ವೀರಾಜಪೇಟೆ, ಮೇ 8: ಸಮುದಾಯದ ಕ್ರೀಡೋತ್ಸವದಿಂದ ಒಮ್ಮತವನ್ನು ಸಾಧಿಸಿದರೂ ಜನಾಂಗದ ಪ್ರತಿಯೊಂದು ಕುಟುಂಬದ ನೋವು ನಲಿವುಗಳಿಗೆ ಸವಿತಾ ಸಮಾಜ ಸಂಘಟನೆ ನೇರವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಕೊಡಗು ಜಿಲ್ಲಾ ಮಾರ್ಕೆಟಿಂಗ್ ಫೆಡರೇಶನ್‍ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ಸವಿತಾ ಸಮಾಜದಿಂದ ಪ್ರಪ್ರಥಮವಾಗಿ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಧು ದೇವಯ್ಯ ಕ್ರೀಡೋತ್ಸವ ಮನಸ್ಸಿಗೆ ಉಲ್ಲಾಸ, ಮನರಂಜನೆ ನೀಡಲಿದೆ. ದೈಹಿಕವಾಗಿಯೂ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ ಎಂದರು.

ಸಭೆಯನ್ನುದ್ದೇಶಿಸಿ ಬಿ.ಜೆ.ಪಿ. ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಜೋಕೀಂ ರಾಡ್ರಿಗಸ್, ಕೈಕೇರಿ ಸವಿತಾ ಸಮಾಜದ ವಿ.ಜಿ.ಕಿರಣ್ ಮಾತನಾಡಿದರು.

ಸವಿತಾ ಸಮಾಜದ ತಾಲೂಕು ಸಮಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಎನ್.ವೆಂಕಟೇಶ್, ಉಪಾಧ್ಯಕ್ಷ ದೊರೇಶ್, ನಗರ ಸಮಿತಿಯ ದೇವರಾಜ್ ತಾಲೂಕು ಪ್ರತಿನಿಧಿ ದಿನೇಶ್, ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಎಂ.ಪಿ. ಮಧು, ಪ್ರತಿನಿಧಿ ಎಂಬಿ.ಚರಣ್, ವೀರಾಜಪೇಟೆಯ ಸರ್ವ ಜನಾಂಗ ಸಂಘಟನೆಯ ಅಧ್ಯಕ್ಷ ಪಿ.ಎ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಸಂಘಟನೆಯ ಉಪಾಧ್ಯಕ್ಷ ಪಿ.ರಾಜ, ಪ್ರಧಾನ ಕಾರ್ಯದರ್ಶಿ ಈಶ್ವರ್, ಕಾರ್ಯದರ್ಶಿ ಅನಿಲ್ ಕುಮಾರ್ ಅಪ್ಪು, ಸಹ ಕಾರ್ಯದರ್ಶಿ ಬಿ.ಎಂ. ಕಿರಣ್ ಹಾಗೂ ಖಜಾಂಚಿ ಬಿ.ಆರ್.ಸುಭಾಷ್ ಹಾಜರಿದ್ದರು.

ಸವಿತಾ ಸಮಾಜದ ಕ್ರೀಡೋತ್ಸವ ಪ್ರಯುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಮಧುದೇವಯ್ಯ ಬ್ಯಾಟಿಂಗ್ ಮಾಡಿ, ಪಿ.ಎ.ಮಂಜುನಾಥ್ ಬೌಲಿಂಗ್ ಮಾಡಿ ಉದ್ಘಾಟಿಸಿದರು. ಸವಿತಾ ಸಮಾಜದ ಕ್ರೀಡೋತ್ಸವದ ಲಾಂಛನವನ್ನು ಜೋಕೀಂ ರಾಡ್ರಿಗಸ್ ಬಿಡುಗಡೆ ಮಾಡಿದರು. ಸಮಾರೋಪ ತಾ. 9ರಂದು (ಇಂದು) ಜರುಗಲಿದೆ.