ಮಡಿಕೇರಿ, ಮೇ 9: ಮಡಿಕೇರಿಯ ಬಾಲಕರ ಬಾಲಮಂದಿರ ಹಾಗೂ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅಕ್ಕ - ತಂಗಿಯರು ಹಾಗೂ ಓರ್ವ ಸೋದರ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.ಅಮ್ಮತ್ತಿ ಮೂಲದವರಾದ ಕಾರ್ಮಿಕ ಕುಟುಂಬಕ್ಕೆ ಸೇರಿದ ಒಂದೇ ಕುಟುಂಬದ ಈ ಮೂವರು ಒಟ್ಟಿಗೆ ಪರಾರಿಯಾಗಿದ್ದಾರೆ. ಬಾಲಕಿಯರ ಬಾಲಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮೇ 3 ರಿಂದ ಬೇಸಿಗೆ ಶಿಬಿರ ಆರಂಭಿಸಲಾಗಿದ್ದು, ಇಲ್ಲಿ ಬಾಲಕ - ಬಾಲಕಿಯರ ಬಾಲಮಂದಿರ ಹಾಗೂ ಬಾಲಭವನದ ಮಕ್ಕಳು ಮತ್ತು ಹೊರಗಿನ ಮಕ್ಕಳು ಸೇರಿ ಸುಮಾರು 90 ಮಕ್ಕಳು ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದರು.

ಈ ಮೂವರು ಮಕ್ಕಳ ಪೈಕಿ 12 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ

(ಮೊದಲ ಪುಟದಿಂದ) ಕಳೆದ ಎರಡೂವರೆ ತಿಂಗಳ ಹಿಂದೆ ಇಲ್ಲಿ ಆಶ್ರಯ ಪಡೆದಿದ್ದರು. ಕಳೆದ 10 ದಿನದ ಹಿಂದೆ ಇವರ ಹಿರಿಯ ಸಹೋದರಿ (14 ವರ್ಷ) ಸೇರ್ಪಡೆಗೊಂಡಿದ್ದಾಳೆ. ಈ ಶಿಬಿರದ ಮೂಲಕ ಮೂವರು ಒಟ್ಟಾಗಿದ್ದು, ನಿನ್ನೆ ಸಮಯ ಸಾಧಿಸಿ ತಡೆಗೋಡೆ ಎಗರಿ ಪರಾರಿಯಾಗಿರುವದಾಗಿ ತಿಳಿದು ಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.