ಮಡಿಕೇರಿ ಮೇ 8 :ದಕ್ಷಿಣ ಗಂಗೆ ಕಾವೇರಿಯ ಸಂರಕ್ಷಣೆÉಗಾಗಿ ಕಾವೇರಿ ಮತ್ತು ಅದರ ಉಪನದಿಗಳಿಗೆ ‘ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನಮಾನ’ ಒದಗಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗೆ, ಯಮುನೆ ಮತ್ತು ನರ್ಮದೆ ಜೀವನದಿಗಳಿಗೆ ಅನುಕ್ರಮವಾಗಿ ಉತ್ತರಖಂಡ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರ ಈಗಾಗಲೆ ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನ ಮಾನ (ಲಿವಿಂಗ್ ಎಂಟಿಟೀಸ್ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ಎ ಲೀಗಲ್ ಪರ್ಸನ್)ವನ್ನು ನೀಡಿದೆ. ಜೀವನದಿ ಕಾವೇರಿಗೂ ಅಂತಹ
(ಮೊದಲ ಪುಟದಿಂದ) ಸ್ಥಾನಮಾನ ನೀಡಲು ರಾಷ್ಟ್ರಪತಿಗಳು ತುರ್ತಾಗಿ ಸುಗ್ರಿವಾಜ್ಞೆ ಹೊರಡಿಸಬೇಕು. ಇಲ್ಲವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ರವರು ಮುಂದಿನ ಅಧಿವೇಶನದಲ್ಲಿ ಕೇಂದ್ರ ಶಾಸನ ರಚಿಸಬೇಕೆಂದು ಜ್ಞಾಪನಾ ಪತ್ರ ಸಲ್ಲಿಸಿರುವದಾಗಿ ತಿಳಿಸಿದರು.
ಜೀವನದಿ ಕಾವೇರಿ ಇಂದು ಮಾನವ ಮತ್ತು ಆಡಳಿತಗಾರರ ಸ್ವಯಂಕೃತ ಆಕ್ರಮಣದ ಮೂಲಕ ನಡೆಯುತ್ತಿರುವ ನಿರಂತರ ದೌರ್ಜನ್ಯದಿಂದಾಗಿ ಸೊರಗಿದ್ದಾಳೆ. ಅದಕ್ಕಾಗಿ ಕೇಂದ್ರ ಸರ್ಕಾರವೇ ತುರ್ತಾಗಿ ಮೇಲ್ಕಂಡ 3 ನದಿಗಳಿಗೆ ನೀಡಿದ ‘ಜೀವಂತ ಮಾನವನ ಶಾಸನಬದ್ದ ಸ್ಥಾನಮಾನ’ವನ್ನು ಕಾವೇರಿ ನದಿಗೂ ಕಲ್ಪಿಸಲು ಕೇಂದ್ರ ಶಾಸನ ರಚಿಸಲ್ಪಟ್ಟರೆ ಮಾತ್ರ ಕಾವೇರಿ ಉಳಿದು ಬಾಳಿ ಸರ್ವರನ್ನು ಬಾಳಿಸಲು ಸಾಧ್ಯವಾಗಲಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.
ಗಂಗೆ, ಯಮುನಾ ಮತ್ತು ನರ್ಮದೆ ಜೀವನದಿಗಳಿಗೆ ಅನುಕ್ರಮವಾಗಿ ಈ ಸ್ಥಾನ ಉತ್ತರಖಂಡ ರಾಜ್ಯ ಸರ್ಕಾರ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರ ನೀಡಿವೆ. ವೇದ ಕಾಲದ 7 ಪವಿತ್ರ ಜೀವನದಿಗಳ ಪೈಕಿ ದಕ್ಷಿಣ ಗಂಗೆ ಕಾವೇರಿಯು ಒಂದಾಗಿದ್ದು ಇದರ ರಕ್ಷಣೆ ಅಗತ್ಯ ಎಂಬದನ್ನು ಸರಕಾರಗಳು ಮನಗಾಣಬೇಕು ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎನ್ಸಿ ಪ್ರಮುಖರಾದ ಮೂಕೊಂಡ ದಿಲೀಪ್, ಕಲಿಯಂಡ ಪ್ರಕಾಶ್, ಅರೆÉಯಡ ಗಿರೀಶ್ ಹಾಗೂ ಮಂದಪ್ಪಂಡ ಮನೋಜ್ ಮಂದಣ್ಣ ಉಪಸ್ಥಿತರಿದ್ದರು. .