ಗೋಣಿಕೊಪ್ಪಲು : ಬಾಳೆಲೆ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಆತಿಥೇಯ ಅಳಮೇಂಗಡ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿಗೆ ದಾಪುಗಾಲು ಹಾಕುವ ಸೂಚನೆ ನೀಡಿದೆ.
ಅಳಮೇಂಗಡವು ಪುಡಿಯಂಡ ವಿರುದ್ದ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಸಂಚಲನ ಮೂಡಿಸಿದೆ. ಪುಡಿಯಂಡ ತಂಡವು ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 43 ರನ್ ದಾಖಲಿಸಿತು. ಅಳಮೇಂಗಡವು 3 ವಿಕೆಟ್ ಕಳೆದುಕೊಂಡು 7.1 ಓವರ್‍ಗಳಲ್ಲಿ 44 ರನ್ ದಾಖಲಿಸಿ ಗೆಲುವಿನ ನಗೆ ಬೀರಿತು. ಪುಡಿಯಂಡ ಪೊನ್ನಣ್ಣ 15 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.
ಅಚ್ಚಪಂಡ ತಂಡವು ಅಮ್ಮತ್ತಿ ಕುಟ್ಟಂಡ ತಂಡವನ್ನು 28 ರನ್‍ಗಳಿಂದ ಮಣಿಸಿತು. ಅಚ್ಚಪಂಡ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಕುಟ್ಟಂಡ 3 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕುಟ್ಟಂಡ ಸಚಿನ್ 15 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.
ಪಂದ್ಯಂಡ ತಂಡವು ಮಂಡಂಗಡ ತಂಡವನ್ನು 8 ವಿಕೆಟ್‍ಗಳಿಂದ ಸೋಲಿಸಿತು. ಮಂಡಂಗಡ 6 ವಿಕೆಟ್ ನಷ್ಟಕ್ಕೆ 37 ರನ್, ಪಂದ್ಯಂಡ 3 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಬಾರಿಸಿ ಗೆಲುವು ಪಡೆಯಿತು. ಮಂಡಂಗಡ ಕ್ರಿತನ್ 22 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮಚ್ಚಮಾಡ ತಂಡ ನಂಬುಡುಮಾಡ ವಿರುದ್ದ 47 ರನ್‍ಗಳಿಂದ ಗೆಲುವು ಪಡೆಯಿತು. ಮಚ್ಚಮಾಡ 7 ವಿಕೆಟ್ ನಷ್ಟಕ್ಕೆ 108 ರನ್ ಮೂಲಕ ದೊಡ್ಡ ಮೊತ್ತದ ಗುರಿ ನೀಡಿತು. ನಂಬುಡುಮಾಡ 5 ವಿಕೆಟ್ ಕಳೆದುಕೊಂಡು 60 ರನ್ ಬಾರಿಸಿ ಸೋಲನುಭವಿಸಿತು. ನಂಬುಡುಮಾಡ ಅಪ್ಪಣ್ಣ ಪಂದ್ಯ ಶ್ರೇಷ್ಠರಾದರು.
ಮುಂಡಚಾಡೀರ ತಂಡವು ಮರುವಂಡ ವಿರುದ್ದ 34 ರನ್‍ಗಳ ಮಚ್ಚಮಾಡ ತಂಡ ನಂಬುಡುಮಾಡ ವಿರುದ್ದ 47 ರನ್‍ಗಳಿಂದ ಗೆಲುವು ಪಡೆಯಿತು. ಮಚ್ಚಮಾಡ 7 ವಿಕೆಟ್ ನಷ್ಟಕ್ಕೆ 108 ರನ್ ಮೂಲಕ ದೊಡ್ಡ ಮೊತ್ತದ ಗುರಿ ನೀಡಿತು. ನಂಬುಡುಮಾಡ 5 ವಿಕೆಟ್ ಕಳೆದುಕೊಂಡು 60 ರನ್ ಬಾರಿಸಿ ಸೋಲನುಭವಿಸಿತು. ನಂಬುಡುಮಾಡ ಅಪ್ಪಣ್ಣ ಪಂದ್ಯ ಶ್ರೇಷ್ಠರಾದರು.
ಮುಂಡಚಾಡೀರ ತಂಡವು ಮರುವಂಡ ವಿರುದ್ದ 34 ರನ್‍ಗಳ ಗೆಲುವು ಪಡೆಯಿತು. ಮುಂಡಚಾಡೀರ 2 ಕ್ಕೆ 97 ರನ್, ಮರುವಂಡ ತಂಡವು 6 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ಸೊಲೊಪ್ಪಿಕೊಂಡಿತು. ಮರುವಂಡ ಭವಿಶ್ 20 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಅಮ್ಮಚ್ಚಿಮಣಿಯಂಡ ತಂಡವು ಬೊಟ್ಟಂಗಡ ತಂಡವನ್ನು 5 ವಿಕೆಟ್‍ಗಳಿಂದ ಸೋಲಿಸಿತು. ಬೊಟ್ಟಂಗಡ 9 ಕ್ಕೆ 65 ರನ್, ಅಮ್ಮಚ್ಚಿಮಣಿಯಂಡ 5 ವಿಕೆಟ್ ನಷ್ಟಕ್ಕೆ 67 ರನ್ ಬಾರಿಸಿತು. ಬೊಟ್ಟಂಗಡ ಪೆಮ್ಮಯ್ಯ 25 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಚೇರಂಡ ತಂಡವು ಚೇಂದೀರ ವಿರುದ್ದ 5 ವಿಕೆಟ್ ಗೆಲುವು ಪಡೆಯಿತು. ಚೇಂದೀರ 9 ವಿಕೆಟ್ ನಷ್ಟಕ್ಕೆ 51 ರನ್, ಚೇರಂಡ 5 ವಿಕೆಟ್ ಕಳೆದುಕೊಂಡು 56 ರನ್ ಬಾರಿಸಿತು. ಚೇಂದೀರ ವಿವೇಕ್ 15 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.