ಬೆಂಗಳೂರು, ಮೇ 8 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ಗೆ ವಿಶ್ವದಲ್ಲೇ ಅತ್ಯಂತ ಇಷ್ಟವಾದ ಸ್ಥಳ ಕೊಡಗು ಅಂತೆ. ಹೌದು! ಸ್ವತಃ ಡಿವಿಲಿಯರ್ಸ್ ಅವರೇ ಆರ್ಸಿಬಿ ಇನ್ ಸೈಡರ್ ಶೋ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಕೊಡಗು ತಮ್ಮ ಇಷ್ಟವಾದ ಸ್ಥಳ ಎಂದು ಹೇಳುವ ಮೂಲಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಎಬಿಡಿ ಕರ್ನಾಟಕದ ಹಲವು ಊರುಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಮಂಗಳೂರು ಹಾಗೂ ರಾಯಚೂರು ಸಹ ತಮಗೆ ಇಷ್ಟ ಎಂದು ಹೇಳಿದ್ದಾರೆ. ಜತೆಗೆ ಕರ್ನಾಟಕದ ವರನಟ ಡಾ. ರಾಜ್ ಕುಮಾರ್ ಅವರ ಲವ್ ಮೀ ಆರ್ ಹೇಟ್ ಮೀ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ.