ಮಡಿಕೇರಿ, ಮೇ 8: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಹಾಗೂ ಸಮಾಜದ ಸುಂಟಿಕೊಪ್ಪ ಹೋಬಳಿ ಸಮಿತಿ ವತಿಯಿಂದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಸುಂಟಿಕೊಪ್ಪದ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೊಗೇರ ಸೇವಾ ಸಮಾಜದ ಗೌರವಾಧ್ಯಕ್ಷರು ಹಾಗೂ ಜಿಲ್ಲಾ ತುಳುವೆರ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಜಿಲ್ಲೆ ಯಲ್ಲಿ ಎಲ್ಲಾ ಸಮಾಜಗಳ ಬಾಂಧವರು ಕ್ರೀಡಾಕೂಟದ ಮೂಲಕ ಸಂಘಟಿತರಾಗುತ್ತಿದ್ದು, ಈ ರೀತಿಯ ಒಗ್ಗಟ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯುವ ಜನತೆ ಕ್ರೀಡಾಕೂಟ ದೊಂದಿಗೆ ಸಮಾಜದ ಬೆಳವಣಿಗೆಗೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಯುವ ಮೊಗೇರ ಸಮಾಜದ

(ಮೊದಲ ಪುಟದಿಂದ) ಅಧ್ಯಕ್ಷ ಪಿ.ಕೆ. ಚಂದ್ರು ಮಾತನಾಡಿ, ಮೊಗೇರ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸರಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಕ್ಕೇರಲು ಎಲ್ಲರೂ ಪ್ರಯತ್ನಿಸಬೇಕು. ಮೊಗೇರ ಜಾತಿ ದೃಢೀಕರಣ ಪತ್ರದ ಗೊಂದಲ ಇನ್ನೂ ಕೂಡ ಮುಂದುವರೆದಿದ್ದು, ಹೋರಾಟದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಜಿಲ್ಲಾ ಸಮಿತಿ ಸದಸ್ಯರಾದ ಎಂ.ಪಿ. ದೇವಪ್ಪ ಮಾತನಾಡಿ, ಮೊಗೇರ ಸಮಾಜದ ಯುವ ಸಮೂಹ ಸಂಘಟಿತರಾಗ ಬೇಕೆಂದು ಕರೆ ನೀಡಿದರು. ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಯು. ಚಂದ್ರ, ಸದಸ್ಯರಾದ ಗೌತಮ್ ಶಿವಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಎಂ. ದಾಮೋದರ, ವೀರಾಜಪೇಟೆ ತಾಲೂಕು ಅಧ್ಯಕ್ಷ ಜಿ. ಮೋಹನ್, ಜಿಲ್ಲಾ ಖಜಾಂಚಿ ಪಿ.ಕೆ. ಮಂಜು, ಪ್ರಮುಖರಾದ ಶೇಷಪ್ಪ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಕ್ರೀಡಾಧ್ಯಕ್ಷ ಸಂಜೀವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೊಗೇರ ಸಮಾಜದ ಹಿರಿಯರಾದ ಕರಿಯ ಮೊಗೇರ ಉದ್ಘಾಟಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕ್ರೀಡಾಪಟುಗಳು ಹಾಗೂ ಸಮಾಜದ ಬಾಂಧವರು ಸುಂಟಿಕೊಪ್ಪದಲ್ಲಿ ಮೆರವಣಿಗೆ ನಡೆಸಿದರು. ಜಿಲ್ಲಾ ಸಮಿತಿ ಸದಸ್ಯ ಪಿ.ಬಿ. ಜನಾರ್ಧನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.