಮೇ 7: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‍ಗಳು ಸೇರಿದಂತೆ 20 ತಂಡಗಳು ಮಾತ್ರ ಕಣದಲ್ಲಿ ಉಳಿದಿವೆ. ಬಿದ್ದಾಟಂಡ ಹಾಕಿ ಪಂದ್ಯಾಟಕ್ಕೆ 306 ಕುಟುಂಬ ತಂಡಗಳು ತಮ್ಮ ತಂಡಗಳ ಹೆಸರು ನೊಂದಾವಣೆ ಮಾಡಿಕೊಂಡಿದ್ದವು. ಇವರಲ್ಲಿ ಐದು ತಂಡಗಳು ಪಂದ್ಯಾಟಕ್ಕೆ ಗೈರು ಹಾಜರಾದ ಹಿನ್ನಲೆಯಲ್ಲಿ 301 ಕುಟುಂಬ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಅವರಲ್ಲಿ 20 ತಂಡಗಳು ಮಾತ್ರ ಮುಂದಿನ ಸುತ್ತಿನಲ್ಲಿ ಸೆಣಸಲಿವೆ. ಪ್ರೀಕ್ವಾರ್ಟರ್ ಫೈನಲ್‍ಗೆ ಈಗಾಗಲೇ 12 ತಂಡಗಳು ಪ್ರವೇಶ ಪಡೆದಿದ್ದು, ಇನ್ನು ನಾಲ್ಕು ತಂಡಗಳ ನಿರ್ಧಾರವಾಗಬೇಕಿದೆ.

ಭಾನುವಾರ ನಡೆದ ಕೋಡಿಮಣಿಯಂಡ ಮತ್ತು ಕಳ್ಳಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ಟೈಬ್ರೇಕರ್‍ನಲ್ಲಿ ಕಳ್ಳಿಚಂಡ ತಂಡವನ್ನು 7-6 ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಜಿ ಚಾಂಪಿಯನ್ ಕೂತಂಡ ಮತ್ತು ಮಚ್ಚಾಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡವು 1-0 ಗೋಲಿನ ಅಂತರದಿಂದ ಮಚ್ಚಾಮಾಡ ತಂಡವನ್ನು ಪರಾಭವಗೊಳಿಸಿತು. ಕೂತಂಡ ಸಂತೋಷ್ ತಂಡದ ಪರ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಪ್ಪಂಡ (ಕೈಕೇರಿ) ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವು 2-0 ಗೋಲಿನ ಅಂತರದಿಂದ ಕುಪ್ಪಂಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ನೆಲ್ಲಮಕ್ಕಡ ತಂಡದ ಪರ ಅಯ್ಯಪ್ಪ, ಸೋಮಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಚೆಪ್ಪುಡಿರ ಮತ್ತು ಚೋಕಿರ ತಂಡಗಳ ನಡುವಿನ ಪಂದ್ಯ ಏಕಪಕ್ಷೀಯವಾಗಿತ್ತು. ಚೆಪ್ಪುಡಿರ ತಂಡವು 6-0 ಗೋಲಿನ ಭಾರಿ ಅಂತರದಿಂದ ಚೋಕಿರ ತಂಡವನ್ನು ಪರಾಭವಗೊಳಿಸಿತು. ಚೆಪ್ಪುಡಿರ ತಂಡದ ಪರ ಸೋಮಣ್ಣ, ನರೇನ್ ಕಾಳಪ್ಪ ತಲಾ ಎರಡೆರಡು, ಸುಮನ್ ಮತ್ತು ಚೇತನ್ ತಲಾ ಒಂದೊಂದು ಗೋಲು ದಾಖಲಿಸಿದರು. ಚೇಂದಂಡ ಮತ್ತು ಕಂಗಾಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೇಂದಂಡ ತಂಡವು 2-0 ಗೋಲಿನ ಅಂತರದಿಂದ ಕಂಗಾಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೇಂದಂಡ ತಂಡದ ಪರ ಸನ್ನು, ತಿಮ್ಮಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಚೋಯಮಾಡಂಡ ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೆಕ್ಕೆರ ತಂಡವು 5-1 ಗೋಲಿನ ಅಂತರದಿಂದ ಚೋಯಮಾಡಂಡ ತಂಡವನ್ನು ಮಣಿಸಿತು. ಚೆಕ್ಕೆರ ತಂಡದ ಪರ ಆದರ್ಶ್ ಎರಡು, ಸಜನ್, ಆಕಾಶ್, ಪೂವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಚೋಯಮಾಡಂಡ ತಂಡದ ಪರ ಸನ್ನು ಒಂದು ಗೋಲು ದಾಖಲಿಸಿದರು.