ಮಡಿಕೇರಿ, ಮೇ 8: ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ 20ರ ಸಂಪಿಗೆಕಟ್ಟೆಯಲ್ಲಿ ರಸ್ತೆ ಹದಗೆಟ್ಟಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ ಎಂದು ವಾರ್ಡ್ ನಿವಾಸಿಗಳು ಅವಲತ್ತುಕೊಂಡಿದ್ದಾರೆ.

ಈ ಪ್ರದೇಶದಲ್ಲಿ 10-15 ಮನೆಗಳಿದ್ದು, ರಸ್ತೆಗೆ ಇನ್ನೂ ಕೂಡ ಡಾಮರೀಕರಣವಾಗಿಲ್ಲ. ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸರಬರಾಜಾಗದೆ ಪಕ್ಕದ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ನೀರು ತರುವಂತಾಗಿದೆ. ಬೀದಿ ದೀಪಗಳು ಕೂಡ ಉರಿಯುತ್ತಿಲ್ಲ. ಕಸ ವಿಲೇವಾರಿಯ ಟ್ರ್ಯಾಕ್ಟರ್ ಕೂಡ ಪ್ರದೇಶಕ್ಕೆ ಬರುತ್ತಿಲ್ಲ. ಈ ಬಗ್ಗೆ ವಾರ್ಡ್‍ನ ಸದಸ್ಯರ ಗಮನಕ್ಕೆ ತಂದರೆ ಸ್ಪಂದಿಸುತ್ತಿಲ್ಲ. ಬದಲಿಗೆ ಸದಸ್ಯರ ಪತಿ ಆಗಮಿಸುತ್ತಾರೆ. ಅವರೊಂದಿಗೆ ಸಮಸ್ಯೆ ಹೇಳಿಕೊಳ್ಳುವದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿಕೊಡುವಂತೆ ಅಲ್ಲಿನ ನಿವಾಸಿಗಳಾದ ಚೋಂದಮ್ಮ, ಬದ್ರುನ್ನಿಸ, ಮಾಚಮ್ಮ, ಪವಿತಾ ಅವರುಗಳು ಆಗ್ರಹಿಸಿದ್ದಾರೆ.