ಬಾಳೆಲೆ, ಮೇ 9: ಬಾಳೆಲೆ ಹೋಬಳಿಗೆ ಸಂಬಂಧಿಸಿದಂತೆ ಬಾಳೆಲೆಯಲ್ಲಿರುವ ಕಂದಾಯ ಕಚೇರಿ ಕಟ್ಟಡ ದುಸ್ಥಿತಿಯಲ್ಲಿರುವ ವಿಚಾರ ಇಂದು ನಡೆದ ನಿಟ್ಟೂರು ಗ್ರಾಮ ಸಭೆಯಲ್ಲಿ ಪ್ರಸ್ತಾಪಗೊಂಡು ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ‘ಶಕ್ತಿ’ಯಲ್ಲಿ ತಾ. 8 ರಂದು ಪ್ರಕಟಗೊಂಡಿದ್ದ ವರದಿಯನ್ನು ಗ್ರಾಮಸ್ಥರು ಸಭೆಯಲ್ಲಿ ಚರ್ಚಿಸಿದರು.ಪಂಚಾಯಿತಿ ಅಧ್ಯಕ್ಷ ಕಡೇಮಾಡ ಅನಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪಗೊಂಡವು. ವಸತಿ ಯೋಜನೆಗೆ ಸಂಬಂಧಿಸಿದಂತೆ ಪಿಡಿಓ ಮೇಲೆ ಆಕ್ಷೇಪ - ಆರೋಪ ಕೇಳಿ ಬಂತು. ಅಕ್ರಮ ಮದ್ಯ ಮಾರಾಟವಾಗುತ್ತಿರುವ

(ಮೊದಲ ಪುಟದಿಂದ) ಬಗ್ಗೆ ತೀತಿರ ಚೋಂದಮ್ಮ ನೇರ ಆರೋಪ ಮಾಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಬೆಳೆ ಕಾಲಂನಲ್ಲಿ ಬೆಳೆ ಅದಲು ಬದಲಾಗಿರುವದು, ಬೆಳೆ ನಮೂದಿಸದಿರುವ ಕುರಿತು ಸಾರ್ವಜನಿಕರು ಆಕ್ಷೇಪಿಸಿದರು. ಕೊಲ್ಲಿಹಾಡಿ ಗಿರಿಜನರಿಗೆ ನೀರು ವ್ಯವಸ್ಥೆಗೆ ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿರುವ ಕುರಿತು ಅಸಮಾಧಾನ ಕೇಳಿ ಬಂದಿತು.

ಪೊನ್ನಂಪೇಟೆ ತಾಲೂಕು ರಚನೆಗೆ ನಿರ್ಣಯ

ಸಭೆಯಲ್ಲಿ ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ನಿರ್ಣಯ ಕೈಗೊಳ್ಳುವದರೊಂದಿಗೆ ಕಸ್ತೂರಿ ರಂಗನ್ ವರದಿಯನ್ನೂ ವಿರೋಧಿಸ ಲಾಯಿತು. ಗಿರಿಜನ ಮುಖಂಡ ದಾಸಪ್ಪ ಮಾತನಾಡಿ, ಗಿರಿಜನರಿಗೆ ಅರಣ್ಯದಂಚಿನಲ್ಲಿ ಜಾಗ ನೀಡಬೇಕು. ಈಗ ಮಾಡಿರುವ ಸರ್ವೆ ಕಾರ್ಯ ಸರಿ ಇಲ್ಲ ಮರು ಸರ್ವೆ ನಡೆಸಬೇಕೆಂದು ಒತ್ತಾಯಿಸಿದರು. ನೀರಿನ ವ್ಯವಸ್ಥೆಗೆ ಮೀಟರ್ ಅಳವಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಗ್ರಾಮ ಸಭೆಗಳಿಗೆ ಗ್ರಾಮದ ಜನರು ಹೆಚ್ಚಾಗಿ ಆಗಮಿಸಬೇಕು. ಬೇಡಿಕೆಗಳ ಬಗ್ಗೆ ಚರ್ಚಿಸಬೇಕೆಂದರು. ಸಭೆಯಲ್ಲಿ ಉಪಾಧ್ಯಕ್ಷ ಪವನ್ ಚಿಟ್ಟಿಯಪ್ಪ, ಸದಸ್ಯರಾದ ಮಚ್ಚಾಮಾಡ ಗಂಗಮ್ಮ,ದೇವಿ, ಭಾಗ್ಯ, ನೋಡಲ್ ಅಧಿಕಾರಿ ಭವಿಷ್ಯಕುಮಾರ್ ಹಾಜರಿದ್ದರು.