ಮಡಿಕೇರಿ, ಮೇ 8: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ವಾರ್ಡ್ ಸಭೆಗಳು ತಾ. 9 ಹಾಗೂ 10 ರಂದು ನಡೆಯಲಿದೆ. ತಾ. 9 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಸೂರ್ಲಬ್ಬಿ ಸಮುದಾಯ ಭವನದಲ್ಲಿ ಮಾಯಮ್ಮ ಅವರ ಅಧ್ಯಕ್ಷತೆಯಲ್ಲಿ, ತಾ. 10 ರಂದು ಗರ್ವಾಲೆ ಗ್ರಾ.ಪಂ. ಸಭಾಂಗಣದಲ್ಲಿ ಕೆ.ಎಂ. ಸುಭಾಶ್ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಶಿರಂಗಳ್ಳಿ ಸಮುದಾಯ ಭವನದಲ್ಲಿ ಹೆಚ್.ಕೆ. ನಳಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಗ್ರಾಮ ಸಭೆ: ಗ್ರಾಮ ಸಭೆಯು ತಾ. 12 ರಂದು ಬೆಳಿಗ್ಗೆ 10.30 ಗಂಟೆಗೆ ಗರ್ವಾಲೆ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಎಂ. ಸುಭಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಹ್ವಾನಿತರಾಗಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷೆ ಎಂ.ಬಿ. ಅಭಿಮನ್ಯುಕುಮಾರ್, ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಕೆ. ಮೂರ್ತಿ ಪಾಲ್ಗೊಳ್ಳಲಿದ್ದಾರೆ.